Viral Video: ಮನೆಯಲ್ಲಿ ಹಳೆಯ ಬಟ್ಟೆಗಳಿದ್ದರೆ ಹೀಗೆ ಮಾಡಿ, ಆದರೆ ತಾಳ್ಮೆಬೇಕು
ನೂರಾರೂ ರೂಪಾಯಿ ಖರ್ಚು ಮಾಡಿ, ತಿಂಗಳಿಗೊಂದು ಡೋರ್ ಮ್ಯಾಟ್ ಖರೀದಿಸುವ ಬದಲು ನಿವ್ಯಾಕೇ ಮನೆಯಲ್ಲಿಯೇ ಸುಂದರವಾದ ಮ್ಯಾಟ್ ತಯಾರಿಸಬಾರದು? ಹೌದು ನಿಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಎಸೆಯುವ ಬದಲು ಅವುಗಳನ್ನು ಮರುಬಳಕೆ ಮಾಡಿ, ಡೋರ್ ಮ್ಯಾಟ್ ತಯಾರಿಸಬಹುದು. DIY ಮ್ಯಾಟ್ ತಯಾರಿಸುವುದು ಹೇಗೆ ಎಂಬ ವಿಡಿಯೋ ಇಲ್ಲಿದೆ ನೋಡಿ.
ಮನೆಯಲ್ಲಿ ಒಂದಷ್ಟು ಹಳೆಯ ಬಟ್ಟೆಗಳಿದ್ದರೆ, ಅವುಗಳನ್ನು ವೇಸ್ಟ್ ಎಂದು ಎಸೆಯುವ ಬದಲು ನೀವು ಅವುಗಳನ್ನು ಮರುಬಳಕೆ ಮಾಡಿ, ಅದರಿಂದ ಸುಂದರವಾದ ಡೋರ್ ಮ್ಯಾಟ್ ತಯಾರಿಸಹುದು. ಹೌದು ಸುಮ್ಮನೆ ದುಡ್ಡು ಖರ್ಚು ಮಾಡಿ ವಿವಿಧ ವಿನ್ಯಾಸದ ಮ್ಯಾಟ್ಗಳನ್ನು ಖರೀದಿಸುವ ಬದಲು, ನಿಮಗೆ ಸಮಯವಿದ್ದರೆ, ಆ ಫ್ರೀ ಟೈಮ್ ಅಲ್ಲಿ ಹಳೆಯ ಬಟ್ಟೆಗಳನ್ನು ಉಪಯೋಗಿಸಿಕೊಂಡು ನೀವು ಮನೆಯಲ್ಲಿಯೇ ವಿವಿಧ ವಿನ್ಯಾಸದ ಸುಂದರ ಡೋರ್ ಮ್ಯಾಟ್ಗಳನ್ನು ತಯಾರಿಸಬಹುದು. ಈ DIY ಮ್ಯಾಟ್ ತಯಾರಿಸಲು ಹಳೆಯ ಬಟ್ಟೆಯ ಜೊತೆಗೆ ನಿಮಗೆ ಒಂದು ಸೆಣಬಿನ ಗೋಣಿ ಚೀಲದ ಅವಶ್ಯಕತೆಯೂ ಇದೆ. ಈ ಎರಡು ವಸ್ತುಗಳನ್ನು ಉಪಯೋಗಿಸಿಕೊಂಡು ಯಾವ ರೀತಿ ಸುಂದರವಾದ DIY ಮ್ಯಾಟ್ ತಯಾರಿಸಬಹುದು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.
@hetal_diy_queen ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಹಳೆಯ ಬಟ್ಟೆಗಳನ್ನು ಉಪಯೋಗಿಸಿಕೊಂಡು ಸುಂದರವಾದ DIY ಮ್ಯಾಟ್ ಹೇಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ:
View this post on Instagram
ಮ್ಯಾಟ್ ತಯಾರಿಸಲು, ಮೊದಲಿಗೆ ಒಂದು ಸೆಣಬಿನ ಗೋಣಿ ಚೀಲವನ್ನು ತೆಗೆದುಕೊಂಡು, ಅದನ್ನು ಉದ್ದಕ್ಕೆ ಮ್ಯಾಟ್ ಡೋರ್ ಮ್ಯಾಟ್ ಗಾತ್ರಕ್ಕೆ ಕತ್ತರಿಸಿಕೊಳ್ಳಿ. ಈಗ ನಿಮ್ಮ ಹಳೆಯ ಬಟ್ಟೆಗಳನ್ನು ತಗೆದುಕೊಂಡು ಎಲ್ಲಾ ಬಟ್ಟೆಗಳನ್ನು ಒಂದೇ ಆಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಬದಿಗೆ ಇಟ್ಟುಬಿಡಿ. ಈಗ ಒಂದು ದೊಡ್ಡ ಸೂಜಿಯನ್ನು ತೆಗೆದುಕೊಂಡು, ಅದರೊಳಗೆ ಮೊದಲೇ ಕತ್ತರಿಸಿಟ್ಟ ಬಟ್ಟೆಯ ತುಂಡುಗಳನ್ನು ಒಂದೊಂದಾಗಿ ಸುರಿದು ಸೆಣಬಿನ ಚೀಲಕ್ಕೆ ಜೋಡಿಸಿಕೊಂಡು ಗಟ್ಟಿಯಾಗಿ ಗಂಟುಕಟ್ಟಿಕೊಳ್ಳಿ, ಹೀಗ ತಾಳ್ಮೆಯಿಂದ ಪ್ರತಿಯೊಂದು ಬಟ್ಟೆಯ ತುಂಡುಗಳನ್ನು ಸೂಜಿದಾರದ ಸಹಾಯದಿಂದ ಸೆಣಬಿನ ಗೋಣಿ ಚೀಲಕ್ಕೆ ಜೋಡಿಸಿಕೊಂಡರೆ ಸುಂದರವಾದ DIY ಮ್ಯಾಟ್ ತಯಾರಾಗುತ್ತದೆ.
ಇದನ್ನೂ ಓದಿ: ನಿಜನಾ…. ನಾನೇನಾ….. ಹಾಡಿಗೆ ನೃತ್ಯ ಮಾಡಿ ಕನ್ನಡಿಗರ ಮನ ಗೆದ್ದ ಜಪಾನಿ ಡಾನ್ಸರ್ಸ್
ನವೆಂಬರ್ 28ರಂದು ಹಂಚಿಕೊಳ್ಳಲಾದ ಈ ವಿಡಿಯೋ 52.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ1.5 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಜನ ಕಮೆಂಟ್ಸ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ʼಇದನ್ನು ತಯಾರಿಸಲು ತುಂಬಾ ತಾಳ್ಮೆ ಮತ್ತು ಹೆಚ್ಚಿನ ಸಮಯ ಬೇಕಾಗುತ್ತದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ʼಬಹಳ ಚೆನ್ನಾಗಿದೆʼ ಎಂದು ಆಕೆಯ ಪ್ರತಿಭೆಗೆ ಮತ್ತು ತಾಳ್ಮೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: