ಅಯ್ಯೋ ಪಾಪಿ, ಆ ಮುಗ್ಧ ಜೀವ ನಿನಗೇನೊ ಮಾಡಿತ್ತು? ನಾಯಿ ಮರಿಯನ್ನು ಎತ್ತಿ ನೆಲಕ್ಕೆ ಬಡಿದ ಕ್ರೂರಿ
ಅಲ್ಲಾ ಈ ವ್ಯಕ್ತಿಗೆ ಮನುಷ್ಯತ್ವ ಅನ್ನೋದೇ ಇಲ್ವಾ, ಏನೋ ಇವನೊಬ್ಬ ಒಳ್ಳೆಯ ಮನುಷ್ಯ ಹೊಟ್ಟೆ ತುಂಬಾ ಊಟ ನೀಡಿದ್ರೂ ನೀಡಬಹುದು ಎಂದು ಪಾಪ ಎರಡು ಮುಗ್ಧ ನಾಯಿಮರಿಗಳು ಬಾಲ ಅಲ್ಲಾಡಿಸುತ್ತಾ ಬಂದ್ರೆ, ಆ ಮುಗ್ಧ ಜೀವಿಯ ಮೇಲೆ ಈ ಪಾಪಿ ಮನುಷ್ಯ ಇಂತಹ ದೌರ್ಜನ್ಯವೆಸಗುವುದೇ? ಇಲ್ಲಿದೆ ನೋಡಿ ಮನುಷ್ಯರಲ್ಲಿ ಮಾನವೀಯತೆಯ ಮೌಲ್ಯ ಸತ್ತು ಹೋಗಿದೆ ಎಂಬುದಕ್ಕೆ ಕೈಗನ್ನಡಿಯಂತಿರುವ ವಿಡಿಯೋ.
ಪ್ರಾಣಿಗಳನ್ನು ದೇವರಂತೆ, ಮಕ್ಕಳಂತೆ ಕಾಣುವವರು ಒಂದೆಡೆಯಾದರೆ, ಪ್ರಾಣಿಗಳನ್ನು ತಮ್ಮ ಶತ್ರುಗಳೋ ಎಂಬಂತೆ ಕಾಣುವ ಹಲವರು ನಮ್ಮ ಮಧ್ಯೆಯೇ ಇದ್ದಾರೆ. ಅದರಲ್ಲೂ ಇತ್ತೀಚಿಗೆ ನಡೆಯುತ್ತಿರುವ ಒಂದೊಂದು ಅಮಾನವೀಯ ಘಟನೆಗಳನ್ನು ನೋಡುತ್ತಿದ್ದರೆ, ಈ ಮನುಷ್ಯರಿಗಿಂತ ಕ್ರೂರ ಮೃಗಗಳೇ ಎಷ್ಟೋ ಮೇಲೂ ಎಂಬ ಭಾವನೆ ಬರುತ್ತದೆ. ಯಾಕೆಂದ್ರೆ ಈ ಮಾನುಷ್ಯರು ಎಸಗುತ್ತಿರುವಂತಹ ದುಷ್ಕೃತ್ಯಗಳು ಅಷ್ಟಿಷ್ಟಲ್ಲಾ, ಅದರಲ್ಲೂ ಬಾಯಿ ಬಾರದಿರುವಂತಹ ಮುಗ್ಧ ಪ್ರಾಣಿಗಳ ಮೇಲೆ ಕ್ರೌರ್ಯ ಎಸಗಿ ಅಟ್ಟಹಾಸ ಮೆರೆಯುತ್ತಿದ್ದಾರೆ. ನಾಯಿಗಳನ್ನು ಬೈಕ್, ಕಾರಿನಲ್ಲಿ ಕಟ್ಟಿ ಅದನ್ನು ರಸ್ತೆಯಲ್ಲಿ ಎಳೆದಾಡಿಕೊಂಡು ಹೋಗಿ ಸಾಯಿಸಿದ್ದು, ಹಸಿದು ಬಂದಂತಹ ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಅದನ್ನು ತಿನ್ನಿಸಿ ಆನೆಯನ್ನು ಸಾಯಿಸಿದ್ದು, ಒಂದಾ.. ಎರಡಾ.. ಈ ಮನುಷ್ಯರು ಮಾಡುವಂತಹ ಅನಾಚಾರಗಳ ಪಟ್ಟಿಯನ್ನು ಹೇಳುತ್ತಾ ಹೋದರೆ ಮುಗಿಯದು. ಇಂತಹ ಹಲವಾರು ದುಷ್ಕೃತ್ಯಗಳ ಕುರಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಈಗ ಅದೇ ರೀತಿಯ ಅಮಾನವೀಯ ಘಟನೆಯೊಂದು ನಡೆದಿದ್ದು, ಏನೋ ಈ ವ್ಯಕ್ತಿ ನಮಗೆ ಹೊಟ್ಟೆ ತುಂಬಾ ಊಟ ನೀಡಬಹುದು ಎಂದು ಎರಡು ಮುದ್ದಾದ ನಾಯಿ ಮರಿಗಳು ಬಾಲ ಅಲ್ಲಾಡಿಸುತ್ತಾ ಆತನ ಬಳಿ ಹೋದರೆ, ಆ ಪಾಪಿ ನಾಯಿ ಮರಿಗೆ ಮನ ಬಂದಂತೆ ಥಳಿಸಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಆ ವ್ಯಕ್ತಿಯ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
@RashtrawadiVeer ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಪಾಪಿ ಮನುಷ್ಯ ಪುಟಾಣಿ ನಾಯಿ ಮರಿಯ ಮೇಲೆ ಮನಬಂದಂತೆ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A young man picked up a baby dog and threw it on the road, then kicked it and killed it, see the incident.
Is he emotionless ??! #Kerala #ParliamentAttack #LokSabha pic.twitter.com/tXCcAKFMXo
— The Rashtrawadi 🇮🇳 (@RashtrawadiVeer) December 13, 2023
ವಿಡಿಯೋದಲ್ಲಿ ಒಂದು ಅಂಗಡಿಯ ಮುಂದುಗಡೆ ಒಬ್ಬ ವ್ಯಕ್ತಿ ಕೂತಿರುತ್ತಾನೆ. ಪಾಪ ಈ ವ್ಯಕ್ತಿ ತುಂಬಾ ಒಳ್ಳೆಯವನಾಗಿರಬಹುದು, ನಮಗೆ ಖಂಡಿತವಾಗಿ ಏನಾದರೂ ಊಟ ನೀಡಬಹುದು ಎಂದು ಖುಷಿಖುಷಿಯಾಗಿ ಎರಡು ಪುಟ್ಟ ನಾಯಿ ಮರಿಗಳು ಬಾಲ ಅಲ್ಲಾಡಿಸುತ್ತಾ ಅವನ ಬಳಿ ಹೋಗುತ್ತವೆ, ಆದರೆ ಈ ಪಾಪಿ ಮನುಷ್ಯ, ನಾಯಿ ಮರಿ ಆತನ ಬಳಿ ಬರುತ್ತಿದ್ದಂತೆ ಅದನ್ನು ಹಿಡಿದುಕೊಂಡು ಜೋರಾಗಿ ನೆಲಕ್ಕೆ ಬಡಿಯುತ್ತಾನೆ, ಇಷ್ಟು ಸಾಲದ್ದಕ್ಕೆ ಆತ ಕೂತ ಜಾಗದಿಂದ ಎದ್ದು ಬಂದು, ನಾಯಿ ಮರಿಗೆ ಮನಬಂದಂತೆ ಥಳಿಸಿ ಅಲ್ಲಿಂದ ಹೋಗುವ ಒಂದು ಅಮಾನವೀಯ ದೃಶ್ಯವನ್ನು ಕಾಣಬಹುದು. ಪಾಪ ಆ ನಾಯಿ ಏನು ತಪ್ಪು ಮಾಡದೆಯೇ, ನೋವು ತಿನ್ನುತ್ತಿರುವ ದೃಶ್ಯವನ್ನು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ.
ಇದನ್ನೂ ಓದಿ: ಮನೆಯಲ್ಲಿ ಹಳೆಯ ಬಟ್ಟೆಗಳಿದ್ದರೆ ಹೀಗೆ ಮಾಡಿ, ಆದರೆ ತಾಳ್ಮೆಬೇಕು
ಡಿಸೆಂಬರ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.4K ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಈ ಪಾಪಿ ಮನುಷ್ಯನ ವಿರುದ್ಧ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: