
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ತಮಾಷೆಯ ವಿಡಿಯೋ ಸೇರಿದಂತೆ ಫೋಟೋ ವೈರಲ್ ಆಗುತ್ತಿರುತ್ತವೆ. ಭಾರತೀಯ ವಾಯುಪಡೆ ದಿನದ (Indian Airforce Day) ಆಚರಣೆಯೊಂದಿಗೆ ಊಟದ ಮೆನು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಅಕ್ಟೋಬರ್ 8 ರಂದು ಐಎಎಫ್‌ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನು (Menu) ಸಖತ್ ವೈರಲ್ ಆಗಿದೆ. ಆಪರೇಷನ್ ಸಿಂಧೂರ್ ದಾಳಿಯ ಸಮಯದಲ್ಲಿ ವಾಯುಪಡೆಯು ಗುರಿಯಾಗಿಸಿಕೊಂಡ ಪಾಕಿಸ್ತಾನದ ನಗರಗಳ ಹೆಸರನ್ನು ಪ್ರತಿಯೊಂದು ಖಾದ್ಯಕ್ಕೂ ಇಡಲಾಗಿರುವುದು ವಿಶೇಷ. ಈ ಊಟದ ಮೆನು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಈ ಕ್ರಿಯೇಟಿವಿಯನ್ನು ಮೆಚ್ಚಿಕೊಂಡಿದ್ದಾರೆ.
ಶಿವ ಅರೂರ್ (Shiv Aroor) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್‌ನಲ್ಲಿ ಐಎಎಫ್ ನ 93 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿವಿಧ ಭಕ್ಷ್ಯಗಳನ್ನೊಳಗೊಂಡ ಮೆನುವನ್ನು ಹಂಚಿಕೊಳ್ಳಲಾಗಿದೆ. ಈ ಮೆನುವಿನಲ್ಲಿ ‘ರಾವಲ್ಪಿಂಡಿ’ ಚಿಕನ್ ಟಿಕ್ಕಾ ಮಸಾಲಾ, ‘ರಫಿಕಿ’ ರ್ಹಾರಾ ಮಟನ್, ‘ಭೋಲಾರಿ’ ಪನೀರ್ ಮೇಥಿ ಮಲೈ, ‘ಸುಕ್ಕುರ್’ ಶಾಮ್ ಸವೇರಾ ಕೋಫ್ತಾ, ‘ಸರ್ಗೋಧಾ’ ದಾಲ್ ಮಖಾನಿ, ‘ಜಾಕೋಬಾಬಾದ್’ ಮೇವಾ ಪುಲಾವ್ ಹಾಗೂ ‘ಬಹವಲ್‌ಪುರ್’ ನಾನ್ ಮುಖ್ಯ ಕೋರ್ಸ್‌ಗಳಿವೆ. ಇನ್ನು ಸಿಹಿ ತಿಂಡಿಗಳಾದ ‘ಬಾಲಕೋಟ್’ ತಿರಮಿಸು, ‘ಮುಜಫರಾಬಾದ್’ ಕುಲ್ಫಿ ಫಲೂದಾ ಹಾಗೂ ‘ಮುರಿಡ್ಕೆ’ ಮೀತಾ ಪಾನ್ ಹೀಗೆ ವಿವಿಧ ಖಾದ್ಯಗಳು ಇರುವುದನ್ನು ನೀವು ನೋಡಬಹುದು.
Non-mediocre food menu.
Courtesy Air Force Day celebrations. pic.twitter.com/4t0Xlnhvk6— Shiv Aroor (@ShivAroor) October 9, 2025
Greetings to all the courageous Air Warriors and their families on Air Force Day. The Indian Air Force epitomises bravery, discipline and precision. They have played a vital role in safeguarding our skies, including during the most challenging situations. Their role during…
— Narendra Modi (@narendramodi) October 8, 2025
ಇದನ್ನೂ ಓದಿ:Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಐಎಎಫ್ ಕಾರ್ಯಕ್ರಮ ಆಯೋಜಕರು ಉತ್ತಮ ಹಾಸ್ಯಪ್ರಜ್ಞೆ ಹೊಂದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ಈ ತಿಂಗಳ ಖಾದ್ಯ: ರಫೇಲ್ ರಾಬ್ರಿ ಎಂದರೆ, ಇನ್ನೊಬ್ಬರು ತಂದೂರಿ ಶಿವಾನಿ ಇಲ್ಲವೇ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Thu, 9 October 25