AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅರೇ, ಡಾನ್ಸ್ ಮಾಡುತ್ತಾ ಏನ್ ಎಕ್ಸ್ಪ್ರೆಶನ್ ಕೊಡ್ತಾಳೆ ಗುರು ಈ ಪುಟಾಣಿ, ವಿಡಿಯೋ ವೈರಲ್

ಪುಟ್ಟ ಮಕ್ಕಳ ನೃತ್ಯದ ದೃಶ್ಯವನ್ನು ನೋಡುವಾಗ ಆಗುವ ಖುಷಿಯೇ ಬೇರೆ. ಅದರಲ್ಲೂ ಕೆಲವು ಮಕ್ಕಳಂತು ಅದೆಷ್ಟು ಅದ್ಭುತವಾಗಿ ನೃತ್ಯ ಮಾಡುತ್ತಾರೆ ಈ ಎಂದರೆ ಅದನ್ನು ಹೇಳುವುದಕ್ಕೆ ಪದಗಳೇ ಸಾಲುವುದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಮವಸ್ತ್ರ ಧರಿಸುವ ಪುಟಾಣಿಯೊಬ್ಬಳು ಸಹಪಾಠಿಗಳ ಗುಂಪಿನಲ್ಲಿ ನೇಪಾಳಿ ಹಾಡಿಗೆ ಕ್ಯೂಟ್ ಎಕ್ಸ್ಪ್ರೆಶನ್ ನೊಂದಿಗೆ ಡಾನ್ಸ್ ಮಾಡಿದ್ದಾಳೆ. ಈ ಮುದ್ದಾದ ಹುಡುಗಿಯ ಹಾವಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

Video: ಅರೇ, ಡಾನ್ಸ್ ಮಾಡುತ್ತಾ ಏನ್ ಎಕ್ಸ್ಪ್ರೆಶನ್ ಕೊಡ್ತಾಳೆ ಗುರು ಈ ಪುಟಾಣಿ, ವಿಡಿಯೋ ವೈರಲ್
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Sep 21, 2024 | 5:30 PM

Share

ಮಕ್ಕಳ ಮುದ್ದು ಮುದ್ದಾದ ಮುಗ್ಧ ಮಾತು, ಅವರ ಹಾವಭಾವ ನೋಡಿದಾಗ ಎಷ್ಟು ಚಂದ ಎನಿಸುತ್ತದೆ. ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾವಾಡುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಆನಂದ. ಅದರಲ್ಲಿಯು ಈಗಿನ ಕಾಲದ ಮಕ್ಕಳ ತುಂಬಾನೇ ಚೂಟಿಗಳು. ಈ ಮುದ್ದಾದ ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಹುಡುಗಿಯೊಂದು ತನ್ನ ಮುದ್ದಾದ ಎಕ್ಸ್ಪ್ರೆಶನ್ ಮೂಲಕ ನೇಪಾಳಿ ಹಾಡಿಗೆ ಡಾನ್ಸ್ ಮಾಡಿದ್ದಾಳೆ.

ಸಹಪಾಠಿಗಳ ನಡುವೆ ನಿಂತಿರುವ ಈ ಪುಟಾಣಿಯ ಡಾನ್ಸ್ ವಿಡಿಯೋ ನೆಟ್ಟಿಗರ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋವನ್ನು ಟಿಕ್ ಟಾಕ್ ನೇಪಾಳ್ ಆಫೀಷಿಯಲ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು ಹಲವಾರು ಪುಟಾಣಿಗಳು ಶಾಲಾ ಸಮವಸ್ತ್ರ ಧರಿಸಿ ಆಟದ ಮೈದಾನದಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು.

ಆದರೆ ಈ ಪೈಕಿ ಒಬ್ಬ ಪುಟಾಣಿಯ ತನ್ನ ಡಾನ್ಸ್ ಮಾಡುವ ರೀತಿಯಿಂದಲೇ ಗಮನ ಸೆಳೆದಿದ್ದಾಳೆ. ಮುಂಭಾಗದಲ್ಲಿ ನಿಂತು ನೃತ್ಯ ಮಾಡುತ್ತ ಕ್ಯೂಟ್ ಎಕ್ಸ್ಪ್ರೆಶನ್ ಮೂಲಕ ನೆಟ್ಟಿಗರ ಮನಸ್ಸು ಗೆದ್ದಿದ್ದಾಳೆ. 44 ಸೆಕೆಂಡುಗಳ ಕ್ಲಿಪ್‌ನಲ್ಲಿ ಈ ಪುಟಾಣಿಯ ಡಾನ್ಸ್ ವಿಡಿಯೋ, ಐದು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಹಾವಭಾವಕ್ಕೆ ನೆಟ್ಟಿಗರು ಸೋತು ಹೋಗಿದ್ದು ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೀವೇನಾದ್ರೂ ಇದನ್ನು ಚಿಕನ್ ಲೆಗ್ ಪೀಸ್ ಅಂದುಕೊಂಡ್ರಾ, ಇದು ಕೇಕ್ ಅಂತೆ

ನೆಟ್ಟಿಗರೊಬ್ಬರು,’ ಈ ಹುಡುಗಿ ಹುಟ್ಟು ಕಲಾವಿದೆ. ಭವಿಷ್ಯದಲ್ಲಿ ಉತ್ತಮ ನೃತ್ಯಗಾರ್ತಿಯಾಗುತ್ತಾಳೆ’ ಎಂದಿದ್ದಾರೆ. ಮತ್ತೊಬ್ಬರು, ‘ಹುಡುಗಿ ತನ್ನದೇ ಲೋಕದಲ್ಲಿಯೇ ಮುಳುಗಿದ್ದಾಳೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು,’ಈ ಪುಟಾಣಿಯ ಹಾವಭಾವವೇ ಸೊಗಸಾಗಿದೆ. ಯಾರೂ ನೋಡದ ಹಾಗೆ ಅವಳು ನೃತ್ಯ ಮಾಡುತ್ತಿದ್ದಾಳೆ, ನಿಜಕ್ಕೂ ಸುಂದರವಾಗಿದೆ’ ಎಂದಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ