ಸರಿಯಾದ ಊಟ, ನಿದ್ರೆ ಪಡೆಯುತ್ತಿದ್ದರೆ ಮಕ್ಕಳು ಯಾವಾಗಲೂ ಖುಷಿಯಿಂದ ಆಟವಾಡುತ್ತಾ ಸಂತೋಷದಲ್ಲಿರುತ್ತಾರೆ. ಮಕ್ಕಳ ನಗುವಲ್ಲಿಯೇ ಪೋಷಕರು ಹೆಚ್ಚು ಸಂತೋಷವಾಗಿರುವುದು. ಮಕ್ಕಳ ನೆಚ್ಚಿನ ಹಾಡು ಹೇಳಿದಾಗಲಂತೂ ಅವರ ಖುಷಿಗೆ ಮಿತಿಯೇ ಇಲ್ಲ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಗ್ಯಾಸ್ಟ್ರೋಎಂಟರೈಟಿಸ್‌ನಿಂದ ಆಸ್ಪತ್ರೆಗೆ ದಾಖಲಾದ ಮಗು ಟಿವಿಯಲ್ಲಿ ತನಗಿಷ್ಟದ ಹಾಡು ಕೇಳಿ ನೃತ್ಯ ಮಾಡುತ್ತಿದೆ. ಈ ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ತುಣುಕಿನಲ್ಲಿ ಮಿಗುಲ್ ಎಂಬ ಪುಟ್ಟ ಮಗು ತನ್ನ ನೆಚ್ಚಿನ ಹಾಡನ್ನು ಹಾಡುತ್ತಿದೆ. ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾದ ಮಗು ಟಿವಿ ನೋಡುತ್ತಾ ತನ್ನ ನೆಚ್ಚಿನ ಹಾಡು ಕೇಳಿ ಮನಸ್ಪೂರ್ತಿ ನಗುತ್ತಿದೆ. ಗುಡ್ನ್ಯೂಸ್ ಮೂವ್ಮೆಂಟ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
Even in difficult times at the hospital this little boy sings & dances.
(Brazil) Little Miguel was hospitalized last week with gastroenteritis but that didn’t keep him from singing & dancing when his favorite song came on the TV. He is now back at home doing well.
(?:Pericles) pic.twitter.com/BOga5UL1gH— GoodNewsMovement (@GoodNewsMoveme3) October 9, 2021
ಪುಟ್ಟ ಮಗುವಾದ ಮಿಗುಲ್ ಹಾಡುತ್ತ, ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋ ಇದೀಗ 7.5ಕೆ ವೀಕ್ಷಣೆಗಳನ್ನು ಜತೆಗೆ ನೂರಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ದೃಶ್ಯ ನೋಡಿ ಪ್ರತಿಕ್ರಿಯಿಸಿದ ನೆಟ್ಟಿಗರು ಸಂಗೀತವು ಅಕ್ಷರಶಃ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಹೇಳಿದ್ದಾರೆ. ನಾನು ಈ ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಮತ್ತೋರ್ವರು ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ:
Viral Video: ಪುಟ್ಟ ಗಿಳಿಯೊಂದು ಬೆಕ್ಕನ್ನು ಹೆದರಿಸಿದ ಪರಿ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್
Viral Video: ಮನುಷ್ಯರಂತೇ ಕುಳಿತು ಬಟ್ಟೆ ಒಗೆಯುವ ಈ ಚಿಂಪಾಜಿಯ ವಿಡಿಯೋವನ್ನೊಮ್ಮೆ ನೀವು ನೋಡಲೇಬೇಕು!