Video: ನರಳಿ ನರಳಿ ಪ್ರಾಣ ಬಿಟ್ಟ ಗಜರಾಜ, ಕಾಡಾನೆಗೆ ಡಿಕ್ಕಿ ಹೊಡೆದ ರೈಲು
ಮನುಷ್ಯನ ಅಭಿವೃದ್ಧಿಯ ದೆಸೆಯಿಂದ ಪ್ರಾಣಿಗಳಿಗೆ ಸ್ವತಂತ್ರವಾಗಿ ಓಡಾಡಲೂ ಕಷ್ಟಸಾಧ್ಯವಾಗಿದೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಹೃದಯ ವಿದ್ರಾವಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾನವ- ವನ್ಯಮೃಗ ಸಂಘರ್ಷದಿಂದ ಈಗಾಗಲೇ ಸಾಕಷ್ಟು ಕಾಡು ಪ್ರಾಣಿಗಳು ಬಲಿಯಾಗಿದ್ದು, ಈ ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದೀಗ ಅಂತಹದೇ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಆನೆ ನರಳಾಡುತ್ತಾ ಪ್ರಾಣ ಬಿಟ್ಟ ಮನಕಲಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಅಸ್ಸಾಂ ರಾಜ್ಯದಲ್ಲಿ ನಡೆದಿದ್ದು, ಇಲ್ಲಿನ ಮೊರಿಗಾಂವ್‌ನಲ್ಲಿರುವ ಜಾಗಿರೋಡ್ ರೈಲು ನಿಲ್ದಾಣದ ಬಳಿ ವೇಗವಾಗಿ ಬರುತ್ತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಕಾಡಾನೆ ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದೆ. ತನ್ನ ಹಿಂಡಿನಿಂದ ಬೆರ್ಪಟ್ಟ ಗಂಡಾನೆ ರೈಲ್ವೆ ಹಳಿ ದಾಟುತಿತ್ತು. ಹೀಗೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಅಲ್ಲೇ ಕುಸಿದು ಬಿದ್ದ ಆನೆ, ಗಂಭೀರವಾಗಿ ಗಾಯಗೊಂಡ ಕಾರಣ ಹಳಿಯ ಮೇಲಿಂದ ಎದ್ದೇಳಲು ಹರಸಾಹಸ ಪಟ್ಟು ಕೊನೆಗೆ ಅಲ್ಲಿಯೇ ನರಳಿ ನರಳಿ ಪ್ರಾಣ ಬಿಟ್ಟಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
I would like to ask the Indian Railways, when will they be kind to animals? An adult male elephant died after being hit by a train near Jagiroad railway station in Assam today.@RailMinIndia pic.twitter.com/yNkAfX1LBL
— Nandan Pratim Sharma Bordoloi (@NANDANPRATIM) July 10, 2024
ನಂದನ್ ಪ್ರತಿಮ್ ಶರ್ಮಾ (NANDANPRATHIM) ಎಂಬವರು ಈ ಕುರಿತ ಪೋಸ್ಟ್ ಒಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ರೈಲಿಗೆ ಡಿಕ್ಕಿ ಹೊಡೆದ ಆನೆ ಎದ್ದು ನಿಂತುಕೊಳ್ಳಲು ಆಗದೆ ತೆವಳುತ್ತಾ ತೆವಳುತ್ತಾ ಹೋಗಿ ಕೊನೆಯಲ್ಲಿ ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ಮನಕಲಕುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಐಸ್ ಕ್ರೀಮ್ ಕೊಟ್ಟು ಅಪ್ರಾಪ್ತ ಬಾಲಕಿ ಜೊತೆ ಅಸಭ್ಯ ವರ್ತನೆ; ವಿಡಿಯೋ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರು ‘ಈ ಸಾವು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ. ಇನ್ನೂ ನೆಟ್ಟಿಗರು ಮನುಷ್ಯರಿಂದಲೇ ಮುಗ್ಧ ಪ್ರಾಣಿಗಳು ಬಲಿಯಾಗುತ್ತಿವೆ ಎಂದು ಕಿಡಿ ಕಾರಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Fri, 12 July 24