ಸ್ವಲ್ಪ ವರ್ಷಗಳ ಹಿಂದೆ ಮದುವೆ ಮಂಟಪಕ್ಕೆ ವಧು-ವರರು ಮಾಮೂಲಿಯಾಗಿ ದಿಬ್ಬಣದ ಮೂಲಕ ಬರುವ ಸಂಪ್ರದಾಯವಿತ್ತು. ಆದರೆ ಈಗ ಕಾಲ ಬದಲಾಗಿದೆ. ಕಾಲಕ್ಕೆ ತಕ್ಕ ಹಾಗೆ ಟ್ರೆಂಡ್ ಕೂಡಾ ಬದಲಾಗಿದ್ದು, ವಧು-ವರರು ಡಾನ್ಸ್ ಮಾಡುತ್ತಾ ಮಂಟಪಕ್ಕೆ ಎಂಟ್ರಿ ಕೊಡುವಂತಹ, ವಿಶಿಷ್ಟವಾದ ದಿಬ್ಬಣದ ಮೂಲಕ ವಧು-ವರರನ್ನು ಮದುವೆ ಮಂಟಪಕ್ಕೆ ಕರೆ ತರುವಂತಹ ಟ್ರೆಂಡ್ ಹೆಚ್ಚಾಗಿದೆ. ಇಂತಹ ವಿಶಿಷ್ಟ ಮದುವೆಗಳ ಹಲವಾರು ವಿಡಿಯೋಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ನವ ವಧು ಯಕ್ಷಗಾನ ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಮದುವೆ ಮಂಟಪಕ್ಕೆ ಬಂದಿದ್ದಾರೆ.
ಉಡುಪಿಯ ಎರ್ಮಾಲ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧು ಯಕ್ಷಗಾನ ವೇಷಧಾರಿಗಳೊಂದಿಗೆ ವಿಶಿಷ್ಟವಾಗಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಈ ಕುರಿತ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತ ವಿಡಿಯೋವನ್ನು @sakathkaravali ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಮದುವೆ ಮನೆಯಲ್ಲಿ ಮಧು ವರರ ಈ ಸ್ಪೆಷಲ್ ಎಂಟ್ರಿಯನ್ನೊಮ್ಮೆ ನೋಡಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ನವ ವಧು ಹಾಗೂ ಆಕೆಯ ಮನೆಯವರು ಹೆಜ್ಜೆ ಹಾಕುತ್ತಾ ಮದುವೆ ಮಂಟಪಕ್ಕೆ ಎಂಟ್ರಿ ಕೊಡುವಂತಹ ಸುಂದರ ದೃಶ್ಯವನ್ನು ಕಾಣಬಹುದು.
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 13 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಸುಂದರ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ.