Vaishno Devi Yatra 2021: ನವರಾತ್ರಿ ವಿಶೇಷವಾಗಿ ಜಮ್ಮು-ಕಾಶ್ಮೀರದ ವೈಷ್ಣೋ ದೇವಿಯ ದರ್ಶನ ಪಡೆದ ಭಕ್ತರು

|

Updated on: Apr 13, 2021 | 11:14 AM

Navratri 2021: ಶರನ್ನವರಾತ್ರಿ ಎಂದು ಕರೆಯುವ ಈ ದಿನದಂದು ದುರ್ಗಾದೇವಿಯು ಮಹಿಶಾಸುರನನ್ನು ಸಂಹಾರ ಮಾಡಿದ ದಿನವಾಗಿದೆ. ನವರಾತ್ರಿ ವಿಶೇಷ 10ನೇ ದಿನವನ್ನು ವಿಜಯ ದಶಮಿ ದಿನವನ್ನು ಆಚರಿಸಲಾಗುತ್ತದೆ.

Vaishno Devi Yatra 2021: ನವರಾತ್ರಿ ವಿಶೇಷವಾಗಿ ಜಮ್ಮು-ಕಾಶ್ಮೀರದ ವೈಷ್ಣೋ ದೇವಿಯ ದರ್ಶನ ಪಡೆದ ಭಕ್ತರು
ಶ್ರಿ ಮಾತಾ ವೈಷ್ಣೋ ದೇವಾಲಯ
Follow us on

ಜಮ್ಮು ಕಾಶ್ಮೀರ: ಆಕರ್ಷಕವಾಗಿ ವಿವಿಧ ಬಣ್ಣಗಳ ದೀಪಗಳಿಂದ ಅಲಂಕರಿಸಲ್ಪಟ್ಟ ಜಮ್ಮು- ಕಾಶ್ಮೀರದ ಕಟ್ರಾದ ಶ್ರಿ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಮಂಗಳವಾರ ನವರಾತ್ರಿಯ ಮೊದಲ ದಿನ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಭಕ್ತರು ನವರಾತ್ರಿ ದಿನದಂದು ಮಾತಾ ವೈಷ್ಣೋ ದೇವಿಯಲ್ಲಿ ಪ್ರಾರ್ಥನೆ ಮಾಡಲು ನೆರೆದಿರುತ್ತಾರೆ. ಆದರೆ ಕೊವಿಡ್​ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣದಿಂದ ಶ್ರೀ ಮಾತಾ ವೈಷ್ಣೋ ದೇವಿ ಮಂಡಳಿ (ಎಸ್​ಎಂವಿಡಿಎಸ್​ಬಿ) ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಿದೆ. ವಿವಿಧ ರಾಜ್ಯಗಳಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕೊವಿಡ್​ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಿದೆ.

ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಆರ್​ಟಿ-ಪಿಸಿಆರ್​ ವರದಿಯನ್ನು ಸಲ್ಲಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಕೊವಿಡ್​ ತಡೆ ಹಿಡಿಯಲು ದೇವಸ್ಥಾನದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದೆ ಎಂದು ದೆಹಲಿಯ ಭಕ್ತರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೇವಾಲಯಕ್ಕೆ ರೈಲಿನಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ರೈಲಿನಲ್ಲಿ ಬರುವ ಭಕ್ತರಿಗೆ ನಿಲ್ದಾಣದಲ್ಲಿ ಕೊವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಕಟ್ರಾದ ಉಪ ಪೊಲೀಸ್​ ವರಿಷ್ಠಾಧಿಕಾರಿ(ಡಿಎಸ್​ಪಿ) ಕುಲ್ಜಿತ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.

ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ರಮೇಶ್​ ಕುಮಾರ್​ ದೆವಾಲಯಕ್ಕೆ ಭೇಟಿ ನೀಡಿ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಕಟ್ರಾದ ವಿವಿಧ ಸ್ಥಳಗಳಲ್ಲಿ ಪ್ರಯಾಣ ನೋಂದಣಿ ಕೌಂಟರ್​ನಲ್ಲಿ ಹೆಸರು ನೋಂದಾಯಿಸಲು ಮಾಡಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದ್ದಾರೆ.

ಥರ್ಮಲ್​ ಸ್ಕ್ಯಾನಿಂಗ್​ ಅನ್ನು ತಪ್ಪದೇ ಮಾಡಲಾಗುತ್ತಿದೆ. ಜೊತೆಗೆ ಎಲ್ಲಾ ಕಡೆಯಲ್ಲಿ ಸ್ಯಾನಿಟೈಸರ್​ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಕಟ್ರಾ ರೈಲ್ವೆ ನಿಲ್ದಾಣದಲ್ಲಿ ಭಕ್ತರು ಆಗಮಿಸಿದ ತಕ್ಷಣ ಕೊವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಯೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನವರಾತ್ರಿಯ ಆಚರಣೆಯಲ್ಲಿ ಒಂಬತ್ತು ದೇವಿಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಮುಂದಿನ 9 ದಿನಗಳವರೆಗೆ ದುರ್ಗಾದೇವಿಯ ಪೂಜೆಯಲ್ಲಿ ಭಕ್ತರು ತೊಡಗಿರುತ್ತಾರೆ.

ಶರನ್ನವರಾತ್ರಿ ಎಂದು ಕರೆಯುವ ಈ ದಿನದಂದು ದುರ್ಗಾದೇವಿಯು ಮಹಿಶಾಸುರನನ್ನು ಸಂಹಾರ ಮಾಡಿದ ದಿನವಾಗಿದೆ. ನವರಾತ್ರಿ ವಿಶೇಷ 10ನೇ ದಿನವನ್ನು ವಿಜಯ ದಶಮಿ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಹಾರಾಷ್ಟ್ರ to ಜಮ್ಮು-ಕಾಶ್ಮೀರ: ವೈಷ್ಣೋದೇವಿಯ ಸನ್ನಿಧಾನಕ್ಕೆ ವೃದ್ಧೆಯ ‘ಸೈಕಲ್’ಯಾತ್ರೆ!

ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ನಂತರ ಕಣಿವೆ ರಾಜ್ಯದಲ್ಲಿ ನೈಜ ಪ್ರಜಾಪ್ರಭುತ್ವ ಜಾರಿಯಾಗಿದೆ: ಪ್ರಧಾನಿ ಮೋದಿ