ಮಿಲಿಟರಿ ನೆಲೆಯಲ್ಲಿ 16 ಸೈನಿಕರೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ ಮಹಿಳೆ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಇಂಗ್ಲೆಂಡ್​ನ ಪ್ಯಾರಾಟ್ರೂಪರ್‌ಗಳು ಮಿಲಿಟರಿ ನೆಲೆಯಲ್ಲಿ ಓರ್ವ ಮಹಿಳೆ ಮತ್ತು ಸೈನಿಕರು ಅಸಭ್ಯವಾಗಿ ನಡೆದುಕೊಂಡ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯಿಂದ ರಕ್ಷಣಾ ಸಚಿವರು ಮುಜುಗರಕ್ಕೊಳಗಾಗಿದ್ದಾರೆ.

ಮಿಲಿಟರಿ ನೆಲೆಯಲ್ಲಿ 16 ಸೈನಿಕರೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ ಮಹಿಳೆ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ವೈರಲ್ ವಿಡಿಯೋದ ತುಣುಕು ಚಿತ್ರ
Edited By:

Updated on: Jun 11, 2022 | 5:46 PM

ಸೈನಿಕರೆಂದರೆ ಅದೊಂದು ದೇಶದ ಶಕ್ತಿ. ಇದೇ ಕಾರಣಕ್ಕೆ ಜನರು ಸೈನಿಕರನ್ನು ಗೌರವಿಸುತ್ತಾರೆ. ಆದರೆ ಇಂಥ ಸೈನಿಕರೇ ಅಶ್ಲೀಲವಾಗಿ ತೊಡಗಿಸಿಕೊಂಡರೆ ಹೇಗೇ? ಇಂಗ್ಲೆಂಡ್​ನಲ್ಲಿ (UK) ಓರ್ವ ಮಹಿಳೆಯೊಂದಿಗೆ ಸೈನಿಕರು ಅಸಭ್ಯವಾಗಿ ನಡೆದುಕೊಂಡ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಿಂದಾಗಿ ರಕ್ಷಣಾ ಸಚಿವರು ಮುಜುಗರಗೊಂಡಿದ್ದು, ಸೈನಿಕರ ವರ್ತನೆಯಿಂದ ಆಕ್ರೋಶಗೊಂಡಿದ್ದಾರೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಾಲ್ಚೆಸ್ಟರ್‌ನ ಮರ್ವಿಲ್ಲೆ ಶಿಬಿರದಲ್ಲಿ ಈ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ಒಟ್ಟು 16 ವಾಯು ದಾಳಿ ಪಡೆಯ ಸೈನಿಕರೊಂದಿಗೆ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿವಿಧ ತುಣುಕುಗಳನ್ನು ಹಡಿಬಿಡಲಾಗಿದೆ ಎಂದು ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ

ಮಹಿಳೆಯೊಬ್ಬಳು ಪುರುಷರ ಗುಂಪಿನಲ್ಲಿ ಸೇರಿಕೊಂಡು ಲೈಂಗಿಕ ಕ್ರಿಯೆ ನಡೆಸುತ್ತಿರುವುದನ್ನು ವೈರಲ್ ವೀಡಿಯೊಗಳು ತೋರಿಸುತ್ತವೆ. “ಸೇನೆಯು ತಮ್ಮ ಎಲ್ಲಾ ಸಿಬ್ಬಂದಿಯಿಂದ ಅತ್ಯುನ್ನತ ಗುಣಮಟ್ಟದ ನಡವಳಿಕೆಯನ್ನು ನಿರೀಕ್ಷಿಸುತ್ತದೆ. ಯಾರಾದರೂ ಈ ಮಾನದಂಡಗಳನ್ನು ನಿರ್ವಹಿಸದಿದ್ದರೆ ತನಿಖೆ ನಡೆಸಲಾಗುವುದು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ರಾಯಲ್ ಮಿಲಿಟರಿ ಪೋಲಿಸ್ ಸೇನೆಯ ಸಿಬ್ಬಂದಿಯನ್ನು ಒಳಗೊಂಡಿರುವ ಹಲವಾರು ವೀಡಿಯೊಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: ಓಹ್! ಸೋ ಸ್ವೀಟ್” ಎಂದ ಬಾಲಕನ ವಿಡಿಯೋ ವೈರಲ್

ಮೆರ್ವಿಲ್ಲೆ ಬ್ಯಾರಕ್ಸ್ ಕಾಲ್ಚೆಸ್ಟರ್ ಗ್ಯಾರಿಸನ್‌ನ ಕೇಂದ್ರ ಶಿಬಿರವಾಗಿದೆ ಇದಾಗಿದೆ. ಇಲ್ಲಿ 16 ಏರ್ ಅಸಾಲ್ಟ್ ಬ್ರಿಗೇಡ್, 18 ಆರ್ಮಿ ಎಜುಕೇಶನ್ ಸೆಂಟರ್, ಡಬ್ಲ್ಯುಆರ್‌ವಿಎಸ್ ಕೇಂದ್ರ ಮತ್ತು ಏಕಾಂಗಿ ಸೇವಾ ಸಿಬ್ಬಂದಿಗೆ ವಾಸಿಸುವ ವಸತಿ ಸೌಕರ್ಯವನ್ನು ಹೊಂದಿದೆ. ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sat, 11 June 22