Video Viral: ಬೀದಿ ಬೀದಿ ಚಿಂದಿ ಆಯುತ್ತಾ ತಿಂಗಳಿಗೆ 1.5 ಲಕ್ಷ ರೂ. ಸಂಪಾದಿಸುತ್ತಾನೆ ಈ ವ್ಯಕ್ತಿ
ಚಿಂದಿ ಆಯುತ್ತಿರುವ ವ್ಯಕ್ತಿಯೊಬ್ಬನ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈತ ಒಂದು ದಿನದಲ್ಲಿ ಸಂಪಾದಿಸುವ ದುಡ್ಡು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು "ಆಫೀಸ್ ಕೆಲಸ ಬಿಟ್ಟು ಚಿಂದಿ ಆಯಲು ಪ್ರಾರಂಭಿಸುವ" ಎಂದು ಕಾಮೆಂಟ್ ಮಾಡಿದ್ದಾರೆ.
ಬೀದಿ ಬೀದಿ ಅಲೆಯುತ್ತಾ ಚಿಂದಿ ಆಯುತ್ತಿರುವವರನ್ನು ಕಂಡರೆ ಒಂದು ಕ್ಷಣ ಅವರ ಪರಿಸ್ಥಿತಿ ಕಂಡು ಬೇಜಾರಾಗುವುದು ಖಂಡಿತಾ. ಅಯ್ಯೋ.. ಎಷ್ಟು ಕಷ್ಟ ಪಟ್ಟು ಜೀವನ ಸಾಗಿಸುತ್ತಿದ್ದಾರೆ ಎಂದು ಅನಿಸುವುದು ಸಹಜ. ಆದರೆ ಇದೀಗ ಬೀದಿ ಬೀದಿ ಚಿಂದಿ ಆಯುತ್ತಿರುವ ವ್ಯಕ್ತಿಯೊಬ್ಬನ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಈತ ಒಂದು ದಿನದಲ್ಲಿ ಸಂಪಾದಿಸುವ ದುಡ್ಡು ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
@D3vilsCall ಟ್ಟಟರ್ ಖಾತೆಯಲ್ಲಿ ಸೆಪ್ಟೆಂಬರ್ 19ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡು ದಿನದಲ್ಲಿ 5ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು “ಆಫೀಸ್ ಕೆಲಸ ಬಿಟ್ಟು ಚಿಂದಿ ಆಯಲು ಪ್ರಾರಂಭಿಸುವ” ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Living out of Matrix and avoiding taxes 😭 pic.twitter.com/YBEVutknlr
— NIKHIL MISHRA (@D3vilsCall) September 19, 2024
ಇದನ್ನೂ ಓದಿ: ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ಚಿಂದಿ ಆಯುವ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ವ್ಯಕ್ತಿಯೊಬ್ಬ ಮಾತಾನಾಡಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ನೀವು ಎಷ್ಟು ಸಂಪಾದಿಸುತ್ತೀರಿ ಎಂದು ಈತ ಕೇಳಿದಾಗ, ಚಿಂದಿ ಆಯುವ ವ್ಯಕ್ತಿ ದಿನಕ್ಕೆ 5 ಸಾವಿರ ರೂಪಾಯಿ ಗಳಿಸುತ್ತೇನೆ ಎಂದು ಹೇಳುತ್ತಾನೆ. ಈ ಉತ್ತರವನ್ನು ಕೇಳಿ ವಿಡಿಯೋ ಮಾಡುವ ವ್ಯಕ್ತಿ ದಿಗ್ಭ್ರಮೆಗೊಂಡು ತಕ್ಷಣ ಅಲ್ಲಿಂದ ಹೊರಟು ಹೋಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ