ಟಿವಿ ಚಾನೆಲ್ (TV Channel) ಗಳಲ್ಲಿ ವರದಿಗಾರರಾಗಿ ಕೆಲಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ವರದಿ ಮಾಡಲು ಬೇರೆ ಬೇರೆ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಅಲ್ಲಿರುವ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಪ್ರಾಣಿಪಕ್ಷಿಗಳ ಕಾಟ, ಸಾರ್ವಜನಿಕರ ಮಾತು ಎಲ್ಲವನ್ನೂ ಕೇಳಬೇಕು. ಇದೀಗ ವರದಿಗಾರ್ತಿ(Reporter) ಯೊಬ್ಬರು ಹವಾಮಾನ ವರದಿ (Wether Report) ನೀಡಲು ರಸ್ತೆಯ ಬಳಿ ನಿಂತಾಗ ಕಾರೊಂದು ಗುದ್ದಿದ ಘಟನೆ ನಡೆದಿದೆ. ವರದಿ ಮಾಡುತ್ತಿರುವಾಗಲೇ ಅಪಘಾತವಾಗಿದ್ದು ಸ್ಟುಡಿಯೋದಲ್ಲಿದ್ದ ಆ್ಯಂಕರ್ (Anchor) ಗಾಬರಿಗೊಂಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
“We’re good, Tim.” pic.twitter.com/9kn2YElDLK
— Timothy Burke (@bubbaprog) January 20, 2022
ಎನ್ಡಿಟಿವಿ ವರದಿ ಪ್ರಕಾರ ಪಶ್ಚಿಮ ವರ್ಜೀನಿಯಾ ದೇಶದ ಡನ್‌ಬಾರ್ ನಲ್ಲಿ WSAZ-TV ಚಾನೆಲ್ನ ವರದಿಗಾರ್ತಿ ನೇರಪ್ರಸಾರದಲ್ಲಿ ವರದಿ ಮಾಡುತ್ತಿರುವ ವೇಳೆ ಅಪಘಾತಕ್ಕೀಡಾಗಿದ್ದಾರೆ. ಆದರೂ ತಕ್ಷಣ ಎದ್ದು ನಿಂತು ಕ್ಯಾಮರಾದ ಎದುರು ಬಂದು ನಾನು ಆರಮವಾಗಿದ್ದೇನೆ ಎಂದಿದ್ದಾರೆ. WSAZ-TV ಚಾನೆಲ್ನ ಟೋರಿ ಯೋರ್ಗೆ ಎನ್ನುವ ಮಹಿಳಾ ವರದಿಗಾರ್ತಿ ಡನ್ಬಾರ್ನಲ್ಲಿ ಹಮಾಮಾನ ವರದಿಯನ್ನು ನೀಡುತ್ತಿದ್ದರು. ಆಗ ಚಾನೆಲ್ನ ಸ್ಟುಡಿಯೋದಲ್ಲಿ ಟಿಮ್ ಇರ್ ಆ್ಯಂಕರ್ ಆಗಿ ಕುಳಿತಿದ್ದರು. ಟೋರಿ ಕ್ಯಾಮರಾ ಎದುರು ಬಂದೆ ಕೆಲವೇ ಕ್ಷಣಗಳಲ್ಲಿ ಕಾರೊಂದು ಬಂದು ಗುದ್ದಿದ್ದು, ಅವರು ಕೆಳಕ್ಕೆ ಬಿದ್ದಿದ್ದಾರೆ. ಆ್ಯಂಕರ್ ನೀವು ನಿಜವಾಗಿಯೂ ಸುರಕ್ಷಿತವಾಗಿದ್ದೀರಾ ಎಂದು ಕೇಳಿದ್ದಾರೆ. ಆಗ ಅವರು ತಕ್ಷಣ ಎದ್ದು ನಿಂತು ನನಗೆ ಕಾರು ಗುದ್ದಿದೆ. ಆದರೆ ನಾನು ಸುರಕ್ಷಿತವಾಗಿ ಇದ್ದೇನೆ ಎಂದು ವರದಿ ಮಾಡುವುದನ್ನು ಮುಂದುವರೆಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ 3.5 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದ್ದು 28 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ವಿಡಿಯೋ ನೋಡಿ ನೆಟ್ಟಿಗರು 2022ರಲ್ಲಿ ದೊರೆತ ಅದ್ಭುತ ವಿಡಿಯೋ ಇದಾಗಿದ್ದು, ರಿಪೋರ್ಟರ್ ಧೈರ್ಯವನ್ನು ನೋಡಿ ನೆಟ್ಟಗರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:
ಏಕಕಾಲದಲ್ಲಿ 6 ಭಾವಚಿತ್ರಗಳನ್ನು ಬಿಡಿಸಿ ನೆಟ್ಟಿಗರ ಗಮನ ಸೆಳೆದ ಕಲಾವಿದ: ವಿಡಿಯೋ ವೈರಲ್