Viral Video: ಹೊಲದಲ್ಲಿ ರೈತನಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್; ವಿಡಿಯೋ ವೈರಲ್

ವೈರಲ್​​ ಆಗಿರುವ ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು. ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಹೊಲದಲ್ಲಿ ರೈತನಂತೆ ಬೆಳೆ ಕೊಯ್ಲು ಮಾಡುತ್ತಿರುವ ರೋಬೋಟ್; ವಿಡಿಯೋ ವೈರಲ್

Updated on: Sep 22, 2024 | 3:47 PM

ಇದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾಲ. ಈಗ ಎಲ್ಲವು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮನುಷ್ಯರನ್ನು ಮೀರಿಸುವಂತೆ ರೋಬೋಟ್ ಕೆಲಸ ಮಾಡುತ್ತಿದೆ. ಇದೀಗ ಕೃಷಿ ಕ್ಷೇತ್ರಕ್ಕೂ ರೋಬೋಟ್ ಲಗ್ಗೆ ಇಟ್ಟಿದ್ದು, ಹೊಲದಲ್ಲಿ ರೈತನಂತೆ ರೋಬೋಟ್ ದುಡಿಯುವ ವಿಡಿಯೊವೊಂದು ವೈರಲ್​​ ಆಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ರೋಬೋಟ್ ರೈತನನ್ನೇ ಮೀರಿಸುವಂತೆ ಹೊಲದಲ್ಲಿ ದುಡಿಯುತ್ತಿರುವುದನ್ನು ಕಾಣಬಹುದು. ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಬೆಳೆ ಕೊಯ್ಲು ಹೀಗೆ ಒಬ್ಬ ರೈತ ಹೊಲದಲ್ಲಿ ಏನೆಲ್ಲ ಕೆಲಸ ಮಾಡಬಲ್ಲನೋ ಅದೆಲ್ಲವನ್ನೂ ಈ ರೋಬೋಟ್‌ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಬೀದಿ ಬೀದಿ ಚಿಂದಿ ಆಯುತ್ತಾ ತಿಂಗಳಿಗೆ 1.5 ಲಕ್ಷ ರೂ. ಸಂಪಾದಿಸುತ್ತಾನೆ ಈ ವ್ಯಕ್ತಿ

@InterestingSTEM ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಕೆಲವು ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ