Viral Video: ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ ಮಾಡಿದ ವಧು; ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರರು ಮಂಟಪದಲ್ಲಿ ಕುಳಿತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಯುವತಿಯೊಬ್ಬಳು ವರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಿದ್ದಾಳೆ. ಇದನ್ನು ನೋಡಿದ ವಧು ಕೋಪಗೊಂಡು ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವೊಂದು ಮದುವೆಯ ಸುಂದರ ಕ್ಷಣಗಳನ್ನು ಸೆರೆಹಿಡಿದ ವಿಡಿಯೊಗಳಿದ್ದರೆ, ಇನ್ನೂ ಕೆಲವು ಮಂಟಪದಲ್ಲಿ ಜಗಳ ಹೊಡೆದಾಟದಂತಹ ವಿಡಿಯೋಗಳು ಕೂಡ ಹರಿದಾಡುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋವನ್ನು ಎಲ್ಲೆಡೆ ಭಾರೀ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರರು ಮಂಟಪದಲ್ಲಿ ಕುಳಿತಿರುವುದನ್ನು ಕಾಣಬಹುದು. ಅಷ್ಟರಲ್ಲಿ ಯುವತಿಯೊಬ್ಬಳು ವರನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಿದ್ದಾಳೆ. ಇದನ್ನು ನೋಡಿದ ಪಕ್ಕದಲ್ಲಿ ಕುಳಿತ ವಧು ಕೋಪಗೊಂಡು ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ವಧುವಿನ ಈ ಕ್ರಮದಿಂದ ವರ ಸಂಪೂರ್ಣ ಬೆಚ್ಚಿ ಬಿದ್ದಿದ್ದು, ಯುವತಿಯೂ ಬೆಚ್ಚಿ ಬಿದ್ದಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಬಡವರ ಅಕ್ಕಿ ಬಡವರಿಗೆ ಹೋಗ್ಬೇಕು ಅಷ್ಟೆ, ಅನ್ನ ಭಾಗ್ಯ ಅಕ್ಕಿ ಕಳ್ಳ ಮಾರಾಟ ಮಾಡುವಂತಿಲ್ಲ ಎಚ್ಚರಿಕೆ ನೀಡಿದ ಕರ್ನಾಟಕ ಹೈಕೋರ್ಟ್
bridal_lehenga_designn ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 90 ಸಾವಿರಲ್ಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ