ಬದುಕು ಎಷ್ಟು ಕ್ರೂರಿ ಅಲ್ವಾ, ಕೆಲವರಿಗೆ ಐಷಾರಾಮಿ ಬದುಕು, ಇನ್ನು ಕೆಲವರಿಗೆ ಸೂರಿಲ್ಲದ ಬದುಕು. ಒಬ್ಬರಿಗೆ ಕೂತು ತಿನ್ನುವಷ್ಟು ಇದ್ದರೂ ಆರೋಗ್ಯವಿರುವುದಿಲ್ಲ. ಇನ್ನೊಬ್ಬರಿಗೆ ದುಡಿದರೆ ಮಾತ್ರ ಇವತ್ತಿನ ಜೀವನ ಸಾಗುವುದು. ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ನಾಳೆಯ ಭವಿಷ್ಯದ ಚಿಂತೆಯಾದರೆ, ಇನ್ನು ಕೆಲವರಿಗೆ ಇವತ್ತು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಎನ್ನುವ ಆಲೋಚನೆ. ನಮಗೆ ಒಂದು ದಿನ ತಿನ್ನಲು ಆಹಾರವಿಲ್ಲದೇ ಹೋದರೆ, ಹಸಿವನ್ನು ಸಹಿಸುವುದು ಕಷ್ಟವಾಗುತ್ತದೆ. ಅದೆಷ್ಟೋ ಜನರು ಇರಲು ಸೂರು, ಹೊಟ್ಟೆಗೂ ಸರಿಯಾಗಿಲ್ಲದೆ, ರಸ್ತೆ ಬದಿಯಲ್ಲಿ ಅಡುಗೆ ಅಲ್ಲೇ ತಮ್ಮ ಜೀವನವನ್ನು ಕಳೆಯುತ್ತಾರೆ. ಆದರೆ ಇದೀಗ ಯಾವುದೇ ಭಯ ಆತಂಕವಿಲ್ಲದೇ, ಕುಟುಂಬವೊಂದು ರೈಲು ಹಳಿಗಳ ನಡುವೆ ಕುಳಿತು ಒಲೆಯ ಮೇಲೆ ಆಹಾರವನ್ನು ತಯಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ರೈಲು ಹಳಿಗಳ ನಡುವೆ ಕುಳಿತು ಒಲೆಯ ಮೇಲೆ ಆಹಾರವನ್ನು ತಯಾರಿಸುತ್ತಿದ್ದರೆ ಇತ್ತ ಹುಡುಗಿಯೊಬ್ಬಳು ಓದುತ್ತಿದ್ದಾಳೆ. ಅಲ್ಲೇ ಕೆಲ ಮಕ್ಕಳು ಸುತ್ತಲೂ ಓಡುತ್ತಿದ್ದರೆ, ಇನ್ನು ಕೆಲವರು ಮಲಗಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬೈ ಸೆಂಟ್ರಲ್ ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ವೀಡಿಯೊವನ್ನು ಗಮನಿಸಿದ್ದು, ಆ ತಕ್ಷಣವೇ ಪಶ್ಚಿಮ ರೈಲ್ವೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ ಚಿರತೆಯ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾದ ಶ್ವಾನ
Between the railway tracks at Mahim JN@RailMinIndia @grpmumbai @drmmumbaicr @drmbct pic.twitter.com/YtTg6gWmWC
— मुंबई Matters™ (@mumbaimatterz) January 24, 2024
ಈಗಾಗಲೇ ವೈರಲ್ ಆಗಿರುವ ಈ ವಿಡಿಯೋವು 21,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, “ತುಂಬಾ ಅಪಾಯಕಾರಿ ದಯವಿಟ್ಟು ಯಾರಾದರೂ ಅದರ ಮೇಲೆ ಕ್ರಮ ತೆಗೆದುಕೊಳ್ಳಿ” ಎಂದರೆ, ಮತ್ತೊಬ್ಬರು “ನಿಮ್ಮ ಜೀವನವು ಅಕ್ಷರಶಃ ಸರಿಯಾದ ಹಾದಿಯಲ್ಲಿದ್ದಾಗ” ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು,” ಇದು ತುಂಬಾ ಅಪಾಯಕಾರಿ ದಯವಿಟ್ಟು ಯಾರಾದರೂ ಕ್ರಮ ತೆಗೆದುಕೊಳ್ಳಿ” ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ