ಲಕ್ನೊ: ದೇಶದಲ್ಲಿ ಕೊವಿಡ್ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರು, ರೋಗಿಗಳು ದಣಿವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆ ಸಿಬ್ಬಂದಿ ವಿರಾಮವಿಲ್ಲದೇ ಕೆಲಸ ಮಾಡುತ್ತಿರುವುದರಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ ಮಧ್ಯೆ ಜಗಳ ಅತಿರೇಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉತ್ತರಪ್ರದೇಶದ ರಾಂಪುರ್ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಎಎನ್ಐ ಹಂಚಿಕೊಂಡ 14 ನಿಮಿಷದ ವಿಡಿಯೋದಲ್ಲಿ, ಕಳೆದ ಸೋಮವಾರ ರಾಂಪುರ್ ಜಿಲ್ಲಾ ಆಸ್ಪತ್ರೆಯಯಲ್ಲಿ ವೈದ್ಯರು ಮತ್ತು ನರ್ಸ್ ಮಧ್ಯೆ ವಾದವಿವಾದ ಏರ್ಪಟ್ಟಿದೆ. ವಿಡಿಯೋದಲ್ಲಿ ಗಮನಿಸಿದಂತೆ ಇಬ್ಬರೂ ಕೂಡಾ ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ಜೋರಾಗಿ ಕಿರುಚುತ್ತಾರೆ. ಇಬ್ಬರ ನಡುವಿನ ಜಗಳ ಅತಿರೇಕಕ್ಕೆ ಹೋಗಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುತ್ತದೆ. ಜಗಳ ಪ್ರಾರಂಭವಾದಾಗ ಸ್ಥಳದಲ್ಲಿದ್ದ ಪೊಲೀಸರು ಹಾಜರಿದ್ದರೂ ಕೂಡಾ ಜಗಳವನ್ನು ನಿಲ್ಲಿಸದೇ ನಡೆಯುತ್ತಿರುವ ಘಟನೆಯನ್ನು ನೋಡುತ್ತಾ ಮೌನವಾಗಿದ್ದರು. ಇವರ ಜಗಳವನ್ನು ಕಂಡ ಆಸ್ಪತ್ರೆಯ ಇತರ ಸಿಬ್ಬಂದಿ ಜಗಳವನ್ನು ತಡೆಯಲು ಮುಂದಾಗಿದ್ದಾರೆ.
#WATCH | A doctor and a nurse entered into a brawl at Rampur District Hospital yesterday.
City Magistrate Ramji Mishra says, “I have spoken to both of them. They say they were under stress and overburdened. We will probe this & speak to both of them.”
(Note: Abusive language) pic.twitter.com/XJyoHv4yOh
— ANI UP (@ANINewsUP) April 27, 2021
ವರದಿಯ ಪ್ರಕಾರ, ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು. ಈ ಕುರಿತಂತೆ ಪ್ರಮಾಣಪತ್ರವನ್ನು ನೀಡುವಂತೆ ಮೃತರ ಸಂಬಂಧಿಕರು ನರ್ಸ್ ಬಳಿ ಕೇಳಿದ್ದಾರೆ. ಇದನ್ನು ವೈದ್ಯರಲ್ಲಿ ಹೇಳಿದಾಕ್ಷಣ ಲಿಖಿತ ರೂಪದಲ್ಲಿ ಕೊಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದನ್ನು ಕೇಳಿದಾಕ್ಷಣ ಕೋಪಗೊಂಡ ನರ್ಸ್ ಕೋಪಗೊಳ್ಳುತ್ತಾರೆ. ಅಲ್ಲಿ ವೈದ್ಯರು ಮತ್ತು ನರ್ಸ್ ನಡುವೆ ವಿವಾದ ಉಂಟಾಗುತ್ತದೆ. ವಾದ ವಿವಾದದ ಅತಿರೇಕದಲ್ಲಿ ನರ್ಸ್, ವೈದ್ಯರಿಗೆ ಕಪಾಳಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಹಮನಿಸಬಹುದು.
ರಾಂಪುರದ ಮ್ಯಾಜಿಸ್ಟ್ರೇಟ್ ರಾಮ್ಜಿ ಮಿಶ್ರಾ ಮಾತನಾಡಿ, ನಾನು ಅವರಿಬ್ಬರೊಂದಿಗೂ ಮಾತನಾಡಿದ್ದೇನೆ. ಅವರಿಬ್ಬರೂ ಒತ್ತಡದಲ್ಲಿದ್ದರು. ಆಸ್ಪತ್ರೆಯಲ್ಲಿ ಇಬ್ಬರಿಗೂ ಹೆಚ್ಚಿನ ಹೊರೆಯಿತ್ತು. ಈ ಕುರಿತಂತೆ ತನಿಖೆ ನಡೆಸುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್ದೇವ್ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್
Published On - 4:36 pm, Fri, 30 April 21