AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಈ ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಲು 5.5 ಲಕ್ಷ ರೂ. ಪಾವತಿಸಬೇಕು!

ಭಾರತದ ಅನಿರ್ಬನ್ ಚೌಧರಿ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ಕೀನ್ಯಾದ ಮಸಾಯಿ ಮಾರ ಪ್ರವಾಸದ ವೇಳೆ ತಾವು ಅತ್ಯಂತ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ ಉಳಿದುಕೊಂಡಿದ್ದ ಅನುಭವ ಬರೆದುಕೊಂಡಿದ್ದಾರೆ. ಈ ರೆಸಾರ್ಟ್‌ನಲ್ಲಿ ಒಂದು ದಿನ ತಂಗಲು 5.5 ಲಕ್ಷ ರೂ. ಪಾವತಿಸಬೇಕು. ಇದಲ್ಲದೇ ಈ ಜೋಡಿ 5 ರಾತ್ರಿ ತಂಗಿದ್ದು ಸುಮಾರು 28 ಲಕ್ಷ ರೂ. ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ.

Viral Post: ಈ ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಲು 5.5 ಲಕ್ಷ ರೂ. ಪಾವತಿಸಬೇಕು!
ಅಕ್ಷತಾ ವರ್ಕಾಡಿ
|

Updated on: Sep 21, 2024 | 3:21 PM

Share

ಯಾವುದೋ ಒಂದು ವಿಷಯದ ಬಗ್ಗೆ ನಾವು ಉತ್ಸಾಹವನ್ನು ಬೆಳೆಸಿಕೊಂಡರೆ ಅದಕ್ಕಾಗಿ ಹಣವನ್ನು ನೀರಿನಂತೆ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಅನೇಕ ಜನರು ಟ್ರಾವೆಲಿಂಗ್​​ ಇಷ್ಟಪಡುತ್ತಾರೆ ಮತ್ತು ಏನನ್ನೂ ಯೋಚಿಸದೆ ಅವರು ಪ್ರಪಂಚದ ಪ್ರವಾಸಕ್ಕೆ ಹೋಗುತ್ತಾರೆ. ಅಂತಹ ಒಂದು ಅನುಭವವನ್ನು ಭಾರತೀಯ ದಂಪತಿಗಳು ಹಂಚಿಕೊಂಡಿದ್ದಾರೆ. ಸದ್ಯ ಇವರ ದುಬಾರಿ ಪ್ರವಾಸ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಕೀನ್ಯಾದ ಅತ್ಯಂತ ದುಬಾರಿ ರೆಸಾರ್ಟ್‌:

ಭಾರತದ ಅನಿರ್ಬನ್ ಚೌಧರಿ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು ಮಸಾಯಿ ಮಾರ ಪ್ರವಾಸದ ವೇಳೆ ತಾವು ಅತ್ಯಂತ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ ಉಳಿದುಕೊಂಡಿದ್ದ ಅನುಭವ ಬರೆದುಕೊಂಡಿದ್ದಾರೆ. ಈ ರೆಸಾರ್ಟ್‌ನಲ್ಲಿ ಒಂದು ದಿನ ತಂಗಲು 5.5 ಲಕ್ಷ ರೂ. ಪಾವತಿಸಬೇಕು. ಇದಲ್ಲದೇ ಈ ಜೋಡಿ 5 ರಾತ್ರಿ ತಂಗಿದ್ದು ಸುಮಾರು 28 ಲಕ್ಷ ರೂ. ಪಾವತಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮಸಾಯಿ ಮಾರಾ ರೆಸಾರ್ಟ್‌ ಯಾಕಿಷ್ಟು ದುಬಾರಿ:

ಈ ಐಷಾರಾಮಿ ರೆಸಾರ್ಟ್ನಲ್ಲಿ ಜಂಗಲ್ ಸಫಾರಿಯ ಅನುಭವವನ್ನು ಪಡೆಯಬಹುದು. ಅನಿರ್ಬನ್ ಚೌಧರಿ ಹಂಚಿಕೊಂಡ ಮಾಹಿತಿಯ ಪ್ರಕಾರ, ವಸತಿ ಮತ್ತು ಆಹಾರದ ಜೊತೆಗೆ, ಇದು ಕೆಲವು ಆಯ್ದ ಪಾನೀಯಗಳು, ಬುಷ್ ಮೀಲ್ಸ್, ಸನ್‌ಬ್ಯಾಥರ್‌ಗಳು ಮತ್ತು ಜೆಲ್ಲಿ ಗೇಮ್ ಡ್ರೈವ್‌ಗಳಂತಹ ದುಬಾರಿ ಸೌಲಭ್ಯಗಳನ್ನು ಹೊಂದಿದೆ, ಇದನ್ನು ಪ್ಯಾಕೇಜ್ ಅಡಿಯಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ.ಈ ಲಾಡ್ಜ್ ಕಿಕೊರೊಕ್ ಏರ್‌ಸ್ಟ್ರಿಪ್‌ನಿಂದ ಅರ್ಧ ಗಂಟೆ ದೂರದಲ್ಲಿದೆ.

ಇದನ್ನೂ ಓದಿ: ಮೈದಾನದಲ್ಲಿ ತಂಡದ ಜರ್ಸಿ ಒಣಗಿಸುತ್ತಿರುವ ಆರ್ ಅಶ್ವಿನ್

ಅನಿರ್ಬನ್ ಚೌಧರಿ ಅವರು ತಮ್ಮ ಎಕ್ಸ್ ಖಾತೆಯಿಂದ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಸೆ. 15ರಂದು ಶೇರ್​​ ಮಾಡಿರುವ ಪೋಸ್ಟನ್ನು 10ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅನೇಕ ಜನರು ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ಈ ಬಗ್ಗೆ ಕೆಲ ಬಳಕೆದಾರರು ಕೂಡ ಅಚ್ಚರಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್