AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ನೀವೇನಾದ್ರೂ ಇದನ್ನು ಚಿಕನ್ ಲೆಗ್ ಪೀಸ್ ಅಂದುಕೊಂಡ್ರಾ, ಇದು ಕೇಕ್ ಅಂತೆ

ಮಾರಾಟಗಾರರು ಗ್ರಾಹಕರ ಗಮನ ಸೆಳೆಯಲು ಆಹಾರ ಪದಾರ್ಥಗಳ ಮೇಲೂ ನಾನಾ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಆದರೆ ಇದೀಗ ಚಿಕನ್ ಲೆಗ್ ಪೀಸ್ ವಿಡಿಯೋ ವೈರಲ್ ಆಗಿದ್ದು, ಆದರೆ ಇದರ ಅಸಲಿ ವಿಚಾರ ಬೇರೇನೇ ಇದೆ. ನೋಡುವುದಕ್ಕೆ ಲೆಗ್ ಪೀಸ್ ನಂತಿರುವ ಇದು ಕೇಕ್ ಆಗಿದೆ. ಈ ವಿಡಿಯೋ ನೋಡಿದ ಬಳಿಕ ನೆಟ್ಟಿಗರಿಂದ, ಇದನ್ನು ಮಾಡಿದ ವ್ಯಕ್ತಿಗೆ ಮೆಚ್ಚುಗೆಯ ಸುರಿಮಳೆಯೇ ವ್ಯಕ್ತವಾಗಿದೆ.

Video : ನೀವೇನಾದ್ರೂ ಇದನ್ನು ಚಿಕನ್ ಲೆಗ್ ಪೀಸ್ ಅಂದುಕೊಂಡ್ರಾ, ಇದು ಕೇಕ್ ಅಂತೆ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Sep 21, 2024 | 4:44 PM

Share

ನಾಲ್ಕು ಜನರು ಇರುವ ರೀತಿಯಲ್ಲಿ ನಾವು ಇದ್ದರೆ, ನಮಗೂ ಅವರಿಗೂ ವ್ಯತ್ಯಾಸವೇನಿರುತ್ತದೆ. ಹೀಗಾಗಿಯೇ ಜನರು ಬೇರೆಯವರಿಗಿಂತ ಸ್ವಲ್ಪ ಭಿನ್ನವಾಗಿರಬೇಕೆಂದು ಬಯಸುತ್ತಾರೆ. ತಮ್ಮ ವ್ಯಾಪಾರ ಕ್ಷೇತ್ರದಲ್ಲಿಯು ಇದನ್ನೇ ಅಳವಡಿಸಿಕೊಂಡು ಹೋಗುವ ಗ್ರಾಹಕರನ್ನು ಸೆಳೆಯುತ್ತಾರೆ. ಹೌದು, ವ್ಯಾಪಾರದಲ್ಲಿ ಎಲ್ಲರ ದಾರಿಯನ್ನೇ ಅನುಸರಿಸಿದರೆ ಜನಪ್ರಿಯರಾಗಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಮಾರಾಟ ಮಾಡುವ ವಸ್ತುಗಳನ್ನೇ ವಿನೂತನವಾಗಿ ತಯಾರಿಸಿ ಮಾರಾಟ ಮಾಡಿಕೊಳ್ಳುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಲೆಗ್ ಪೀಸ್ ನಂತೆ ಕಾಣುವ ಕೇಕ್ ವಿಡಿಯೋವೊಂದು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಲೆಗ್ ಪೀಸ್ ಕತ್ತರಿಸುತ್ತಿದ್ದು, ಆದರೆ ಇದು ಚಿಕನ್ ಅಲ್ಲ, ಬದಲಾಗಿ ಕೇಕ್ ಆಗಿದೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ಪೇಜ್ diyacakesit ನಲ್ಲಿ ಪೋಸ್ಟ್ ಮಾಡಲಾಗಿದೆ. ತಂದೂರಿ ಚಿಕನ್ ರೂಪದಲ್ಲಿ ಕೇಕ್ ತಯಾರಿಸಲಾಗಿದೆ. ಡಾರ್ಕ್ ಚಾಕೊಲೇಟ್ ಕೇಕ್ ಆಗಿದ್ದು, ಆದರೆ ತಂದೂರಿ ಚಿಕನ್‌ ನಂತೆ ಕಾಣಲು ಅದೇ ಬಣ್ಣದಿಂದ ಶೇಡ್ ಮಾಡಲಾಗಿದೆ. ಈ ಚಿಕನ್ ಲೆಗ್ ಪೀಸ್ ಕತ್ತರಿಸುತ್ತಿರುವ ದೃಶ್ಯವಿದೆ. ಆ ವೇಳೆಯಲ್ಲಿ ಇದು ಕೇಕ್ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಇದನ್ನೂ ಓದಿ: ಕರೆಂಟ್‌ ಶಾಕ್​​​ನಿಂದ ಪ್ರಜ್ಞೆ ತಪ್ಪಿ ಬಿದ್ದ ಕಾಗೆ, ಸಿಪಿಆರ್‌ ನೀಡಿ ಪ್ರಾಣ ಉಳಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ

ವೈರಲ್​​​ ಪೋಸ್ಟ್​​​ ಇಲ್ಲಿದೆ ನೋಡಿ:

ಹೌದು, ಕೇಕ್ ಎನ್ನುವ ಸಂದೇಹ ಬಾರದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಮೆಚ್ಚುಗೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನೆಟ್ಟಿಗರೊಬ್ಬರು, ಈ ಕೇಕ್ ಮಾಡಿದ ವ್ಯಕ್ತಿಯನ್ನು ಹೊಗಳಿದ್ದಾರೆ. ಮತ್ತೊಬ್ಬರು, ‘ಇದು ನೋಡುವ ಕಣ್ಣಿಗೆ ಮೋಸ ಮಾಡುತ್ತಿದೆ’ ಎಂದಿದ್ದಾರೆ. ಇನ್ನೊಬ್ಬರು, ಇದು ಕೇಕ್? ನಂಬಲು ಅಸಾಧ್ಯವಾಗಿದೆ ಎಂದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ