
ಕೈಯಲ್ಲಿ ಒಂದು ಉದ್ಯೋಗವಿದ್ರೆ (Job) ಮರ್ಯಾದೆ. ಆದ್ರೆ ಕಚೇರಿಯಲ್ಲಿರುವ ಒತ್ತಡಭರಿತ ವಾತಾವರಣದಿಂದ ಜಾಬ್ ರಿಸೈನ್ ಮಾಡಿ ಹೊರ ನಡೆಯುವ ಎಂದೆನಿಸುತ್ತದೆ. ಇಲ್ಲೊಬ್ಬ ಉದ್ಯೋಗಿಯೂ ಮ್ಯಾನೇಜರ್ (Manager) ನಡೆದುಕೊಂಡ ರೀತಿಗೆ ಕೋಪಗೊಂಡು ರಾಜೀನಾಮೆ ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ತನಗಾದ ಕಹಿ ಅನುಭವದೊಂದಿಗೆ ಯಾಕೆ ಈ ನಿರ್ಧಾರ ತೆಗೆದುಕೊಂಡೆ ಎಂದು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
R/ Indianworkplace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ನಾನು ಕೊನೆಗೂ ನನ್ನ ವಿಷಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದೆ. ಈಗ ನನ್ನ ಮ್ಯಾನೇಜರ್ ಇನ್ನು ಮುಂದೆಂದೂ ಇಂತಹ ಕೆಲಸ ಸಿಗುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಉದ್ಯೋಗಿಯೂ, ನನಗೆ 23 ವರ್ಷ. ನಾನು ಫರಿದಾಬಾದ್‌ನಲ್ಲಿರುವ ಈ ಕಂಪನಿಯಲ್ಲಿ ಸ್ವಲ್ಪ ಸಮಯದಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಸಂಬಳ ಯಾವಾಗಲೂ ಸಮಯಕ್ಕೆ ಸರಿಯಾಗಿರುತ್ತಿತ್ತು, ಕೆಲಸದ ವಾತಾವರಣವೇ ಸರಿಯಿಲ್ಲ. ನನ್ನ ಡಿಪಾರ್ಟ್ಮೆಂಟ್‌ನಲ್ಲಿ ನಾನು ಒಬ್ಬನೇ ಉದ್ಯೋಗಿ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಇರುವುದಿಲ್ಲ. ಕೆಲವು ಬಾರಿ ರಾಶಿ ರಾಶಿ ಕೆಲಸಗಳು ಇರುತ್ತವೆ. ಇನ್ನು ಕೆಲವೊಮ್ಮೆ ಕೆಲಸವಿಲ್ಲದೇ ಫ್ರೀಯಾಗಿರುತ್ತೇನೆ. ನಾನು ಈ ಹಿಂದೆ ಒಂದು ಅಥವಾ ಎರಡು ದಿನ ವರ್ಕ್ ಫ್ರಮ್ ಹೋಮ್ ಮಾಡಿದ್ದೇನೆ. ನನ್ನ ಮ್ಯಾನೇಜರ್ ಕೆಲಸ ಮುಗಿಸಿ, ರಜೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು. ಇನ್ನು ಕೆಲವೊಮ್ಮೆ ನಾನು ಲಾಗಿನ್ ಆಗಿದ್ದರೂ, ಕರೆಗಳಲ್ಲಿ ಲಭ್ಯವಿದ್ದರೂ ಮತ್ತು ನನ್ನ ಟಾಸ್ಕ್ ಶೀಟ್ ಖಾಲಿಯಾಗಿದೆ ಎಂದು ಹೇಳಿದ್ದರೂ ಕೆಲಸ ಮುಗಿದಿಲ್ಲ ಎಂದು ಹೇಳುತ್ತಿದ್ದರು ಎಂದು ಬಾಸ್ ವರ್ತನೆಯ ಬಗ್ಗೆ ಉಲ್ಲೇಖಿಸಿದ್ದಾರೆ.
I (23M) finally resigned from my toxic workplace and now my manager is bragging that I’ll “never get a job like this again.” What??
byu/CARAMELGHOST_ inIndianWorkplace
ಹೀಗಿರುವಾಗ ಕೆಲ ದಿನಗಳ ಹಿಂದೆ ನಾನು ಮಧ್ಯಾಹ್ನ 12:50 ಕ್ಕೆ ಕಚೇರಿ ತಲುಪಿದೆ. ನನ್ನ ಶಿಫ್ಟ್ 10:30 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ನನಗೆ ತಿಂಗಳಿಗೆ ಎರಡು ಸಣ್ಣ ರಜೆಗಳಿವೆ. ಅಂದರೆ ನಾನು 2 ಗಂಟೆ ತಡವಾಗಿ ಬರಬಹುದು ಅಥವಾ 2 ಗಂಟೆ ಮುಂಚಿತವಾಗಿ ಹೊರಡಬಹುದು. ಆ ದಿನ, ನಾನು ಆ ಭತ್ಯೆಯನ್ನು ಕೇವಲ 20 ನಿಮಿಷಗಳಿಗಿಂತ ಹೆಚ್ಚು ಮೀರಿದ್ದೆ. ಆದ್ದರಿಂದ ಸಣ್ಣ ಎಚ್ಚರಿಕೆ ಅಥವಾ ಪುನರಾವರ್ತಿಸಬೇಡಿ ಎನ್ನುವ ಬದಲು ಹಾಜರಾತಿಯಲ್ಲಿ ಅರ್ಧ ದಿನದ ರಜೆಯನ್ನು ಉಲ್ಲೇಖಿಸಲು ಹೇಳಿದರು ಎಂದಿದ್ದಾರೆ.
ಅರ್ಧದಿನ ಕೆಲಸ ಮಾಡಿದ ನಂತರ ನಾನು ಕೆಲಸ ಬಿಟ್ಟೆ. ನಾನು ಅದೇ ದಿನ ರಾಜೀನಾಮೆ ನೀಡಿದೆ. ಆದಾದ ಬಳಿಕ ನನ್ನ ಸಹೋದ್ಯೋಗಿಗಳ ಬಳಿ ನನ್ನ ಮ್ಯಾನೇಜರ್ ನಾನು ದೊಡ್ಡ ತಪ್ಪು ಮಾಡಿದೆ. ಇನ್ನು ಮುಂದೆ ಎಂದಿಗೂ ಇಂತಹ ಕೆಲಸ ಸಿಗುವುದಿಲ್ಲ. ನನಗೆ ಸಿಗುವ ಅತ್ಯುತ್ತಮ ಕೆಲಸ ಇದು ಎಂದು ಹೇಳಿದ್ದಾರೆ ಎನ್ನುವುದು ನನ್ನ ಕಿವಿಗೆ ಬಿತ್ತು. ಆದರೆ ನೀವು ನನ್ನನ್ನು ಟೀಮ್ ಕೆಲಸವನ್ನು ಒಬ್ಬಂಟಿಯಾಗಿ ಮಾಡುವಂತೆ ಮಾಡಿದ್ದೀರಿ, ವರ್ಕ್ ಫ್ರಮ್ ಹೋಮ್ ನಲ್ಲಿದ್ರೂ ರಜೆಯಲ್ಲಿದ್ದಂತೆ ನಡೆಸಿಕೊಂಡಿದ್ದೀರಿ. ಶಾಲೆಯಲ್ಲಿದ್ದಂತೆ ಹಾಜರಾತಿಯಲ್ಲಿ ನಿಮಗೆ ಖುಷಿ ಬಂದಂತೆ ಮಾಡಿದ್ದೀರಿ. ಈಗ ನಾನು ಕೃತಜ್ಞರಾಗಿರಬೇಕು ಎಂದು ನೀವು ಭಾವಿಸುತ್ತೀರಾ?. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ರಾಜೀನಾಮೆ ನೀಡಿದ್ದಕ್ಕೆ ನನಗೆ ವಿಷಾದವಿಲ್ಲ. ನನಗೆ ಮನಸ್ಸು ಹಗುರವೆನಿಸುತ್ತದೆ. ಬೇರೆ ಯಾರಾದರೂ ನಿಮಗೆ ಕೆಲಸ ನೀಡುವ ಮೂಲಕ ನಿಮಗೆ ಉಪಕಾರ ಮಾಡುತ್ತಿದ್ದಾರೆಂದು ಭಾವಿಸುವ ಮ್ಯಾನೇಜರ್ ಇದ್ದರೆ ದಯವಿಟ್ಟು ಹಂಚಿಕೊಳ್ಳಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಚೇರಿಯಲ್ಲಿರುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಿದ ಕಂಪನಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ನಿಮ್ಮ ಹೊಸ ಪ್ರಯತ್ನಗಳಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ಇನ್ನೊಬ್ಬರು ಭಾರತದಲ್ಲಿ ಕೆಲಸದ ಸಂಸ್ಕೃತಿಯ ಪರಿಣಾಮ ಇದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ನಿರ್ಧಾರ ನಿಮಗೆ ತೃಪ್ತಿ ನೀಡಿದ್ದರೆ ಸಾಕು, ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ