Viral News: ಈ ರೆಸ್ಟೋರೆಂಟ್ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!
ಸಾಮಾನ್ಯವಾಗಿ ಯಾವುದಾದರೂ ಹೋಟೆಲ್ ಅಥವಾ ರೆಸ್ಟೋರೆಂಟ್ಗಳಿಗೆ ಹೋದರೆ ಮೊಬೈಲ್ನಲ್ಲಿ ಫೋಟೋ ತೆಗೆದುಕೊಳ್ಳದವರು ಯಾರೂ ಇಲ್ಲ. ಈಗಂತೂ ಬರೀ ಫೋಟೋ ಮಾತ್ರವಲ್ಲ ರೀಲ್ಸ್ ಕೂಡ ಮಾಡುತ್ತಾರೆ. ಆದರೆ, ಈ ಹೋಟೆಲ್‌ಗೆ ಹೋದರೆ ನಿಮ್ಮ ಮೊಬೈಲ್ ಫೋನ್ ಅನ್ನು ಬುಟ್ಟಿಗೆ ಹಾಕಲೇಬೇಕು. ಈ ನಿಯಮವೇಕೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ನವದೆಹಲಿ, ಜನವರಿ 26: ಸಾಮಾನ್ಯವಾಗಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ರೆಸ್ಟೋರೆಂಟ್ಗೆ ಹೋದರೆ ಎಲ್ಲರೂ ಒಟ್ಟಾಗಿ ಫೋಟೋ ತೆಗೆದುಕೊಳ್ಳುತ್ತಾ, ವಿಡಿಯೋ ಮಾಡುತ್ತಾ ಎಂಜಾಯ್ ಮಾಡಿಕೊಂಡು ಊಟ ಮಾಡುತ್ತಾರೆ. ಹಿಂದೆಲ್ಲ ಊಟವನ್ನು ಮಾತ್ರ ಎಂಜಾಯ್ ಮಾಡುವ ಸ್ಥಳವಾಗಿದ್ದ ರೆಸ್ಟೋರೆಂಟ್ (Restaurant) ಈಗ ರೀಲ್ಸ್, ಫೋಟೋ ತೆಗೆಯುವ ಸ್ಟುಡಿಯೋ ರೀತಿ ಆಗಿಬಿಟ್ಟಿದೆ. ತಾವೇನು ತಿನ್ನುತ್ತೇವೆ, ತಾವೇನು ಮಾಡುತ್ತೇವೆ ಎಂಬುದನ್ನೆಲ್ಲ ಅಪ್ಡೇಟ್ ಮಾಡುವ ಜನರು ಸದಾಕಾಲ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ, ಈ ರೆಸ್ಟೋರೆಂಟ್‌ನಲ್ಲಿ ಮಾತ್ರ ಮೊಬೈಲ್ ಬಳಕೆ ಮಾಡುವುದು ನಿಷೇಧ.
ನಾವು ಯಾವುದೇ ಹೋಟೆಲ್‌ಗೆ ಹೋದರೆ, ಅಲ್ಲಿರುವ ಅರ್ಧದಷ್ಟು ಜನರು ತಮ್ಮ ತಟ್ಟೆಗಳಲ್ಲಿರುವ ಫುಡ್ನ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ನೋಡಬಹುದು. ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರವೇ ಅವರು ತಿನ್ನಲು ಪ್ರಾರಂಭಿಸುತ್ತಾರೆ. ತಿನ್ನುವಾಗಲೂ ಅವರು ತಮ್ಮ ಫೋನ್‌ಗಳನ್ನು ಇನ್ನೊಂದು ಕೈಯಲ್ಲಿ ಹಿಡಿದು ಸ್ಕ್ರೋಲ್ ಮಾಡುತ್ತಾ ಆ ಪೋಸ್ಟ್ಗೆ ಏನೆಲ್ಲ ಕಮೆಂಟ್ ಬಂದಿದೆ ಎಂದು ನೋಡುತ್ತಲೇ ತಿನ್ನುತ್ತಾರೆ. ಇನ್ನು ಕೆಲವರು ಫೋನ್ ಮಾಡುತ್ತಾ ತಿನ್ನುತ್ತಾರೆ. ಬಹುತೇಕ ಎಲ್ಲಾ ಹೋಟೆಲ್‌ಗಳಲ್ಲಿ ಇಂತಹ ದೃಶ್ಯಗಳು ಕಂಡುಬರುತ್ತವೆ. ಆದರೆ ಇದಕ್ಕೆ ಕಡಿವಾಣ ಹಾಕಲು ಪ್ರಪಂಚದಾದ್ಯಂತದ ಕೆಲವು ಪ್ರಸಿದ್ಧ ರೆಸ್ಟೋರೆಂಟ್‌ಗಳು ನೋ-ಫೋನ್ ನೀತಿಯನ್ನು ಜಾರಿಗೆ ತರುತ್ತಿವೆ. ಪ್ರಸಿದ್ಧ ಶೆಫ್ ಗಗನ್ ಆನಂದ್ ನಡೆಸುತ್ತಿರುವ ಮೆಷಾಲಿನ್ ಸ್ಟಾರ್ಟ್ ಎಂಬ ಥಾಯ್ ರೆಸ್ಟೋರೆಂಟ್‌ನಲ್ಲಿ ಈ ನೀತಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ವೈದ್ಯರಿಗೇ ಅಚ್ಚರಿ ಮೂಡಿಸಿರುವ ಈ ವ್ಯಕ್ತಿ 50 ವರ್ಷದಿಂದ ನಿದ್ರೆಯೇ ಮಾಡಿಲ್ಲವಂತೆ!
ಈ ರೆಸ್ಟೋರೆಂಟ್‌ನಲ್ಲಿ ಫೋನ್ ಬಳಸುವುದನ್ನು ನಿಷೇಧಿಸಲಾಗಿದೆ. ಮೇಜಿನ ಮೇಲೆ ಬುಟ್ಟಿ ಇಡಲಾಗಿರುತ್ತದೆ. ಎಲ್ಲರ ಫೋನ್‌ಗಳನ್ನು ಅದರಲ್ಲಿ ಇಡಬೇಕು. ಬಿಲ್ ಪಾವತಿಸಿದ ನಂತರವೇ ನೀವು ನಿಮ್ಮ ಫೋನ್‌ಗಳನ್ನು ತೆಗೆದುಕೊಳ್ಳಬೇಕು. ಇಲ್ಲಿ ಮಾತ್ರವಲ್ಲ, ಯುರೋಪ್, ಜಪಾನ್, ಅಮೆರಿಕ ಮತ್ತು ಏಷ್ಯಾದ ದೇಶಗಳ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಈ ನೋ ಫೋನ್ ನೀತಿಯನ್ನು ಪರಿಚಯಿಸಲಾಗಿದೆ. ಭಾರತದ ಕೆಲವು ರೆಸ್ಟೋರೆಂಟ್‌ಗಳಲ್ಲಿಯೂ ಇದೇ ರೀತಿಯ ಬೋರ್ಡ್‌ಗಳಿವೆ.
ಇಂತಹ ರೆಸ್ಟೋರೆಂಟ್‌ನಲ್ಲಿ ಫೋಟೋ ತೆಗೆಯುವುದು ಮತ್ತು ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ. ತುರ್ತು ಪರಿಸ್ಥಿತಿ ಇದ್ದರೆ, ನೀವು ಪಕ್ಕಕ್ಕೆ ಹೋಗಿ ಮಾತನಾಡಬೇಕು ಅಥವಾ ಹೊರಗೆ ಹೋಗಬೇಕು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಬೇಕಾದ ರೆಸ್ಟೋರೆಂಟ್‌ಗಳಲ್ಲಿ ಫೋನ್‌ಗಳು ಗುಣಮಟ್ಟದ ಸಮಯವನ್ನು ಹಾಳುಮಾಡಬಹುದು ಎಂಬುದು ಇದಕ್ಕೆ ಇನ್ನೊಂದು ಕಾರಣ. ಹಾಗೂ ನೀವೇನಾದರೂ ಅಂತಹ ರೆಸ್ಟೋರೆಂಟ್‌ಗಳಲ್ಲಿ ಮೊಬೈಲ್ ಬಳಸಿದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ!
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
