Viral : ಬಗೆಬಗೆಯ ಥೀಮ್ನಡಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿ ಪೂಜಿಸುವ ಪರಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವಂಥದ್ದು ಗೊತ್ತೇ ಇದೆ. ಜೆಮ್ಶೆಡ್ಪುರದಲ್ಲಿರುವ ಈ ಗಣೇಶ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಕಾರಣ, ಆಧಾರ ಕಾರ್ಡ್ ಮಾದರಿಯಲ್ಲಿ ಮಂಟಪದ ವಿನ್ಯಾಸದಲ್ಲಿ ಇವನನ್ನು ಕೂರಿಸಿದ್ದಾರೆ. 6ನೇ ಶತಮಾನದಲ್ಲಿ ಕೈಲಾಸದಲ್ಲಿರುವ ಗಣೇಶನ ವಿಳಾಸ ಮತ್ತು ಅವನ ಜನ್ಮದಿನಾಂಕವನ್ನು ಆಧಾರ್ ಕಾರ್ಡಿನ ಮಾದರಿಯಲ್ಲಿ ನಮೂದಿಸಿದ್ದಾರೆ. ಫೋಟೋ ಸ್ಥಳದಲ್ಲಿ ಗಣೇಶನ ವಿಗ್ರಹ ಇರಿಸಿದ್ದಾರೆ. ಪಕ್ಕದಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳಿರುವ ಗೂಗಲ್ ಲಿಂಕ್ ಪರದೆ ತೆರೆದುಕೊಳ್ಳುತ್ತದೆ. ಅದರ ಮೇಲೆ ನಮೂದಿಸಲಾದ ವಿಳಾಸ ಹೀಗಿದೆ. ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE.
Jharkhand | A Ganesh Pandal in Jamshedpur has been made in the form of an Aadhar card which identifies the address of Lord Ganesha in Kailash & his date of birth during the 6th century #GaneshChaturthi pic.twitter.com/qupLStkut6
ಇದನ್ನೂ ಓದಿ— ANI (@ANI) September 1, 2022
ಈ ವಿನ್ಯಾಸದ ಆಯೋಜಕ ಸರವ್ ಕುಮಾರ್, ‘ಕೊಲ್ಕೊತ್ತಾದಲ್ಲಿ ಫೇಸ್‌ಬುಕ್ ಥೀಮ್ನಲ್ಲಿ ಗಣೇಶನನ್ನು ಕೂರಿಸಿದ್ದರು. ಅಲ್ಲಿಗೆ ಭೇಟಿ ನೀಡಿದ ನಂತರ ಆಧಾರ ಕಾರ್ಡ್ ಥೀಮ್ನಲ್ಲಿ ಯಾಕೆ ಮಾಡಬಾರದು? ಎಂಬ ಆಲೋಚನೆ ಬಂದಿತು. ದೇವರೂ ಆಧಾರ್ ಕಾರ್ಡ್ ಹೊಂದಲು ಸಾಧ್ಯವಾಗಿದೆಯೆಂದರೆ ನಮಗೂ ಸಾಧ್ಯವಾಗುತ್ತದೆ ಎಂದು ಜನಕ್ಕೆ ಮನವರಿಕೆ ಆಗಬೇಕು. ಈ ಮೂಲಕ ಎಲ್ಲರೂ ಬೇಗ ಆಧಾರ ಕಾರ್ಡ್ ಪಡೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಾರೆ.
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:26 am, Fri, 2 September 22