AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ishwarya Ramanathan: ಭಾರತದ ಕಿರಿಯ IAS ಅಧಿಕಾರಿ; 24 ನೇ ವಯಸ್ಸಿಗೆ 2ಬಾರಿ UPSC ಪರೀಕ್ಷೆಯಲ್ಲಿ ಪಾಸ್

ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭವಲ್ಲ. ಆದರೆ 24ನೇ ವಯಸ್ಸಿನಲ್ಲಿ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಐಎಎಸ್ ಅಧಿಕಾರಿ ಐಶ್ವರ್ಯ ರಾಮನಾಥನ್ ಗಮನ ಸೆಳೆದಿದ್ದಾರೆ.

Ishwarya Ramanathan: ಭಾರತದ ಕಿರಿಯ IAS ಅಧಿಕಾರಿ; 24 ನೇ ವಯಸ್ಸಿಗೆ 2ಬಾರಿ UPSC ಪರೀಕ್ಷೆಯಲ್ಲಿ ಪಾಸ್
IAS officers Ishwarya Ramanathan
ಅಕ್ಷತಾ ವರ್ಕಾಡಿ
|

Updated on: Apr 06, 2024 | 3:36 PM

Share

ಪ್ರತಿ ವರ್ಷ, IAS ಅಧಿಕಾರಿಯಾಗುವ ಕನಸು ಹೊತ್ತು ಸಾವಿರಾರು ಜನರು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಕುಳಿತುಕೊಳ್ಳುತ್ತಾರೆ. ವಿಶ್ವದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅಷ್ಟು ಸುಲಭವಲ್ಲ. ಆದರೆ 24ನೇ ವಯಸ್ಸಿನಲ್ಲಿ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಐಎಎಸ್ ಅಧಿಕಾರಿ ಐಶ್ವರ್ಯ ರಾಮನಾಥನ್ ಗಮನ ಸೆಳೆದಿದ್ದಾರೆ.

2015 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯನ್ನು ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಮಾಡಿದ್ದರು. 2019 ರ UPSC ಪರೀಕ್ಷೆಯಲ್ಲಿ AIR 47 ಸ್ಥಾನವನ್ನು ಪಡೆದರು. ಪ್ರಸ್ತುತ, ಅವರು ತಮಿಳುನಾಡಿನ ತಿರುವಳ್ಳೂರಿನಲ್ಲಿ ಸಬ್-ಕಲೆಕ್ಟರ್ ಮತ್ತು SDM ಹುದ್ದೆಯನ್ನು ಹೊಂದಿದ್ದಾರೆ. ಐಶ್ವರ್ಯ ರಾಮನಾಥನ್ ಭಾರತದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ, ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಆಕಾಂಕ್ಷೆಯು ತನ್ನ ಬಾಲ್ಯದ ಕನಸಿನಿಂದ ಹುಟ್ಟಿಕೊಂಡಿದೆ ಎಂದು ಐಶ್ವರ್ಯಾ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಜೀವನ ರೂಪಿಸೋದು ಮಾರ್ಕ್ಸ್ ಅಲ್ಲ’; ಪಿಯುಸಿ ಮಾರ್ಕ್ಸ್​ಕಾರ್ಡ್ ಹಂಚಿಕೊಂಡ ಖ್ಯಾತ ಬರಹಗಾರ

ಐಶ್ವರ್ಯಾ ಅವರು 2017 ರಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಕಾಲೇಜು ವರ್ಷಗಳಲ್ಲಿ UPSC ಪರೀಕ್ಷೆಗೆ ತಯಾರಿ ನಡೆಸಿದ್ದು, ತನ್ನ ಮೊದಲ ಪ್ರಯತ್ನದಲ್ಲಿಯೇ 630ನೇ ಶ್ರೇಯಾಂಕದೊಂದಿಗೆ ರೈಲ್ವೇ ಅಕೌಂಟ್ಸ್ ಸೇವೆಯನ್ನು ಪಡೆದುಕೊಂಡರೂ, ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸುವ ಆಕೆಯ ಸಂಕಲ್ಪ ಅಚಲವಾಗಿತ್ತು. 2019 ರಲ್ಲಿ ಎರಡನೇ ಪ್ರಯತ್ನದಲ್ಲಿ, ಐಶ್ವರ್ಯಾ UPSC ಪರೀಕ್ಷೆಯಲ್ಲಿ AIR (All India Rank) 47ನೇ ಸ್ಥಾನದೊಂದಿಗೆ ಯಶಸ್ವಿಯಾಗಿ ತೇರ್ಗಡೆಯಾಗುವ ಮೂಲಕ IAS ಅಧಿಕಾರಿಯಾಗುವ ಗುರಿಯನ್ನು ಸಾಧಿಸಿದರು.

ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ