
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಕೇವಲ 15 ಸೆಕೆಂಡುಗಳ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟರ ಮಟ್ಟಿಗೆ ರೀಲ್ಸ್ ಯುವಪೀಳಿಗೆಯಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಆದರೆ ಇಲ್ಲೊಂದು ಯುವಕರ ಗುಂಪು ಪೊಲೀಸ್ ಜೀಪ್ ಬಳಸಿ ರೀಲ್ಸ್ ಮಾಡಿದ್ದು, ಈ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಆದ್ರೆ ಈ ಹುಡುಗರಿಗೆ ಅಷ್ಟು ಸಲಿಸಾಗಿ ರೀಲ್ಸ್ ಮಾಡಲು ಪೊಲೀಸ್ ಜೀಪ್ ಎಲ್ಲಿಂದ ಸಿಕ್ಕಿತು ಎಂಬುದೇ ಇಂಟರೆಸ್ಟಿಂಗ್ ಸ್ಟೋರಿ.
ಉತ್ತರ ಪ್ರದೇಶದ ಕಾನ್ಪುರದ ಬಜಾರಿಯಾ ಪೊಲೀಸ್ ಠಾಣೆ ಪೋಲೀಸ್ ಜೀಪ್ ಮೇಲೆ ಯುವಕರು ಗುಂಪೊಂದು ರೀಲ್ಸ್ ಮಾಡಿದ್ದು, ಇದೀಗಾ ಈ ಘಟನೆ ವೈರಲ್ ಆಗುತ್ತಿದ್ದಂತೆ ಪೊಲೀಸರು ಯುವಕರ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಕ್ಯಾನ್ಸರ್ ಗೆದ್ದು ಬಂದ ಪೊಲೀಸ್ ಇಲಾಖೆಯ ಶ್ವಾನ ಸಿಮ್ಮಿ
ಎಸಿಪಿ ಸಿಸಾಮೌ ಶಿಖರ್ ಪ್ರಕಾರ , ಜೀಪನ್ನು ಸರ್ವೀಸ್ಗಾಗಿ ಗ್ಯಾಜೇರಿನಲ್ಲಿ ಇಡಲಾಗಿದೆ. ಈ ಸಮಯದಲ್ಲಿ ಯುವಕರು ಪೊಲೀಸ್ ಜೀಪನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಒಬ್ಬ ಯುವಕನ ಹೆಸರು ಫೈಸಲ್ ಮತ್ತು ಇನ್ನೊಬ್ಬ ಯುವಕನ ಗುರುತು ಪತ್ತೆ ಹಚ್ಚಲಾಗುತ್ತಿದೆ. ಯುವಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ. ವಿಡಿಯೋದಲ್ಲಿ ಹುಡುಗರು ಬಬ್ಬೊಬ್ಬರಾಗಿ ಹೋಗಿ ಜೀಪ್ ಮೇಲೆ ಕುಳಿತುಕೊಂಡು ಕಾಲಮೇಲೆ ಕಾಲು ಹಾಕಿ ಫೋಟೋಗೆ ಪೋಸ್ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:47 am, Sat, 20 May 23