AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ

ನಿಮ್ಮ ಮೆದುಳು ಚುರುಕಾಗಬೇಕಾದರೆ ನೀವು ಆಫ್ಟಿಕಲ್ ಇಲ್ಯೂಷನ್ ಚಿತ್ರಗಳನ್ನು ಬಿಡಿಸಲೇಬೇಕು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಇಂತಹ ಟ್ರಿಕ್ಕಿ ಒಗಟಿನ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಇದೀಗ ಇಂತಹದ್ದೇ ಭ್ರಮೆ ಉಂಟು ಮಾಡುವ ಚಿತ್ರವನ್ನು ನೀಡಲಾಗಿದೆ. ಇದರಲ್ಲಿ ಅಡಗಿರುವ ಚಿಟ್ಟೆಯನ್ನು ಹುಡುಕುವ ಸವಾಲು ನೀಡಲಾಗಿದೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷಿಸಿ ಕೊಳ್ಳಿ.

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media
ಸಾಯಿನಂದಾ
|

Updated on: Nov 18, 2025 | 5:36 PM

Share

ಇತ್ತೀಚೆಗಿನ ದಿನಗಳಲ್ಲಿ ದೃಷ್ಟಿ ಸಾಮರ್ಥ್ಯ ಮತ್ತು ಮೆದುಳನ್ನು ಚುರುಕುಗೊಳಿಸುವ ಆಪ್ಟಿಕಲ್ ಇಲ್ಯೂಷನ್ (Optical Illusion) ಫೋಟೋಗಳು ಆಗಾಗ್ಗೆ ವೈರಲ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಚಿತ್ರಗಳು ನಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಯೋಚನಾ ಸಾಮರ್ಥ್ಯವನ್ನು ಪರೀಕ್ಷಿಸುವಂತಿದ್ದರೆ ಕೆಲವೊಂದು ನಮ್ಮ ವ್ಯಕ್ತಿತ್ವವನ್ನು ರಿವೀಲ್‌ ಮಾಡುತ್ತದೆ. ಆದರೆ ಇದೀಗ ನಿಮ್ಮ ಬುದ್ಧಿವಂತಿಕೆಗೆ ಸವಾಲೊಡ್ದುವ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಚಿಟ್ಟೆಯನ್ನು(butterfly) ಹುಡುಕಬೇಕು. ಈ ಒಗಟು ಬಿಡಿಸಲು ಇರುವ ಸಮಯ 13 ಸೆಕೆಂಡುಗಳು ಮಾತ್ರ. ಈ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಲು ಇದೊಳ್ಳೆ ಸಮಯ. ಹೀಗಾಗಿ ನೀವು ಈ ಚಿತ್ರದತ್ತ ಒಮ್ಮೆ ಕಣ್ಣು ಹಾಯಿಸಿ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಗಮನಿಸಿದಾಗ ಮೊದಲ ನೋಟದಲ್ಲಿ ಸರಳವಾಗಿ ಕಾಣುತ್ತದೆ. ಆದರೆ ಭ್ರಮೆ ಉಂಟು ಮಾಡುವ ಚಿತ್ರಗಳೇ ಹಾಗೆ. ಇಲ್ಲಿ ಮನೆ ಮಂದಿ ಎಲ್ಲರೂ ಹಾಲ್‌ನಲ್ಲಿ ಕುಳಿತು ಟಿವಿ ನೋಡುತ್ತಿದ್ದಾರೆ. ಈ ಸಾಕು ಬೆಕ್ಕು ಹಾಗೂ ಮನೆಯ ಮುದ್ದಿನ ಶ್ವಾನವು ಇವರ ಜೊತೆಗೆ ಕುಳಿತುಕೊಂಡಿದೆ. ಆದರೆ ಇದರಲ್ಲಿ ಚಿಟ್ಟೆಯೊಂದು ಅಡಗಿ ಕುಳಿತಿದೆ. ಈ ಬಣ್ಣದ ಚಿಟ್ಟೆಯನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ.

ನೀವು ಈ ಸವಾಲು ಸ್ವೀಕರಿಸಲು ರೆಡಿ ಇದ್ದೀರಾ?

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತದೆ. ಆದರೆ ಇದರಲ್ಲಿ ಸವಾಲನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಸರಳವಾಗಿ ಕಾಣುವ ಈ ಚಿತ್ರದಲ್ಲಿ ಬಣ್ಣದ ಆಕರ್ಷಕ ಚಿಟ್ಟೆ ಎಲ್ಲಿದೆ ಎಂದು ಹೇಳಬೇಕು. ನಿಮ್ಮ ಕಣ್ಣು ಶಾರ್ಪ್ ಇದೆಯೇ ಎಂದು ಪರೀಕ್ಷಿಸಿಕೊಳ್ಳಲು ಇಲ್ಲಿ ಒಂದು ಅವಕಾಶವಿದೆ. ಈ ಟ್ರಿಕ್ಕಿ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ. ಹಾಗಾದ್ರೆ ನೀವು ಈ ಒಗಟಿನ ಚಿತ್ರದತ್ತ ಕಡೆಗೆ ಗಮನಹರಿಸಿ ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ:ಈ ಚಿತ್ರದಲ್ಲಿ100ರ ನಡುವೆ ಅಡಗಿರುವ 10 ಸಂಖ್ಯೆಯನ್ನು ಕಂಡುಹಿಡಿಯುವಿರಾ

ಚಿಟ್ಟೆಯನ್ನು ಕಂಡುಹಿಡಿಯಲು ಸಾಧ್ಯವಾಯಿತೇ?

ನಿಮ್ಮ ಮೆದುಳನ್ನು ಚುರುಕುಗೊಳಿಸುವ ಈ ಚಿತ್ರಗಳೇ ಹಾಗೆ. ಅಂದುಕೊಂಡಷ್ಟು ಸುಲಭವಿಲ್ಲ. ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಗುರುತಿಸಲು ಕಷ್ಟಪಡುತ್ತಿದ್ದೀರಾ. ಕಣ್ಣು ಅಗಲಿಸಿ, ಸೂಕ್ಷ್ಮವಾಗಿ ನೋಡಿದರೂ ಈ ಚಿತ್ರದಲ್ಲಿ ಮರೆಮಾಡಲಾಗಿರುವ ಚಿಟ್ಟೆಯನ್ನು ಗುರುತಿಸಲು ಸಾಧ್ಯವಾಗಿಲ್ಲವೇ. ನಾವು ನಿಮಗೆ ಚಿಟ್ಟೆ ಎಲ್ಲಿದೆ ಎಂದು ಹೇಳುತ್ತೇವೆ. ಕುಟುಂಬದೊಂದಿಗೆ ಟಿವಿ ನೋಡುತ್ತ ಕುಳಿತಿರುವ ಮಹಿಳೆಯ ಕೂದಲನ್ನೊಮ್ಮೆ ಗಮನಿಸಿ. ಆಕೆಯ ತಲೆಯಲ್ಲಿರುವ ಕ್ಲಿಪ್ ಚಿಟ್ಟೆಯಾಕಾರದಲ್ಲಿದೆ. ನಾವು ಹೇಳಿದ ಮೇಲೆ ನೀವು ಬಣ್ಣದ ಚಿಟ್ಟೆಯನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇವೆ.

Optical Illusion Answer

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕಿಕ್ಲ್‌ ಮಾಡಿ