‘ಕೊರೊನಾ ಸೋಂಕಿಗೂ ಬದುಕುವ ಹಕ್ಕಿದೆ, ಅದು ಕೂಡಾ ಒಂದು ಜೀವಿ’: ಉತ್ತರಾಖಂಡದ ಮಾಜಿ ಸಿಎಂ ರಾವತ್

|

Updated on: May 14, 2021 | 3:57 PM

‘ಪ್ರತಿ ಜೀವಿಗೂ ಕೂಡಾ ಬದುಕುವ ಹಕ್ಕಿರುತ್ತದೆ. ಹಾಗೆಯೇ ಕೊರೊನಾ ಕೂಡಾ ಒಂದು ಜೀವಿಯಾದ್ದರಿಂದ ಅದಕ್ಕೂ ಜೀವಿಸುವ ಹಕ್ಕಿದೆ’ - ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್

‘ಕೊರೊನಾ ಸೋಂಕಿಗೂ ಬದುಕುವ ಹಕ್ಕಿದೆ, ಅದು ಕೂಡಾ ಒಂದು ಜೀವಿ’: ಉತ್ತರಾಖಂಡದ ಮಾಜಿ ಸಿಎಂ ರಾವತ್
ಉತ್ತರಾಖಂಡದ ಮಾಜಿ ಸಿಎಂ ರಾವತ್
Follow us on

‘ಪ್ರತಿ ಜೀವಿಗೂ ಕೂಡಾ ಬದುಕುವ ಹಕ್ಕಿರುತ್ತದೆ. ಹಾಗೆಯೇ ಕೊರೊನಾ ಕೂಡಾ ಒಂದು ಜೀವಿಯಾದ್ದರಿಂದ ಅದಕ್ಕೂ ಜೀವಿಸುವ ಹಕ್ಕಿದೆ’ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಹೇಳಿರುವ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾತ್ವಿಕ ದೃಷ್ಟಿಕೋನದಿಂದ ನೋಡುವುದಾದರೆ ಕೊರೊನಾ ವೈರಸ್​ ಕೂಡಾ ಒಂದು ಜೀವಿಯಾಗಿದೆ. ಉಳಿದವರಂತೆ ಬದುಕುವ ಹಕ್ಕು ಹೊಂದಿದೆ. ನಾವು ಮಾನವರು. ನಮ್ಮನ್ನು ನಾವು ಅತ್ಯಂತ ಬುದ್ಧಿವಂತರೆಂದು ಅಂದುಕೊಳ್ಳುತ್ತೇವೆ. ಹಾಗಾಗಿ ವೈರಸ್​ಅನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಕೊರೊನಾ ವೈರಸ್​ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡುತ್ತಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್​ ವ್ಯಾಪಕವಾಗಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ರಾವತ್​ ಅವರು ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋವನ್ನು ಗಮನಿಸಿದ ನೆಟ್ಟಿಗರು, ಈ ಜೀವಂತ ವೈರಸ್​ಗೆ ಸೆಂಟ್ರಲ್​ ವಿಸ್ತಾದಲ್ಲಿ ಆಶ್ರಯ ನೀಡಬೇಕು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ಕುಂಭಮೇಳಕ್ಕೆ ಬರುವವರು ಕೊವಿಡ್​-19 ನೆಗೆಟಿವ್​ ರಿಪೋರ್ಟ್​ ತರುವ ಅಗತ್ಯವಿಲ್ಲ’ -ಉತ್ತರಾಖಂಡ ನೂತನ ಸಿಎಂ ತಿರತ್​ ಸಿಂಗ್​ ರಾವತ್​

Published On - 3:55 pm, Fri, 14 May 21