ಏಕಕಾಲದಲ್ಲಿ 6 ಭಾವಚಿತ್ರಗಳನ್ನು ಬಿಡಿಸಿ ನೆಟ್ಟಿಗರ ಗಮನ ಸೆಳೆದ ಕಲಾವಿದ: ವಿಡಿಯೋ ವೈರಲ್​

ಏಕಕಾಲದಲ್ಲಿ 6 ಭಾವಚಿತ್ರಗಳನ್ನು ಬಿಡಿಸಿ ನೆಟ್ಟಿಗರ ಗಮನ ಸೆಳೆದ ಕಲಾವಿದ: ವಿಡಿಯೋ ವೈರಲ್​
ಭಾವಚಿತ್ರಗಳು

38 ಸೆಕೆಂಡ್​ಗಳ ವಿಡಿಯೋದಲ್ಲಿ ವಿಭಿನ್ನ ರೀತಿಯ ಉಪಕರಣಗಳನ್ನು ಬಳಸಿಕೊಂಡು ಯುವಕ ಎರಡೂ ಕಾಲಿನಲ್ಲಿ ಮತ್ತು ಎರಡೂ ಕೈಗಳಲ್ಲಿ ಪೆನ್ ಹಿಡಿದುಕೊಂಡು ಚಿತ್ರವನ್ನು ಬಿಡಿಸಿರುವುದನ್ನು ಕಾಣಬಹುದು.

TV9kannada Web Team

| Edited By: Pavitra Bhat Jigalemane

Jan 21, 2022 | 10:46 AM

ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷ ಕಲೆ, ಅಭಿರುಚಿ ಇರುತ್ತದೆ. ಅದನ್ನು ಗುರುತಿಸಿಕೊಂಡು ಮುಂದುವರೆದರೆ ಯಶಸ್ಸಿನ ಹಾದಿ ಸನಿಹವಾಗುತ್ತದೆ. ಪ್ರಾಮಾಣಿಕ ಶ್ರದ್ಧೆ, ನಿರಂತರ ಅಭ್ಯಾಸದಿಂದ ಎಂತಹ ಕಲೆಗಳನ್ನು ಬೇಕಾದರೂ ಕರಗತ ಮಾಡಿಕೊಳ್ಳಬಹುದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಒಂದೇ ಸಲಕ್ಕೆ 6 ಭಾವಚಿತ್ರಗಳನ್ನು ಬಿಡಿಸಿರುವ ವಿಡಿಯೋ ವೈರಲ್​ ಆಗಿದೆ. ಲಿಬಿಯಾ ದೇಶದ ಈ ಯುವಕನ ಪ್ರತಿಭೆಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.  ಒಂದೇ ಸಲಕ್ಕೆ 6 ಪೋಟ್ರೈಟ್​​ ಚಿತ್ರವನ್ನು ಬಿಡಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಅಮೆಡೋ ಎನ್ನುವ ಯುವಕ ಈ ಅಧ್ಬುತ ಚಿತ್ರವನ್ನು ಬಿಡಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಪ್ರಕಾರ, 38 ಸೆಕೆಂಡ್​ಗಳ ವಿಡಿಯೋದಲ್ಲಿ ವಿಭಿನ್ನ ರೀತಿಯ ಉಪಕರಣಗಳನ್ನು ಬಳಸಿಕೊಂಡು ಯುವಕ ಎರಡೂ ಕಾಲಿನಲ್ಲಿ ಮತ್ತು ಎರಡೂ ಕೈಗಳಲ್ಲಿ ಪೆನ್ ಹಿಡಿದುಕೊಂಡು ಚಿತ್ರವನ್ನು ಬಿಡಿಸಿರುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡ ಅಮೆಡೋ ಅರೇಬಿಕ್​ನಲ್ಲಿ 8 ದಿನಗಳ ಸತತ ಪ್ರಯತ್ನಗಳ ಬಳಿಕ ಒಂದಷ್ಟು ಸೋಲುಗಳ ನಂತರ ಈ ಚಿತ್ರವನ್ನು ಬಿಡಿಸಿದ್ದೇನೆ. ನೀವೆಲ್ಲರೂ ಎಂಜಾಯ್​ ಮಾಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಅಮೆಡೋ ಲಿಬಿಯಾದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಒಂದೇ ಬಾರಿಗೆ 4 ಚಿತ್ರಗಳನ್ನು ಬಿಡಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ನಂತರ ಸ್ವತಃ ಚಾಲೆಂಜ್​ ತೆಗೆದುಕೊಂಡು ಒಂದೇ ಬಾರಿಗೆ 6 ಚಿತ್ರಗಳನ್ನು ಬಿಡಿಸಲು ನಿರ್ಧರಿಸಿ, ಪ್ರಯತ್ನದಲ್ಲಿ ಯಶಸ್ಸನ್ನು ಕೂಡ ಗಳಿಸಿದ್ದಾರೆ. 2018ರಲ್ಲಿ ಈ ವಿಭಿನ್ನ ಕಲೆಯ ಅಭ್ಯಾಸವನ್ನು ಅಮೆಡೋ ಆರಂಭಿಸಿದ್ದು, ಸತತ ಪ್ರಯತ್ನದಿಂದ ಕಡಿಮೆ ಸಮಯದಲ್ಲಿ ಅಂತಾರಾಷ್ಟ್ರೀಯ ಕಲಾವಿದ ಎನಿಸಿಕೊಂಡಿದ್ದಾರೆ. ಸದ್ಯ ಅಮೆಡೋ ಚಿತ್ರ ಬಿಡಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

Follow us on

Related Stories

Most Read Stories

Click on your DTH Provider to Add TV9 Kannada