ಇತ್ತೀಚಿನ ದಿನಗಳಲ್ಲಿ ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಒಂದು ಕೆಟ್ಟ ಚಟಕ್ಕೆ ಹೆಚ್ಚಾಗಿ ಯುವಜನತೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಚೆನ್ನಾಗಿ ಓದಿ, ಸಮಾಜದಲ್ಲಿ ಒಂದೊಳ್ಳೆ ಹೆಸರು ಮಾಡಲಿ ಅಂತ ತಂದೆ-ತಾಯಿ ತಮ್ಮ ಮಕ್ಕಳನ್ನು ಶಾಲೆ ಕಾಲೇಜಿಗೆ ಕಳಿಸಿದ್ರೆ, ಕೆಲವೊಬ್ರು ಸಹವಾಸ ದೋಷದಿಂದ ಗಾಂಜಾ, ಮದ್ಯ, ಸಿಗರೇಟ್ ಸೇವನೆಯ ಕೆಟ್ಟ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ರೀತಿ ಕೆಟ್ಟ ಚಟಕ್ಕೆ ಬಿದ್ದು ಜೀವನ ಹಾಳುಮಾಡಿಕೊಂಡಂತಹ ಹಲವರಿದ್ದಾರೆ. ಈಗ ಇದೇ ರೀತಿ ಗಾಂಜಾ ಚಟಕ್ಕೆ ಬಿದ್ದು, ಕಾಲೇಜಿಗೆ ಹೋಗುವುದಿರಲಿ ಗಾಂಜಾ ನಶೆಯಲ್ಲಿ ನೆಟ್ಟಗೆ ನಡೆಯೋಕಾಗದೆ ವಿದ್ಯಾರ್ಥಿಗಳಿಬ್ಬರು ಆಯ ತಪ್ಪಿ ರೈಲ್ವೇ ಹಳಿಯ ಮೇಲೆ ಬಿದ್ದಂತಹ ಘಟನೆ ತಮಿಳುನಾಡಿನ ರಾಣಿಪೆಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಹೌದು ಇಲ್ಲಿನ ಅರಕ್ಕೋಣಂ ರೈಲ್ವೈ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಬ್ಬರು ಗಾಂಜಾ ನಶೆಯನ್ನು ಏರಿಸಿಕೊಂಡು ನಡೆಯೋಕಾಗದೆ ರೈಲ್ವೇ ಹಳಿಯ ಮೇಲೆ ಬಿದ್ದು, ಮೇಲೇಳಲು ಆಗದೆ ಪರದಾಡಿದ್ದಾರೆ.
ಈ ಘಟನೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು, ಅರಕ್ಕೋಣಂ ರೈಲ್ವೇ ಪ್ಲಾಟ್ಫಾರ್ಮ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಇದ್ದಕ್ಕಿದ್ದಂತೆ ರೈಲ್ವೈ ಹಳಿಯ ಮೇಲೆ ಆಯ ತಪ್ಪಿ ಬಿದ್ದಿದ್ದಾನೆ. ಸಹ ವಿದ್ಯಾರ್ಥಿ ಬಿದ್ದವನನ್ನು ಮೇಲೆತ್ತಲು ಪ್ರಯತ್ನಿಸಿದ್ದಾನೆ, ಅಲ್ಲದೆ ಆ ಸಂದರ್ಭದಲ್ಲಿ ಆ ಇಬ್ಬರೂ ವಿದ್ಯಾರ್ಥಿಗಳು ಅಮಲಿನಲ್ಲಿ ಇದ್ದಂತೆ ಕಾಣಿಸಿತ್ತಿತ್ತು, ಅದೃಷ್ಟವಶಾತ್ ಆ ಸಮಯದಲ್ಲಿ ಯಾವುದೇ ರೈಲು ಬರಲಿಲ್ಲ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ನಶೆಯಲ್ಲಿರುವುದನ್ನು ಕಂಡು ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯ ಬಗ್ಗೆ ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಪೋಲಿಸರು ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
*அரக்கோணம் ரயில் நிலையத்தில் குடிபோதையில் தள்ளாடிய 2 மாணவர்களின் வீடியோ தற்போது சமூக வலைதளங்களில் வைரல் #arakonam #ranipet #railwaystation* pic.twitter.com/DZ76ClqU2g
— rohitkumar vj (@RohitkumarVj) December 14, 2023
ರೈಲ್ವೆ ಪೋಲಿಸರು ನಡೆಸಿದ ವಿಚಾರಣೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬ ಅರಕ್ಕೋಣಂ ಮತ್ತು ಇನ್ನೊಬ್ಬ ಚಿತೇರಿ ಪ್ರದೇಶದ ನಿವಾಸಿಗಳೆಂದು ತಿಳಿದು ಬಂದಿದೆ. ಈ ಇಬ್ಬರು ವಿದ್ಯಾರ್ಥಿಗಳು ಸರ್ಕಾರಿ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಗಾಂಜಾ ಅಮಲಿನಲ್ಲಿ ರೈಲ್ವೆ ಹಳಿಯ ಮೇಲೆ ಎಡವಿ ಬಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಮನೆಯಲ್ಲಿ ಹಳೆಯ ಬಟ್ಟೆಗಳಿದ್ದರೆ ಹೀಗೆ ಮಾಡಿ, ಆದರೆ ತಾಳ್ಮೆಬೇಕು
ಈ ಘಟನೆಯ ಕುರಿತ ವಿಡಿಯೋವನ್ನು ರೋಹಿತ್ ಕುಮಾರ್ ವಿ.ಜೆ (@RohitkumarVj) ಎಂಬವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಾಂಜಾ ನಶೆ ಏರಿಸಿಕೊಂಡು ಆಯಾ ತಪ್ಪಿ ರೈಲ್ವೇ ಹಳಿಯ ಮೇಲೆ ಬಿದ್ದಂತಹ ವಿದ್ಯಾರ್ಥಿಯನ್ನು, ಸಹ ವಿದ್ಯಾರ್ಥಿ ಆತನನ್ನು ರೈಲ್ವೇ ಹಳಿಯಿಂದ ಮೇಲಕ್ಕೆತ್ತಲು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು.
ಈ ಘಟನೆಯ ನಂತರ ಅರಕ್ಕೋಣಂ ಭಾಗದಲ್ಲಿ ಗಾಂಜಾ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: