ಹಿಂದೆಲ್ಲಾ ಕೂಡು ಕುಟುಂಬಗಳೇ ಹೆಚ್ಚಿದ್ದವು. ಆದ್ರೆ ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬಹುತೇಕ ಹೆಚ್ಚಿನ ಕಡೆ ಬರೀ ವಿಭಕ್ತ ಕುಟುಂಬಗಳೇ ಕಾಣಿಸುತ್ತವೆ. ಒಂದು ಮನೆಯಲ್ಲಿ ಅಪ್ಪ-ಅಮ್ಮ, ಮಕ್ಕಳು, ಇಬ್ಬರು ಮೊಮ್ಮಕ್ಕಳು ಇದ್ದರೇ ಅದೇ ಹೆಚ್ಚು. ಇನ್ನೂ ಈಗಂತೂ ಹಿಂದೆಲ್ಲಾ ಅಸ್ತಿತ್ವದಲ್ಲಿದ್ದ ಬಹು ಪತ್ನಿತ್ವ ಪರಿಕಲ್ಪನೆಯೇ ಇಲ್ಲ ಬಿಡಿ, ಬಹುತೇಕ ಎಲ್ಲರೂ ನಾವಿಬ್ಬರು ನಮಗಿಬ್ಬರು ಎಂಬಂತೆ ತಮ್ಮದೇ ಪುಟ್ಟ ಪ್ರಪಂಚದಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ… ಬರೋಬ್ಬರಿ 12 ಮದುವೆಯಾಗಿ, ಒಟ್ಟು 102 ಮಕ್ಕಳು ಹಾಗೂ 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಈತನ ತುಂಬು ಪರಿವಾರದ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಆಫ್ರಿಕಾದ ಉಗಾಂಡದಲ್ಲಿನ ಮೂಸಾ ಹಸಾಹ್ಯ ಎಂಬ 68 ವರ್ಷದ ವ್ಯಕ್ತಿಯೊಬ್ಬ ಬರೋಬ್ಬರಿ 12 ಹೆಂಡ್ತಿಯರು, 102 ಮಕ್ಕಳು ಮತ್ತು 578 ಮೊಮ್ಮಕ್ಕಳನ್ನು ಹೊಂದಿದ್ದಾನೆ. ಇತ್ತೀಚಿಗೆ ಭಾರತ ಮೂಲದ ವ್ಲಾಗರ್ ಈ ವ್ಯಕ್ತಿಯ ಸಂದರ್ಶನ ಮಾಡಿದ್ದು, ನಾನು ಆಗಾಗ್ಗೆ ಮಕ್ಕಳ ಹೆಸರನ್ನು ಮರೆಯುತ್ತಿರುತ್ತೇನೆ. ಮತ್ತು ಇದೀಗ ವರ್ಷಗಳು ಕಳೆದಂತೆ ಆದಾಯವೂ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ಕುಟುಂಬವನ್ನು ನಿರ್ವಹಿಸುವುದು ಕಷ್ಟಕರವಾಗಿದೆ ಎಂದು ಆತ ಹೇಳಿದ್ದಾನೆ.
ವಿಡಿಯೋ ಕ್ರಿಯೆಟರ್ ಕೈಲಾಶ್ ಮೀನಾ (theindotrekker) ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೈಲಾಶ್ ಮೂಸಾ ಹಸಾಹ್ಯನ ತುಂಬು ಪರಿವಾರದ ಬಗ್ಗೆ ಕೆಲವೊಂದಿಷ್ಟು ಮಾಹಿತಿಯನ್ನು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ನನ್ ಯುಟ್ಯೂಬ್ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ ಫ್ರೀ ಸಮೋಸಾ ಪಡೆಯಿರಿ; ಭರ್ಜರಿ ಆಫರ್ ನೀಡಿದ ವ್ಯಕ್ತಿ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 22.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈತನ ಸಂಪೂರ್ಣ ಕುಟುಂಬವೇ ಒಂದು ಜಿಲ್ಲೆಯಂತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಡೀ ಗ್ರಾಮದಲ್ಲಿ ಈತನ ಪರಿವಾರವೇ ತುಂಬಿ ಹೋಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ತುಂಬು ಪರಿವಾರವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ