ಬಿಜೆಪಿ ನಾಯಕರು ಮಾಡಿದ ಪಾಪಗಳಿಗೆ ಜನಸಾಮಾನ್ಯರು ಯಾಕೆ ಕಷ್ಟಪಡಬೇಕು? ಮಮತಾ ಬ್ಯಾನರ್ಜೀ

ನೂಪುರ್ ಶರ್ಮ ಮತ್ತು ಈಗ ಉಚ್ಛಾಟಿತ ಬಿಜೆಪಿ ನಾಯಕ ನವೀನ್ ಜಿಂದಾಲ್ ವಿಶ್ವದೆಲ್ಲೆಡೆ ಭಾರತದ ಖ್ಯಾತಿಗೆ ಮಸಿ ಬಳಿದಿದ್ದಾರೆ, ಮತ್ತು ಅವರಿಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಮಮತಾ ಬ್ಯಾನರ್ಜೀ ಸುದ್ದಿಗಾರರಿಗೆ ಹೇಳಿದರು.

ಬಿಜೆಪಿ ನಾಯಕರು ಮಾಡಿದ ಪಾಪಗಳಿಗೆ ಜನಸಾಮಾನ್ಯರು ಯಾಕೆ ಕಷ್ಟಪಡಬೇಕು? ಮಮತಾ ಬ್ಯಾನರ್ಜೀ
ಹೌರಾನಲ್ಲಿ ದೊಂಬಿ, ಕಿಚ್ಚು, ಹಿಂಸೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2022 | 5:24 PM

ಕೊಲ್ಕತಾ: ಪ್ರವಾದಿ ಮೊಹಮ್ಮದ್ (Prophet Muhammad) ಅವರನ್ನು ಕುರಿತು ಟಿವಿ ಚ್ಯಾನೆಲ್ ನಡೆಸುತ್ತಿದ್ದ ಡಿಬೇಟ್ ನಲ್ಲಿ ಅವಹೇಳನಕಾರಿಯಾಗಿ ಮಾತಾಡಿ ಈಗ ವಜಾಗೊಂಡಿರುವ ಬಿಜೆಪಿ ವಕ್ತಾರೆಯೊಬ್ಬರ (BJP spokesperson) ಕಾಮೆಂಟ್ ಗಳಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಕಾರು ಮತ್ತು ಪೊಲೀಸ ನಡುವೆ ಎರಡು ದಿನಗಳಿಂದ ನಡೆಯುತ್ತಿರುವ ಘರ್ಷಣೆ ಮುಂದುವರೆದಿರುವಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ (Mamata Banerjee) ಅವರು ಹೇಳಿಕೆಯೊಂದನ್ನು ನೀಡಿ, ಕೆಲವು ಜನರು ದೊಂಬಿಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ ಎಂದು ಹೇಳಿ ಬಿಜೆಪಿ ಎಸಗುವ ಪಾಪಗಳಿಗೆ ಜನಸಾಮಾನ್ಯರು ಯಾಕೆ ತೊಂದರೆ ಅನುಭವಿಸಬೇಕು ಅಂತ ಕೇಳಿದ್ದಾರೆ.

‘ಈಗಾಗಲೇ ನಾನು ಈ ಬಗ್ಗೆ ಮಾತಾಡಿದ್ದೇನೆ. ಎರಡು ದಿನಗಳಿಂದ ಹೌರಾನಲ್ಲಿ ಹಿಂಸಾಕೃತ್ಯಗಳು ಭುಗಿಲೆದ್ದಿರುವುದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಕೃತ್ಯಗಳ ಹಿಂದೆ ಕೆಲವು ರಾಜಕೀಯ ಪಕ್ಷಗಳ ಕೈವಾಡವವಿದೆ ಮತ್ತು ದೊಂಬಿಗಳನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿದೆ. ಆದರೆ ಇದನ್ನೆಲ್ಲ ಸಹಿಸುವುದು ಸಾಧ್ಯವಿಲ್ಲ ಮತ್ತು ಶಾಂತಿ ಸೌಹಾರ್ದೆತೆಯನ್ನು ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿವುದು. ಪಾಪ ಮಾಡಿದ್ದು ಬಿಜೆಪಿ ಆದರೆ ಕಷ್ಟ ಅನುಭವಿಸುತ್ತಿರುವವರು ಜನಸಾಮಾನ್ಯರು’ ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

ಶುಕ್ರವಾರ, ಕೊಲ್ಕತ್ತಾ ಸಮೀಪದ ಹೌರಾನಲ್ಲಿ ಬಿಜೆಪಿ ಧುರೀಣೆಯಾಗಿದ್ದ ನೂಪುರ್ ಶರ್ಮ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಮಾಡಿದ ಕಾಮೆಂಟ್ ಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದು ಹಿಂಸೆಯ ರೂಪ ತಾಳಿತು. ಶನಿವಾರ ಬೆಳಗ್ಗೆ ಅದೇ ಪ್ರದೇಶದಲ್ಲಿ ಮತ್ತೊಂದು ಗುಂಪು ಘರ್ಷಣೆ ನಡೆದಿರುವುದು ವರದಿಯಾಗಿದೆ.

ಎ ಎನ್ ಐ ಸುದ್ದಿಸಂಸ್ಥೆಯ ವರದಿಯೊಂದರ ಪ್ರಕಾರ ಘರ್ಷಣೆಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಗಳನ್ನು ಅವರತ್ತ ಎಸೆದರು. ಸ್ಥಳೀಯ ಆಡಳಿತವು ಬುಧವಾರದವರೆಗೆ ಸದರಿ ಪ್ರದೇಶದಲ್ಲಿ

ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದೆ. ಸೋಮವಾರದವರೆಗೆ ಅಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರದಂದು ಹೌರಾ ಜಿಲ್ಲೆಯ ಹಲವಾರು ಭಾಗಗಳಲ್ಲಿ ಪ್ರತಿಭಟನೆಕಾರರು ರಸ್ತೆಗಳನ್ನು ಬಂದ್ ಮಾಡಿ ವಾಹನ ಮತ್ತು ಜನರ ಓಡಾಟಕ್ಕೆ ಅಡಚಣೆಯನ್ನುಂಟು ಮಾಡಿದ್ದರು.

ಆಗ ಮುಖ್ಯಮಂತ್ರಿ ಮಮತಾ ಅವರು ಅಲ್ಲಿ ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ನವದೆಹಲಿಯಲ್ಲಿ ಅದನ್ನು ಮಾಡುವಂತೆ ಹೇಳಿದ್ದರು.

ನೂಪುರ್ ಶರ್ಮ ಮತ್ತು ಈಗ ಉಚ್ಛಾಟಿತ ಬಿಜೆಪಿ ನಾಯಕ ನವೀನ್ ಜಿಂದಾಲ್ ವಿಶ್ವದೆಲ್ಲೆಡೆ ಭಾರತದ ಖ್ಯಾತಿಗೆ ಮಸಿ ಬಳಿದಿದ್ದಾರೆ, ಮತ್ತು ಅವರಿಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಮಮತಾ ಬ್ಯಾನರ್ಜೀ ಸುದ್ದಿಗಾರರಿಗೆ ಹೇಳಿದರು.

ಶುಕ್ರವಾರದ ನಮಾಜ ನಂತರ 9 ರಾಜ್ಯಗಳಲ್ಲಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆದವು.

ಜಾರ್ಖಂಡ್ ನ ರಾಂಚಿಯಲ್ಲಿ ಪ್ರತಿಭಟನೆಕಾರರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಾಗ ಗುಂಡೇಟಿಗೆ ಇಬ್ಬರು ಬಲಿಯಾದರು ಮತ್ತು ನಾಲ್ವರು ಪೊಲೀಸರು ಸೇರಿದಂತೆ 12 ಜನ ಗಾಯಗೊಂಡರು.

ಉತ್ತರ ಪ್ರದೇಶದ ಹಲವಾರು ಪಟ್ಟಣಗಳಲ್ಲಿ ಸಹ ಪ್ರತಿಭಟನೆಗಳು ವರದಿಯಾಗಿದ್ದು ಈ ಸಂಬಂಧ ಪೊಲೀಸರು 200ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚೆರಿಕೆಯ ಕ್ರಮವಾಗಿ ದೇಶದ ಅನೇಕ ಭಾಗಗಳಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ