Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಮಾನವನ ಸ್ನೇಹವನ್ನು ಸದಾ ಬಯಸುವ ನಾಯಿಗಳ ವಿಡಿಯೋ ಆಗಾಗ ಕಾಣಸಿಗುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವಿಡಿಯೋ ವೈರಲ್​ ಆಗಿದೆ.

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ
ಜಿಂಕೆಮರಿಯನ್ನು ರಕ್ಷಿಸಿದ ನಾಯಿ
Follow us
TV9 Web
| Updated By: Pavitra Bhat Jigalemane

Updated on:Jan 21, 2022 | 10:00 AM

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹೃದಯಸ್ಪರ್ಶಿ ವಿಡಿಯೋಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಅದು ಪ್ರಾಣಿಗಳದ್ದೇ ಇರಬಹುದು ಅಥವಾ ಇನ್ನಿತರ ವಿಡಿಯೋಗಳೇ ಆಗಿರಬಹುದು. ಅದರಲ್ಲೂ ಮಾನವನ ಸ್ನೇಹವನ್ನು ಸದಾ ಬಯಸುವ ನಾಯಿಗಳ ವಿಡಿಯೋ ಆಗಾಗ ಕಾಣಸಿಗುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವಿಡಿಯೋ ವೈರಲ್​ ಆಗಿದೆ.  ಇಂಡಿಯಾ ಟುಡೆ ವರದಿಯ ಪ್ರಕಾರ ನಾಯಿಯ ಮಾಲೀಕ ನೀರಿನಲ್ಲಿದ್ದ ಜಿಂಕೆಯನ್ನು ನಾಯಿ ರಕ್ಷಿಸುವುದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

View this post on Instagram

A post shared by India Today (@indiatoday)

ವಿಡಿಯೋದಲ್ಲಿ ಹರಿಯುತ್ತಿರುವ ನೀರಿನಲ್ಲಿ ಜಿಂಕೆಯ ಮರಿಯೊಂದು ತೇಲಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ಕಪ್ಪು ಬಣ್ಣದ ನಾಯಿಯೊಂದು ನೀರಿಗಿಳಿದು ಜಿಂಕೆಯ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ದಡಕ್ಕೆ ಬರುತ್ತದೆ. ನೀರಿನಲ್ಲಿ ಬಿದ್ದು ಗಾಬರಿಗೊಂಡ ಜಿಂಕೆ ಮರಿ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರ ವಿಡಿಯೋವನ್ನು ಇಂಡಿಯಾ ಟುಡೆ ಸುದ್ದಿ ಸಂಸ್ಥೆ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾಯಿಗಳು ಭೂಮಿಯಲ್ಲಿರುವ ಅದ್ಭುತ ಜೀವಿಗಳಲ್ಲಿ ಒಂದು ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Foods of Karnataka: ತಿಂದ್ರೆ ಗ್ಯಾಸ್ ಟ್ರಬಲ್, ತಿನ್ನದೇ ಇದ್ದರೆ ಜೀವನವೇ ವ್ಯರ್ಥ: ಟ್ವಿಟರ್​ನಲ್ಲಿ ಹವಾ ಎಬ್ಬಿಸಿದೆ ಅವರೇಕಾಳು ರೊಟ್ಟಿ

Published On - 10:00 am, Fri, 21 January 22