Video: ಮಗನ ಮದುವೆಯ ಶುಭ ಸಂದರ್ಭದಲ್ಲಿ ಪವಿತ್ರ ನಗರ ವಾರಣಾಸಿಗೆ ಗೌರವ ಸಲ್ಲಿಸಿದ ನೀತಾ ಅಂಬಾನಿ

|

Updated on: Jul 12, 2024 | 2:57 PM

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಶುಭ ಸಂದರ್ಭದಲ್ಲಿ ನೀತಾ ಅಂಬಾನಿ ಅವರು ಪವಿತ್ರ ನಗರವಾದ ವಾರಣಾಸಿಯ ಅದ್ಭುತ ಮರುಕಲ್ಪನೆಯ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ ಮದುವೆ ಸಮಾರಂಭದ ಕಾರ್ಯ ಭರದಿಂದ ಸಾಗಿದೆ. ಇಂದಿನಿಂದ (ಜುಲೈ 12) ಮೂರು ದಿನಗಳ ವರೆಗೆ ಅನಂತ್ ಅಂಬಾನಿ​​ ಹಾಗೂ ರಾಧಿಕಾ ಮದುವೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ. ಇದೀಗ ವಿವಾಹ ಮಹೋತ್ಸವದ ಶುಭ ಸಂದರ್ಭದಲ್ಲಿ ಅಂಬಾನಿ ಕುಟುಂಬವು ಪವಿತ್ರ ನಗರವಾದ ವಾರಣಾಸಿಗೆ (ಕಾಶಿ) ಗೌರವ ಸಲ್ಲಿಸಿದೆ. ಮದುವೆಗೂ ಮುನ್ನ ಮೊದಲ ಆಮಂತ್ರಣ ಪತ್ರದೊಂದಿಗೆ ವಾರಾಣಾಸಿಗೆ ಭೇಟಿ ನೀಡಿದ್ದ ಅಂಬಾನಿ ಕುಟುಂಬ, ಇದಲ್ಲದೇ ಇತ್ತೀಚಿಗಷ್ಟೇ ನೀತಾ ಅಂಬಾನಿ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅನಂತ್ ಮತ್ತು ರಾಧಿಕಾ ಅವರಿಗೆ ಶಿವನ ಆಶೀರ್ವಾದ ಕೋರಿದ್ದಾರೆ.

ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಪವಿತ್ರ ನಗರವಾದ ವಾರಣಾಸಿಯ ಅದ್ಭುತ ಮರುಕಲ್ಪನೆಯ ಮೂಲಕ ನೀತಾ ಅಂಬಾನಿ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ಅವರು ಪಡೆಯುವ ಸಂಭಾವನೆ ಎಷ್ಟು?