Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು

Tortoise : ಆಮೆಯೊಂದು ನಡೆಯುತ್ತಲೇ ಉಲ್ಟಾ ಬೀಳುತ್ತದೆ. ಇನ್ನೊಂದು ಆಮೆ ಅದು ಮೇಲೇಳಲು ಸಹಾಯ ಮಾಡುತ್ತದೆ. ನೋಡಿ ವಿಡಿಯೋ.

Viral Video: ನೀ ನನಗಾದರೆ ನಾ ನಿನಗೆ ಎನ್ನುತ್ತಿವೆ ಈ ಆಮೆಗಳು
ಡಬ್ಬು ಬಿದ್ದಿರುವ ಆಮೆಯನ್ನು ಎಬ್ಬಿಸುತ್ತಿರುವ ಇನ್ನೊಂದು ಆಮೆ
Edited By:

Updated on: Aug 27, 2022 | 3:36 PM

Viral Video: ಪ್ರಾಣಿಗಳು ಯಾವಾಗಲೂ ಚಿತ್ರಗಳಲ್ಲಿ ಇರುವಂತೆಯೇ ಇರಲಾರವು. ಅವುಗಳಿಗೂ ಜೀವ ಇದೆ. ಬೇಕಾದಹಾಗೆ ಉರುಳಾಡಿ, ನೆಗೆದಾಡಿ ಮೈಮನಸ್ಸನ್ನು ಹಗೂರ ಮಾಡಿಕೊಳ್ಳುವುದನ್ನು ಅವೂ ಮಾಡುತ್ತಿರುತ್ತದೆ. ಕೆಲವೊಮ್ಮೆ ಅವುಗಳಿಗೆ ಗೊತ್ತಿಲ್ಲದಂತೆ ಇನ್ನೇನೋ ಘಟಿಸುತ್ತಿರುತ್ತದೆ. ಅಂಥ ವಿಡಿಯೋ ಸೆರೆ ಹಿಡಿದಾಗ ಅಪರೂಪ ಎಂದು ವೈರಲ್ ಆಗುತ್ತವೆ. ಬೀಯಿಂಗ್ ಬ್ರೋಸ್ (ರೆಡ್ಡಿಟ್) ಇದು ವಿವಿಧ ಪ್ರಾಣಿಗಳು ಮನುಷ್ಯರಿಗೂ ಮತ್ತು ಇತರೇ ಪ್ರಾಣಿಗಳಿಗೂ ಸಹಾಯ ಮಾಡುವಂಥ ಅನೇಕ ವಿಡಿಯೋಗಳಿಂದ ತುಂಬಿದೆ. ಇದಕ್ಕೆ ಹೊಸ ವಿಡಿಯೋ ಸೇರ್ಪಡೆಯಾಗಿದ್ದೆಂದರೆ ಈ ಆಮೆಗಳದ್ದು.

ತಲೆಕೆಳಗಾಗಿ ಬಿದ್ದ ಆಮೆಗೆ ಸಹಾಯ ಮಾಡಿದೆ ಇನ್ನೊಂದು ಆಮೆ. ಎಂಥ ಮುದ್ದಾಗಿದೆಯಲ್ವಾ? ಸುಮಾರು ಆರೂವರೆ ಸಾವಿರದಷ್ಟು ವೋಟ್ ಪಡೆದಿದೆ ಈ ವಿಡಿಯೋ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:34 pm, Sat, 27 August 22