Updated on:Sep 23, 2024 | 3:59 PM
ಇದೊಂದು ಅಪರೂಪದ ಮೀನು. ಸಮುದ್ರದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಈ ಮೀನುಗಳು ಸಿಗುತ್ತವೆ. ಇದರ ವಿಶೇಷತೆ ತಿಳಿದರೆ ನಿಮಗೆ ಶಾಕ್ ಆಗುವುದಂತೂ ಖಂಡಿತಾ. ಆ ಮೀನು ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಈ ಮೀನಿನ ಹೆಸರು ಪ್ಯಾರಟ್ ಫಿಶ್ ಅಂದರೆ ಗಿಳಿ ಮೀನು. ಇದು ಗಿಳಿಯಂತೆ ಕೊಕ್ಕುಗಳನ್ನು ಹೊಂದಿದೆ. ಇದಲ್ಲದೆ ಇತರ ಮೀನುಗಳಿಗೆ ಹೋಲಿಸಿದರೆ ಇದರ ಹಲ್ಲು ವಿಭಿನ್ನವಾಗಿದ್ದು, ಮನುಷ್ಯನ ಹಲ್ಲುಗಳನ್ನು ಹೋಲುತ್ತದೆ.
ಗಿಳಿಯಂತೆ ಕೊಕ್ಕು, ಮನುಷ್ಯನಂತೆ ಹಲ್ಲುಗಳಿರುವ ಈ ಅಪರೂಪದ ಮೀನುಗಳು ಹೆಚ್ಚಾಗಿ ಪೆಸಿಫಿಕ್ ಸಾಗರದಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಈ ಮೀನಿನ ಉದ್ದವು 4 ಅಡಿಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
ಮಾಹಿತಿಯ ಪ್ರಕಾರ, ಈ ಮೀನು ಆಹಾರಕ್ಕಾಗಿ ಹವಳ ಮತ್ತು ಅದರ ಮೇಲೆ ಸಂಗ್ರಹವಾಗಿರುವ ಪಾಚಿಯನ್ನು ತಿನ್ನಲು ತಮ್ಮ ಬಲವಾದ ಹಲ್ಲುಗಳನ್ನು ಬಳಸುತ್ತದೆ.ಮತ್ತೊಂದು ವಿಶೇಷತೆ ಈ ಮೀನು ಬಯಸಿದಂತೆ ತನ್ನ ಬಣ್ಣವನ್ನು ಬದಲಾಯಿಸುತ್ತದೆ.
ಈ ಮೀನಿನ ಹಲ್ಲುಗಳು ವಿಶ್ವದ ಅತ್ಯಂತ ಬಲವಾದ ಹಲ್ಲುಗಳಲ್ಲಿ ಒಂದಾಗಿದೆ. ವರದಿಗಳ ಪ್ರಕಾರ ಈ ಪ್ಯಾರಟ್ ಫಿಶ್ ಸುಮಾರು 15 ಸಾಲುಗಳ 1,000 ಹಲ್ಲುಗಳನ್ನು ಹೊಂದಿರುತ್ತವೆ.
Published On - 5:24 pm, Sun, 22 September 24