ಅಮೆರಿಕಾದಲ್ಲಿ ನಡೆದ ಅಪಘಾತದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ (Social media) ಹರಿದಾಡುತ್ತಿದೆ. ರಸ್ತೆ ಖಾಲಿಯಿದ್ದರೂ ಮೂರು ಎಸ್ಯುವಿ ಕಾರುಗಳು ಬಂದು ಒಂದಕ್ಕೊಂಡು ಡಿಕ್ಕಿಹೊಡೆದಿವೆ. ಈ ಆಘಾತಕಾರಿ ದೃಶ್ಯ ಫುಲ್ ವೈರಲ್ ಆಗಿದೆ. ಮೂರು ಕಾರುಗಳು ಡಿಕ್ಕಿ ಹೊಡೆದ ಅಪಘಾತದ (Accident) ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಬೇರೆ ಬೇರೆ ರಸ್ತೆಯಿಂದ ಬಂದ ಮೂರು ಎಸ್ಯುವಿ ಕಾರುಗಳ (Car) ಮಧ್ಯೆ ಡಿಕ್ಕಿಯಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ.
ವಿಡಿಯೊವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ಸಿಗ್ನಲ್ನಲ್ಲಿ ನಿಂತಿದ್ದ ಕಾರಿನ ಡ್ಯಾಶ್ ಕ್ಯಾಮ್ನಿಂದ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ ಗಮನಿಸುವಂತೆ ಪಾದಚಾರಿಯೋರ್ವರು ರಸ್ತೆ ದಾಟುತ್ತಿರುವುದನ್ನು ನೋಡಬಹುದು. ಇದ್ದಕ್ಕಿದ್ದಂತೆ ಡಿಕ್ಕಿ ಹೊಡೆದ ಎರಡು ಕಾರುಗಳು ಎಸ್ತೆ ದಾಟುತ್ತಿದ್ದ ವ್ಯಕ್ತಿಯ ಹತ್ತಿರಕ್ಕೆ ಬಂದು ನಿಲ್ಲುತ್ತವೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಮತ್ತೊಂದು ಎಸ್ಯುವಿ ಕಾರು ಮತ್ತೊಂದು ಕಾರನ್ನು ತಳ್ಳಿಕೊಂಡು ಹೋಗಿದೆ.
ಈ ಘಟನೆಯು ಅಕ್ಟೋಬರ್ 17ರಂದು ನಡೆದಿದೆ. ಸಿಗ್ನಲ್ ಬಿದ್ದಿದ್ದರೂ ಅದನ್ನು ಗಮನಿಸದ ಚಾಲಕ ಕಾರನ್ನು ಮುಂದಕ್ಕೆ ಓಡಿಸಿದ್ದರಿಂದ ಘಟನೆ ಸಂಭವಿಸಿದೆ ಎಂದು ಓರ್ವರು ಹೇಳಿದ್ದಾರೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಈ ವಿಡಿಯೊ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ 25,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಗೆ ಏನೂ ಆಗಿಲ್ಲ ಎಂಬುದು ಸಮಾಧಾನ ತರುವ ಸಂಗತಿ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
Shocking News: ಮಾತ್ರೆ ಎಂದು ತಪ್ಪಾಗಿ ತಿಳಿದು ಏರ್-ಪಾಡ್ ನುಂಗಿದ ಯುವತಿ!
Shocking Video: ರೆಸ್ಟೋರೆಂಟ್ನಲ್ಲಿ ಕೋಪ ಬಂದಿಂದ್ದಕ್ಕೆ ಮ್ಯಾನೇಜರ್ ಮುಖದ ಮೇಲೆ ಬಿಸಿಬಿಸಿ ಸೂಪ್ ಎರಚಿದ ಯುವತಿ!
Published On - 12:43 pm, Wed, 24 November 21