Viral Video : ನಾಗಾಲ್ಯಾಂಡ್ನ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಇವರ ನವಿರಾದ ಹಾಸ್ಯಪ್ರಜ್ಞೆ ನೆಟ್ಟಿಗರನ್ನು ಪ್ರತಿಕ್ರಿಯಿಸುವಂತೆ ಪ್ರೇರೇಪಿಸುತ್ತಿರುತ್ತದೆ. ಇದೀಗ ಪ್ರೇಮಿಗಳ ದಿನದಂದು (Valentine’s Day) ಒಬ್ಬಂಟಿಗರಿಗೆ ವಿಶೇಷ ಸಂದೇಶ ನೀಡಿದ್ದಾರೆ. ನೆಟ್ಟಿಗರು ಆಹಾ ಎಂದು ಸಂಭ್ರಮಿಸುತ್ತಿದ್ದಾರೆ.
Freedom is a gift not meant for everyone.
ಇದನ್ನೂ ಓದಿLet us cherish our day. Heil Singles! pic.twitter.com/4icAaRZNPv
— Temjen Imna Along (@AlongImna) February 14, 2023
ಇಂದು ಪ್ರೇಮಿಗಳ ದಿನ. ಜಗತ್ತಿನ ಸಾಕಷ್ಟು ಜೋಡಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿವೆ. ನೀವೂ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಿದ್ದರೆ ಬಹಳೇ ಖುಷಿ. ಆದರೆ ನಿಮ್ಮಲ್ಲಿ ಕೆಲವರು ಒಂಟಿಯಾಗಿರುತ್ತೀರಿ. ಅಂಥವರು ದಯವಿಟ್ಟು ಬೇಸರಿಸಿಕೊಳ್ಳಬೇಡಿ, ದುಃಖಿಸಬೇಡಿ. ನೀವು ಸಂಗಾತಿಗಾಗಿ ಹುಡುಕಾಟವನ್ನು ನಿಲ್ಲಿಸಿ. ಆದರೆ ನಿಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸಿ!
ಇದನ್ನೂ ಓದಿ : ಸೀರೆಯುಟ್ಟು ಜಿಮ್ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
‘ಒಬ್ಬಂಟಿಗರಿಗೆ ನಮಸ್ಕಾರ! ಸ್ವಾತಂತ್ರ್ಯ ಎನ್ನುವುದು ಉಡುಗೊರೆ. ಆದರೆ ಎಲ್ಲರಿಗೂ ಇದು ಸಿಗುವಂಥದ್ದಲ್ಲ. ಬನ್ನಿ ನಮ್ಮ ಈ ದಿನವನ್ನು ಆಚರಿಸೋಣ.’ ಎಂದಿದ್ದಾರೆ ತೆಮ್ಜೆನ್. ಅನೇಕರು ಈ ಟ್ವೀಟ್ ನೋಡಿ, ಓಹ್ ನೀವು ಸಿಂಗಲ್ ಎಂದು ನಮಗೀಗಲೇ ತಿಳಿಯಿತು ಎಂದು ನಕ್ಕಿದ್ದಾರೆ.
ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್ ನೋಡಿದ್ದಾರೆ. 18,400 ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 1,300ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಹಲವಾರು ಜನ, ನಿಮಗಾಗಿ ನಾವು ಹುಡುಗಿ ಹುಡುಕುತ್ತಿದ್ದೇವೆ ಎಂದು ತೆಮ್ಜೆನ್ ಅವರಿಗೆ ಹೇಳಿದ್ದಾರೆ.
ಇದನ್ನೂ ಓದಿ : ಎಸ್ಕಲೇಟರ್ ಹುಚ್ಚು ಹಿಡಿಸಿಕೊಂಡ ನಾಯಿಯ ವಿಡಿಯೋ ವೈರಲ್
ಬನ್ನಿ ನಿಮಗೂ ಸ್ವಾಗತ ಎಂದು ಯೋಗಿ ಆದಿತ್ಯನಾಥ ಫೋಟೋ ಟ್ವೀಟ್ ಮಾಡಿದ್ದಾರೆ ಒಬ್ಬರು. ತೆಮ್ಜೆನ್ ಬಹಳ ಬೇಡಿಕೆಯಲ್ಲಿರುವ ಅವಿವಾಹಿತ ಪುರುಷ ನೀವು. ನಿಮಗಾಗಿ ಖಂಡಿತ ಹುಡುಗಿ ಹುಡುಕೋಣ ಎಂದಿದ್ಧಾರೆ ಮತ್ತೊಬ್ಬರು. ಆಲ್ ಇಂಡಿಯಾ ಸಿಂಗಲ್ ಪೀಪಲ್ ಅಸೋಸಿಯೇಷನ್ಗೆ ನೀವೇ ಅಧ್ಯಕ್ಷರು ಸರ್ ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:31 pm, Tue, 14 February 23