Viral: ವೈದ್ಯರು ಬಿಳಿ, ವಕೀಲರು ಕಪ್ಪು ಬಣ್ಣದ ಕೋಟು ಧರಿಸುವುದು ಯಾಕೆ ಗೊತ್ತಾ? ಇದೇ ನೋಡಿ ಕಾರಣ

ಸಾಮಾನ್ಯವಾಗಿ ವೈದ್ಯರು ಹಾಗೂ ವಕೀಲರು ನಿರ್ದಿಷ್ಟ ಡ್ರೆಸ್ ಕೋಡ್ ಅನ್ನು ಅನುಸರಿಸುತ್ತಾರೆ. ಹೌದು, ಯಾವಾಗಲೂ ಬಿಳಿ ಮತ್ತು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಯಾಕೆ ಈ ಬಣ್ಣದ ಕೋಟ್ ನ್ನೇ ಧರಿಸುತ್ತಾರೆ ಎಂಬುದನ್ನು ನೀವು ಯೋಚನೆ ಮಾಡಿದ್ದೀರಾ. ಅವರ ಡ್ರೆಸ್ ಕೋಡ್ ಹಿಂದೆ ಈ ಕಾರಣವಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ

Viral: ವೈದ್ಯರು ಬಿಳಿ, ವಕೀಲರು ಕಪ್ಪು ಬಣ್ಣದ ಕೋಟು ಧರಿಸುವುದು ಯಾಕೆ ಗೊತ್ತಾ? ಇದೇ ನೋಡಿ ಕಾರಣ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jan 27, 2026 | 2:58 PM

ಶಾಲಾ ಕಾಲೇಜುಗಳಲ್ಲಿ ನಿರ್ದಿಷ್ಟ ಡ್ರೆಸ್ ಕೋಡ್ (dress code) ಹಾಗೂ ಯುನಿಫಾರ್ಮ್  ಇದ್ದೇ ಇರುತ್ತದೆ. ಆದರೆ ನೀವು ಆಸ್ಪತ್ರೆಗೆ ಹೋದಾಗ ವೈದ್ಯರು ಬಿಳಿ ಬಣ್ಣದ ಕೋಟ್  ಹಾಗೂ ನ್ಯಾಯಾಲಯಕ್ಕೆ ಹೋದಾಗ ವಕೀಲರು ಕಪ್ಪು ಬಣ್ಣದ ಕೋಟ್ ಧರಿಸಿರುವುದನ್ನು ನೀವು ಗಮನಿಸಿದ್ದೀರಬಹುದು. ಆದರೆ ಡಾಕ್ಟರ್ಸ್‌ ಹಾಗೂ ಲಾಯರ್‌ಗಳು ಏಕೆ ಈ ನಿರ್ದಿಷ್ಟ ಬಣ್ಣದ ಕೋಟುಗಳನ್ನೇ ಧರಿಸುತ್ತಾರೆ ಎನ್ನುವ ಬಗ್ಗೆ ಯಾವತ್ತಾದ್ರು ಯೋಚನೆ ಮಾಡಿದ್ದೀರಾ.  ಈ ಬಣ್ಣದ ಕೋಟ್ ಧರಿಸುವುದರ ಹಿಂದಿನ ಕಾರಣವನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು.

ವೈದ್ಯರು ಬಿಳಿ ಬಣ್ಣದ ಕೋಟು ಏಕೆ ಧರಿಸುತ್ತಾರೆ?

ವೈದ್ಯರು ಹಾಗೂ ನರ್ಸ್‌ಗಳು ಆಸ್ಪತ್ರೆಯಲ್ಲಿ ಬಿಳಿ ಕೋಟುಗಳನ್ನು ಧರಿಸುತ್ತಾರೆ. ಈ ಬಣ್ಣದ ಆಯ್ಕೆಯ ಹಿಂದಿನ ಕಾರಣವೇ ಇದಾಗಿದೆ. ಈ ಬಿಳಿ ಬಣ್ಣವು ಶುದ್ಧತೆ, ಶುಚಿತ್ವ ಹಾಗೂ ನಂಬಿಕೆಯ ಸಂಕೇತವಾಗಿದೆ. ಇನ್ನು, 19 ನೇ ಶತಮಾನದ ಮೊದಲು, ವೈದ್ಯರು ಸಹ ಸಾಮಾನ್ಯ ಬಟ್ಟೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ವೈದ್ಯಕೀಯ ವಿಜ್ಞಾನವು ಮುಂದುವರೆದಂತೆ ಬ್ಯಾಕ್ಟೀರಿಯಾ, ಸೋಂಕುಗಳು ಮತ್ತು ಶುಚಿತ್ವದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾ ಹೋದಂತೆ ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಲಾಯಿತು. ಹೀಗಾಗಿ ಈ ಬಿಳಿ ಬಣ್ಣದ ಕೋಟ್ ವೃತ್ತಿಪರ ಗುರುತಾಗಿ ಮಾರ್ಪಟ್ಟಿತು.

ರೋಗಿಗಳು ಬಿಳಿ ಕೋಟು ಧರಿಸಿದ ವೈದ್ಯರನ್ನು ನೋಡಿದಾಗ, ರೋಗಿಗಳು ಮಾನಸಿಕ ಸ್ಥಿತಿ ಉತ್ತಮವಾಗುತ್ತದೆ. ಭದ್ರತೆಯ ಭಾವನೆಯೊಂದಿಗೆ ನಮ್ಮನ್ನು ವೈದ್ಯರು ಬೇಗನೆ ಗುಣಪಡಿಸುತ್ತಾರೆ ಎನ್ನುವ ವಿಶ್ವಾಸವು ಮೂಡುತ್ತದೆ. ಬಿಳಿ ಬಣ್ಣ ಆರೋಗ್ಯ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ. ರೋಗಿಗಳಿಗೆ ಸುರಕ್ಷಿತ ವಾತಾವರಣದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಭರವಸೆ ನೀಡುತ್ತದೆ. ಈ ಬಿಳಿ ಬಣ್ಣದ ಮೇಲೆ ಕಲೆಗಳು ಸುಲಭವಾಗಿ ಗೋಚರಿಸುವ ಕಾರಣ, ಇದು ವೈದ್ಯರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ವೈದ್ಯರು ಈ ಬಣ್ಣದ ಕೋಟುಗಳನ್ನು ಧರಿಸಿದ ಕೂಡಲೇ ವಿಶ್ವಾಸರ್ಹರಾಗಿ ಕಾಣಿಸುತ್ತಾರೆ. ಈ ಎಲ್ಲಾ ಕಾರಣದಿಂದಲೇ ಬಿಳಿ ಬಣ್ಣದ ಕೋಟನ್ನೇ ವೈದ್ಯರು ಧರಿಸುತ್ತಾರೆ.

ವಕೀಲರು ಕಪ್ಪು ಬಣ್ಣದ ಕೋಟು ಏಕೆ ಧರಿಸುತ್ತಾರೆ?

ನ್ಯಾಯಾಲಯದಲ್ಲಿ ವಕೀಲರು ಕಪ್ಪು ಬಣ್ಣದ ಕೋಟನ್ನು ಧರಿಸುವುದನ್ನು ನೀವು ನೋಡಿರುತ್ತೀರಿ. ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ 17 ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಚಾರ್ಲ್ಸ್ II ರ ಮರಣದ ನಂತರ, ಅವರ ಸಾವಿಗೆ ಸಂತಾಪ ಸೂಚಿಸಲು ವಕೀಲರು ಹಾಗೂ ನ್ಯಾಯಾಧೀಶರು ಕಪ್ಪು ಬಟ್ಟೆಗಳನ್ನು ಧರಿಸಿದರು. ಆ ಬಳಿಕ ಇದುವೇ ಸಂಪ್ರದಾಯವಾಗಿ ಮುಂದುವರೆಯಿತು.

ಇದನ್ನೂ ಓದಿ: ಈ ರೆಸ್ಟೋರೆಂಟ್​​ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!

ಈ ಕಪ್ಪು ಬಣ್ಣವು ನ್ಯಾಯ, ಅಧಿಕಾರ ಮತ್ತು ಘನತೆಯ ಸಂಕೇತವಾಗಿದೆ. ವಕೀಲ ವೃತ್ತಿಯಲ್ಲಿ ಇರುವವರು ಕಪ್ಪು ಕೋಟು ಧರಿಸಿದಾಗ ಅವರ ಮುಖದಲ್ಲಿ ಕೆಲಸದ ಗಂಭೀರತೆ ಹಾಗೂ ನಿಷ್ಪಕ್ಷಪಾತತೆ ಎದ್ದು ಕಾಣುತ್ತದೆ. ಈ ಬಣ್ಣದಲ್ಲಿ ಕಲೆಗಳು ಗೋಚರಿಸುವುದಿಲ್ಲ. ಕಪ್ಪು ಬಣ್ಣದ ಕೋಟು ಧರಿಸಿದ ಕೂಡಲೇ ವಕೀಲರು ವೃತ್ತಿಪರರನ್ನಾಗಿ ಕಾಣುವಂತೆ ಮಾಡುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ