ನಿಮ್ಮ ಬರ್ತ್ ಡೇ ಅಥವಾ ಯಾವುದಾದರೂ ಕಾರ್ಯಕ್ರಮಕ್ಕೆ ಕೇಕ್ ಡಿಸೈನ್ ಮಾಡಿಸುವ ತಲೆ ನೋವು ಇಟ್ಟುಕೊಳ್ಳಬೇಡಿ. ನೀವು ಬಯಸಿದ ರೀತಿಯಲ್ಲಿ ಕೇಕ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಜೊಮಾಟೋ (Zomato) ಹೊಸದಾದ ಫೋಟೋ ಕೇಕ್ (Photo cake) ಎಂಬ ಹೊಸ ಫೀಚರ್ ತಂದಿದೆ. ಕೇಕ್ ಮೇಲೆ ಯಾರ ಅಥವಾ ಯಾವ ಫೋಟೋ ಇರಬೇಕೆಂದು ನೀವೇ ನಿರ್ಧರಿಸಬಹುದು. ಆ ಫೋಟೋ ಅಪ್ಲೋಡ್ ಮಾಡಿದರೆ ಸಾಕು. ಆ ಚಿತ್ರ ಇರುವ ಕೇಕ್ ನೀವು ಬಯಸಿದ ಬೇಕರಿಯಿಂದಲೇ ನಿಮಗೆ ತಯಾರಾಗಿ ಬರುತ್ತದೆ. ಕೇಕ್ ಮೇಲೆ ಏನಾದರೂ ಬರೆಸಬೇಕೆಂದರೆ ಸಾಮಾನ್ಯವಾಗಿ ಮೊದಲೇ ಪ್ರೀ ಬುಕಿಂಗ್ ಮಾಡಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜೊಮಾಟೋ ನಿಮ್ಮಿಚ್ಛೆ ರೀತಿಯ ವಿನ್ಯಾಸದ ಕೇಕ್ ಅನ್ನು ನಿಮಗೆ ತಲುಪಿಸುತ್ತಿದೆ.
ಜೊಮಾಟೊ ಈಗಾಗಲೇ ಈ ಫೀಚರ್ ಅನ್ನು ಅಳವಡಿಸಿದೆ. ಒಂದು ವೇಳೆ ನಿಮ್ಮ ಫೋನ್ನಲ್ಲಿರುವ ಜೊಮಾಟೋದಲ್ಲಿ ಈ ಫೀಚರ್ ಸಿಗದೇ ಇರಬಹುದು. ಆ್ಯಪ್ ಅಪ್ಡೇಟ್ ಮಾಡಬೇಕಾಗುತ್ತದೆ. ಫೋಟೋ ಕೇಕ್ ಸೇವೆ ಕೊಡುವ ಬೇಕರಿಗಳ ಪಟ್ಟಿಯಲ್ಲಿ ನಿಮಗೆ ಬೇಕಾದ ಶಾಪ್ನಿಂದ ಇಂಥ ಕೇಕ್ ತರಿಸಬಹುದು. ಇತರೆಯಂತೆ ಡೆಲಿವರಿ ಅವಧಿ 30ರಿಂದ 40 ನಿಮಿಷ ಆಗಬಹುದು. ಆ್ಯಪ್ನಲ್ಲೇ ನೀವು ಕೇಕ್ ಯಾವ ರೀತಿ ಕಾಣುತ್ತದೆ ಎಂದು ಪ್ರಿವ್ಯೂ ಕೂಡ ಮಾಡಬಹುದು.
ಇದನ್ನೂ ಓದಿ: ನಿಮ್ಮನ್ನು ಈ ರೀತಿ ನೋಡೋಕೆ ತುಂಬಾ ನೋವಾಗುತ್ತೇ, ದಯವಿಟ್ಟು RCBಗೆ ಬಂದ್ಬಿಡಿ ಕೆ.ಎಲ್ ರಾಹುಲ್ಗೆ ಅಭಿಮಾನಿಗಳ ಮನವಿ
A more light hearted update for today – we just launched Photo Cakes on @zomato – now you can upload your picture and get a customized cake delivered in about 30 minutes.
Tested the feature myself to congratulate Aashna on completing 10 yrs at @zomato. She joined Zomato a few… pic.twitter.com/wmgb5gO7bA
— Deepinder Goyal (@deepigoyal) May 9, 2024
ಮೇ 12ಕ್ಕೆ ವಿಶ್ವ ಅಮ್ಮನ ದಿನ ಇದೆ. ಅದಕ್ಕೆಂದು ಜೊಮಾಟೊ ಫೋಟೋ ಕೇಕ್ ಫೀಚರ್ ಹೊರತಂದಿದೆ ಎಂದು ಹೇಳಲಾಗುತ್ತಿದೆ. ಮದರ್ಸ್ ಡೇ ದಿನದಂದು ಜೊಮಾಟೋದಲ್ಲಿ ಕೇಕ್ಗಳು ಭರ್ಜರಿ ಸೇಲ್ ಆಗುತ್ತವಂತೆ. ಕಳೆದ ವರ್ಷ ಅಮ್ಮನ ದಿನದಂದು ನಿಮಿಷಕ್ಕೆ 150 ಕೇಕ್ ಮಾರಾಟವಾಗಿದ್ದವಂತೆ. ಈ ಬಾರಿ ಮದರ್ಸ್ ಡೇಗೆ ಆಕರ್ಷಕ ಫೀಚರ್ ಸೇರಿಸಿರುವುದರಿಂದ ಇನ್ನಷ್ಟು ಕೇಕ್ಗಳು ಸೇಲ್ ಆಗಬಹುದು. ವರದಿ ಪ್ರಕಾರ ಮೇ 12ರ ಬಳಿಕವೂ ಜೊಮಾಟೋದಲ್ಲಿ ಫೋಟೋ ಕೇಕ್ ಸೇವೆ ಮುಂದುವರಿಯಬಹುದು.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ