ಸಾಮಾಜಿಕ ಜಾಲತಾಣ ಆಗಾಗ ವಿವಿಧ ವಿಡಿಯೋಗಳ ಮೂಲಕ ನೆಟ್ಟಿಗರನ್ನು ಸೆಳೆಯುತ್ತಿರುತ್ತದೆ. ವಿದೇಶಗಳ ವಿಚಿತ್ರ, ಅಪರೂಪದ ಘಟನೆಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಟಿವಿ ಆ್ಯಂಕರ್ ತಮ್ಮ 3 ತಿಂಗಳ ಮಗುವನ್ನು ಎತ್ತಿಕೊಂಡು ಹವಾಮಾನ ವರದಿ (Wether Report) ಮಾಡಿದ್ದಾರೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಯುಎಸ್ನ ವಿಸ್ಕೊನ್ಸಿ (Wisconsin )ರಾಜ್ಯದ CBS 58 ಎನ್ನುವ ಚಾನೆಲ್ನಲ್ಲಿ ಕೆಲಸ ಮಾಡುವ ರೆಬೆಕಾ ಶುಲ್ಡ್ (Rebecca Schuld) ಎನ್ನುವ ಅ್ಯಂಕರ್ ಮಗುವನ್ನು ಎತ್ತಿಕೊಂಡು ಹವಾಮಾನ ವರದಿ ನೀಡಿದ್ದಾರೆ. ಇದರ ವಿಡಿಯೋ ಫೇಸ್ಬುಕ್, ಟ್ವಿಟರ್, ಯಯುಟ್ಯೂಬ್ಗಳಲ್ಲಿ ಸಖತ್ ವೈರಲ್ ಆಗಿದೆ.
@RebeccaSchuld U and Fiona were on @WeekendExp with @SusanHendricks. Very exciting that @CBS58 and @cbs58weather gets national recognition like this from @HLNTV. ? pic.twitter.com/BhrQSbSYG8
— Alex Donovan (@AlexDonovan13) January 29, 2022
ಈ ಕುರಿತು ಡೈಲಿ ಮೇಲ್ ವರದಿ ಮಾಡಿದೆ. ವರದಿಯ ಪ್ರಕಾರ 42 ವರ್ಷದ ರೆಬೆಕಾ ಶುಲ್ಡ್, ಎನ್ನುವ ಪತ್ರಕರ್ತೆ ಕೊರೊನಾ ಕಾರಣದಿಂದ ವರ್ಕ್ಫ್ರಾಮ್ ಹೋಮ್ನಲ್ಲಿದ್ದರು. ಹೆರಿಗೆ ರಜೆಯ ಬಳಿಕ ಕೆಲಸ ಆರಂಭಿಸಿದ ಅವರು ಮಗುವನ್ನು ಮನೆಯಲ್ಲಿ ಬಿಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಆದರೆ ಅಂದು ನೇರಪ್ರಸಾರ ಆರಂಭವಾಗುವ ವೇಳೆಗೆ ಮಲಗಿದ್ದ ಮಗು ಎಚ್ಚರಗೊಂಡ ಹಿನ್ನಲೆಯಲ್ಲಿ ಮಗುವನ್ನು ಎತ್ತಿಕೊಂಡೇ ಕ್ಯಾಮಾರಾ ಎದುರು ಬಂದಿದ್ದಾರೆ. ಮೂರು ತಿಂಗಳ ಮಗಳನ್ನು ಹಿಡಿದು ನಿಂತ ಆಕೆಯನ್ನು ನೋಡಿ ಸ್ಟುಡಿಯೋದಲ್ಲಿದ್ದ ಆ್ಯಂಕರ್ ಅಚ್ಚರಿಗೊಂಡಿದ್ದು, ಹವಾಮಾನ ವರದಿಗೆ ಹೊಸ ಅತಿಥಿ ಬಂದಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಕುರಿತು ಸ್ವತಃ ರೆಬೆಕಾ ಶುಲ್ಡ್ ಮಾತನಾಡಿದ್ದು, ನಾನು ಕಾರ್ಯಕ್ರಮ ಆರಂಭಿಸುವ ವೇಳೆಗೆ ಸರಿಯಾಗಿ ನನ್ನ ಮಗಳು ಎಚ್ಚರಗೊಂಡಿದ್ದಳು. ಅವಳನ್ನು ಹಾಗೆಯೇ ಬಿಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವಳನ್ನು ಎತ್ತಿಕೊಂಡೇ ವರದಿಯನ್ನು ನೀಡಲು ನಿರ್ಧರಿಸಿದೆ. ಇದಕ್ಕೆ ನಮ್ಮ ಪ್ರೊಡ್ಯೂಸರ್ ಓಹ್ ಮಗುವನ್ನು ಎತ್ತಿಕೊಂಡೇ ಮಾತನಾಡುತ್ತೀರಾ ಎಂದರು. ನನ್ನ ಮಗಳು ಚೆನ್ನಾಗಿ ನಿದ್ದೆ ಮಾಡಿದ್ದಾಳೆ ಹೀಗಾಗಿ ಅವಳಿಂದ ಯಾವ ಸಮಸ್ಯೆಯೂ ಆಗವುದಿಲ್ಲ. ನಾನು ವರದಿ ನೀಡಲು ತಯಾರಿದ್ದೇನೆ ಎಂದಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral News: ಸ್ವೀಡನ್ನ ಬೀದಿಗಳಲ್ಲಿರುವ ಸಿಗರೇಟ್ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ