ನಿಮ್ಮ ಕೆಲಸದ ಕಾರಣದಿಂದ ನಿಮ್ಮ ಮನೆಯಿಂದ ಬೇರೆ ಯಾವುದಾದರೂ ನಗರದಲ್ಲಿ ನೀವು ವಾಸಿಸುತ್ತಿದ್ದರೆ, ನಿಮಗೆ ಹೆಚ್ಚು ತೊಂದರೆ ಕೊಡುವ ವಿಷಯವೆಂದರೆ ಮನೆ ಬಾಡಿಗೆ. ಜನರ ಆದಾಯದ ಹೆಚ್ಚಿನ ಭಾಗವು ಮನೆ ಬಾಡಿಗೆಗೆ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಮನೆ ಬಾಡಿಗೆಯಿಂದ ಮುಕ್ತರಾಗಲು ಬಸ್, ಟ್ರಕ್ ಖರೀದಿಸಿ ವಾಸ ಮಾಡುತ್ತಿದ್ದಾರೆ. ವಿಶಾಲವಾದ ಬಸ್, ಟ್ರಕ್ಗಳನ್ನು ಖರೀದಿಸಿ ಅದನ್ನು ಮನೆಯ ರೀತಿಯಲ್ಲೇ ವಿನ್ಯಾಸಗೊಳಿಸಿ ಯಾವುದೇ ಬಾಡಿಗೆ ನೀಡದೇ ಆರಾಮ ಜೀವನ ನಡೆಸುತ್ತಿದ್ದಾರೆ.
ದಿ ಸನ್ ವರದಿಯ ಪ್ರಕಾರ, ಟ್ಯಾಮ್ಜಿಕ್ ಇಮೋಜೆನ್ ಆಡಮ್ಸ್ ಎಂಬ ಮಹಿಳೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆದರೂ ಕೂಡ ಆಕೆಗೆ ಸ್ವಂತ ಮನೆಯಿಲ್ಲ. ವ್ಯಾನ್‌ನಲ್ಲಿ ವಾಸಿಸುವ ಈಕೆ ಮನೆಗಳಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ಆ ವ್ಯಾನ್ ಅನ್ನು ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಆಡಮ್ಸ್ ಕಳೆದ ಎರಡು ವರ್ಷಗಳಿಂದ ಒಂದೇ ವ್ಯಾನ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅದೇ ವ್ಯಾನ್ ಸಹಾಯದಿಂದ ಅವರು ಜರ್ಮನಿ, ಬೆಲ್ಜಿಯಂ ಮತ್ತು ಫ್ರಾನ್ಸ್‌ನಂತಹ ದೇಶಗಳನ್ನು ಒಳಗೊಂಡಂತೆ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದು ಏನು? ಚಿತ್ರ ಹೇಳಲಿದೆ ನಿಮ್ಮ ವ್ಯಕ್ತಿತ್ವ
ವಾಸ್ತವವಾಗಿ,ವ್ಯಾನ್ ಅನ್ನು ತನ್ನ ಮನೆಯನ್ನಾಗಿ ಮಾಡಿಕೊಂಡಿರುವ ಈಕೆ ಇದರಿಂದ ಬಾಡಿಗೆಗೆ ಹಣವನ್ನು ಉಳಿಸುತ್ತಿದ್ದಾರೆ. ಆದಾಗ್ಯೂ, 25 ವರ್ಷದ ಆಡಮ್ಸ್ ಹಿರಿಯ ಮಾರ್ಕೆಟಿಂಗ್ ಪ್ರಚಾರ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರ ಸಂಬಳ ವರ್ಷಕ್ಕೆ ಸುಮಾರು 30 ಲಕ್ಷ ರೂ. ಅಂದರೆ ತಿಂಗಳಿಗೆ ಸುಮಾರು 2.5 ಲಕ್ಷ ರೂ. ಆಡಮ್ಸ್ 2020 ರಲ್ಲಿ ವ್ಯಾನ್ ಖರೀದಿಸಿದ್ದು, ಒಟ್ಟು 4 ಲಕ್ಷದಲ್ಲಿ ವ್ಯಾನ್ ಅನ್ನು ಸುಂದರ ಮನೆಯಾಗಿ ಪರಿವರ್ತಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ