AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಓಹ್! ಸೋ ಸ್ವೀಟ್” ಎಂದ ಬಾಲಕನ ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ ಭಾವಿ ಪತಿಯಿಂದ ಮದುವೆಯ ಪ್ರಸ್ತಾಪವನ್ನು ಪಡೆಯುತ್ತಾಳೆ. ಈ ವೇಳೆ ಆಕೆಯ ಐದು ವರ್ಷದ ಮಗನ ರಿಯಾಕ್ಷನ್ ಹೇಗಿರುತ್ತದೆ ಎಂಬುದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಓಹ್! ಸೋ ಸ್ವೀಟ್ ಎಂದ ಬಾಲಕನ ವಿಡಿಯೋ ವೈರಲ್
ಮದುವೆ ಪ್ರಸ್ತಾಪ
TV9 Web
| Edited By: |

Updated on: Jun 11, 2022 | 3:40 PM

Share

ಈ ರಾತ್ರಿ ಕಳೆದರೆ ವೀಕೆಂಡ್ ಬರಲಿದೆ. ಇದಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ವಾರಾಂತ್ಯದ ವೈಭವವನ್ನು ನೀವು ಆನಂದಿಸುತ್ತಿರುವಾಗ ನಾವು ನಿಮಗಾಗಿ ವಿಡಿಯೋವೊಂದನ್ನು ಹಂಚಿಕೊಳ್ಳುತ್ತಿದ್ದೇವೆ. ಈ ವಿಡಿಯೋ ನಿಮಗೆ ಸಂತೋಷನ್ನು ನೀಡಲಿದೆ. ಈ ವಿಡಿಯೋ ಕ್ಲಿಪ್​ನಲ್ಲಿ ತನ್ನ ತಾಯಿಯ ಆಶ್ಚರ್ಯಕರ ಮದುವೆಯ ಪ್ರಸ್ತಾಪ(Proposal)ವನ್ನು 5 ವರ್ಷದ ಹುಡುಗ ವಿಡಿಯೋ ಮಾಡಿದ್ದು, ಈ ವೇಳೆ ಆತ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಕೇಳಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾಲಕ ರಿಯಾಕ್ಷನ್ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಸಂತೋಷವನ್ನು ನೀಡುತ್ತಿದೆ. ಇದನ್ನೂ ಓದಿ: Viral Video: ಗಾಯಗೊಂಡ ತಂದೆಯನ್ನು ಆರೈಕೆ ಮಾಡಿದ ಅಂಬೆಗಾಲಿಡುವ ಮಗು! ನೆಟ್ಟಿಗರು ಫಿದಾ

ವೈರಲ್ ವಿಡಿಯೋವನ್ನು ಗಮನಿಸಿದಾಗ, ಮಹಿಳೆಯೊಬ್ಬಳು ತನ್ನ ಭಾವಿ ಪತಿಯಿಂದ ಮದುವೆಯ ಪ್ರಸ್ತಾಪವನ್ನು ಪಡೆಯುತ್ತಾಳೆ. ಅದರಂತೆ ಆ ವ್ಯಕ್ತಿ ಮೊಣಕಾಲಿನಲ್ಲಿ ಕುಳಿತುಕೊಂಡು ಪ್ರಪೋಸ್ ಮಾಡಲು ಮುಂದಾಗುತ್ತಾನೆ. ಈ ವೇಳೆ ಮಹಿಳೆಯ 5 ವರ್ಷದ ಮಗ ವಿಡಿಯೋ ಮಾಡಿದ್ದು, ಆರಂಭದಲ್ಲಿ ಆಕ್ಷನ್ ಎಂದು ಹೇಳುತ್ತಾನೆ. ನಂತರ ಕಟ್, ಕಟ್, ಕಟ್ ಹೇಳುತ್ತಾನೆ. ಈ ವೇಳೆ ಮಹಿಳೆ ಆಶ್ಚರ್ಯಗೊಂಡಳು. ಇದರ ಕೆಲವು ಸೆಕೆಂಡುಗಳಲ್ಲಿ ಮಹಿಳೆ ತನಗೆ ಪ್ರಪೊಸ್ ಮಾಡಿದ ವ್ಯಕ್ತಿಯನ್ನ ಆಲಂಗಿಸುತ್ತಾಳೆ, ನೋಡುನೋಡುತ್ತಲೇ ಆಕೆ ಚುಂಬನ ನೀಡಲು ಪ್ರಾರಂಭಿಸುತ್ತಾಳೆ. ಈ ವೇಳೆ ಬಾಲಕ ಓಹ್! ಸೋ ಸ್ವೀಟ್ ಎಂದು ಹೇಳುತ್ತಾನೆ.

ಇದನ್ನೂ ಓದಿ: Viral Video: ಗಾಯಗೊಂಡಿದ್ದ ಪಕ್ಷಿಯನ್ನು ಕಾಪಾಡಲು ಹೋಗಿ ತಾನೇ ದಾರುಣವಾಗಿ ಅಂತ್ಯ ಕಂಡ ಉದ್ಯಮಿ; ಶಾಕಿಂಗ್ ವಿಡಿಯೋ ವೈರಲ್

ಈ ವಿಡಿಯೋವನ್ನು ಗುಡ್ ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದೆ.  ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು, ”ಅಯ್ಯೋ”, ”ಓಹ್ ಅವನ ಕಾಮೆಂಟರಿ ತುಂಬಾ ಮುದ್ದಾಗಿದೆ” ಎಂದೆಲ್ಲಾ ಹಾಸ್ಯವಾಗಿ ಕಮೆಂಟ್​ಗಳನ್ನು ಮಾಡಿದ್ದಾರೆ. ಇದನ್ನೂ ಓದಿ: Viral Video: ದೈತ್ಯಾಕಾರದ ಹೆಬ್ಬಾವನ್ನು ಭುಜದ ಮೇಲೆ ಹೊತ್ತು ತಿರುಗಾಡಿದ ವ್ಯಕ್ತಿ!

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್