ಸೋಷಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಪಟ್ಟ, ಕ್ಯೂಟ್-ಭಯಾನಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಪ್ರಾಣಿಗಳ ಚೇಷ್ಟೆ, ಕಾಳಗ, ಅಟ್ಯಾಕ್ ಹೀಗೆ ವಿಧವಿಧದ ದೃಶ್ಯಗಳು ತುಂಬ ಖುಷಿ ಕೊಡುತ್ತವೆ..ಅಬ್ಬಾ, ಭಯಾನಕ ಎನ್ನಿಸುತ್ತವೆ. ಆದರೆ ನಾವಿಲ್ಲಿ ತೋರಿಸಿರುವ ವಿಡಿಯೋ ನೋಡಿ, ನಿಮಗೆ ರೋಮಾಂಚನ ಆಗದೆ ಇದ್ದರೆ ಹೇಳಿ ! ಇದು ಹುಲಿಯ ಕುಣಿತವಲ್ಲ..ಜಿಗಿತದ ದೃಶ್ಯ. ಒಂದು ಬೋಟ್ನಿಂದ ನೀರಿಗೆ ಹುಲಿರಾಯ ಜಂಪ್ ಮಾಡಿದ ಚೆಂದ, ಆ ಗತ್ತು ಇದೆಯಲ್ಲ ಮೈ ಜುಂ ಎನ್ನಿಸದೆ ಇರದು.
ಇದೊಂದು ಹಳೇ ವಿಡಿಯೋ ಎಂಬುದನ್ನು ಶೇರ್ ಮಾಡಿಕೊಂಡಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರೇ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್ಬನ್ಸ್ ರಾಷ್ಟ್ರೀಯ ಉದ್ಯಾನವನದ್ದು. ಇದೀಗ ಮತ್ತೊಮ್ಮೆ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಯಾವುದೋ ಝೂದಲ್ಲಿ ಇದ್ದ ಹುಲಿಯನ್ನು ಅಲ್ಲಿಂದ ಕಾಡಿಗೆ ಬಿಡಲೆಂದು ಬೋಟ್ನಲ್ಲಿ ನದಿ ಮೂಲಕ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಬೋಟ್ನಿಂದ ಈ ಹುಲಿ ನದಿಗೆ ಧುಮುಕಿದೆ. ನಂತರ ಅಲ್ಲಿಂದ ಈಜಿಕೊಂಡು ಹೋಗಿ ಅಲ್ಲಿಯೇ ದಡದಲ್ಲಿರುವ ಕಾಡು ಸೇರಿಕೊಂಡಿದೆ. ಆ ಹುಲಿಯ ಹೆಸರು ರಿಚರ್ಡ್ ಪಾರ್ಕರ್ ಎಂದು ಹೇಳಲಾಗಿದ್ದು, ಬೋಟ್ನಿಂದ ಜಿಗಿದ ಮೇಲೆ ಒಂದು ಸಲವೂ ತಿರುಗಿ ನೋಡದೆ ಈಜುಕೊಂಡು ಹೋಗಿದ್ದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
That tiger sized jump though. Old video of rescue & release of tiger from Sundarbans. pic.twitter.com/u6ls2NW7H3
— Parveen Kaswan, IFS (@ParveenKaswan) April 17, 2022
ವಿಡಿಯೋ ನೋಡಿದ ಜನರೆಂತೂ ಭರ್ಜರಿ ಖುಷಿಪಟ್ಟಿದ್ದಾರೆ. ಹುಲಿಯ ಗತ್ತು ನೋಡಿ ಸಿಕ್ಕಾಪಟೆ ಹೊಗಳಿದ್ದಾರೆ. ಹೊರಟಮೇಲೆ ತಿರುಗಿ ನೋಡಬಾರದು ಎಂಬ ಪಾಠವನ್ನು ಈ ಟೈಗರ್ನಿಂದ ಕಲಿತೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದರೆ, ಏನು ಹೇಳಲೂ ತಿಳಿಯುತ್ತಿಲ್ಲವೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ
Published On - 9:48 pm, Sun, 17 April 22