Viral Video: ಗ್ರಹ ಶಾಂತಿ ವೇಳೆ ತಬ್ಬಿಕೊಂಡ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್; ಭಾವುಕರಾದ ಮುಖೇಶ್ ಅಂಬಾನಿ
Ambani Wedding: ಇಂದು (ಜುಲೈ 12) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವ ನಡೆಯುತ್ತಿದೆ. ಇದಕ್ಕೂ ಮೊದಲು ಅಂಬಾನಿ ಫ್ಯಾಮಿಲಿ ಒಬೆರಾಯ್‌ನ ರೀಗಲ್ ರೂಮ್‌ನಲ್ಲಿ ಗ್ರಹ ಶಾಂತಿ ಪೂಜೆ ಮತ್ತು ಮಾಂಡ್ವಾ ಮುಹೂರ್ತವನ್ನು ಆಯೋಜಿಸಿದರು. ಮಾಂಡ್ವಾ ಮುಹೂರ್ತ ಸಮಾರಂಭದಲ್ಲಿ ವಧು-ವರರ ಪೋಷಕರು ಭೂಮಿ ತಾಯಿಯ ಆಶೀರ್ವಾದವನ್ನು ಕೋರುತ್ತಾರೆ.
ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಪೂರ್ವದ ಆಚರಣೆಗಳು ಗ್ಲಾಮರ್, ಸಂಪ್ರದಾಯ ಮತ್ತು ಭಾವನಾತ್ಮಕ ಕ್ಷಣಗಳ ಮಿಶ್ರಣವಾಗಿದೆ. ಅವರು ಇಂದು (ಜುಲೈ 12) ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮದುವೆಯಾಗಲಿದ್ದಾರೆ. ಇದಕ್ಕೂ ಮೊದಲು ಅವರ ಅದ್ದೂರಿ ಪ್ರಿ ವೆಡ್ಡಿಂಗ್ ಆಚರಣೆ ಬಹಳ ಗಮನವನ್ನು ಸೆಳೆದಿವೆ.
ಪೂರ್ವಜರನ್ನು ಗೌರವಿಸುವ ಮತ್ತು 9 ಗ್ರಹಗಳ ನಡುವೆ ಸಾಮರಸ್ಯವನ್ನು ಹುಡುಕುವ ಪುರಾತನ ಸಮಾರಂಭವಾದ ಅವರಿಬ್ಬರ ಗ್ರಹ ಶಾಂತಿ ಪೂಜೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ರಾಧಿಕಾ ಅವರ ಕೈ ಹಿಡಿದ ಅನಂತ್ ಹೂಮಾಲೆಗಳನ್ನು ಬದಲಾಯಿಸಿಕೊಳ್ಳುವುದು ಮತ್ತು ಬೆಚ್ಚಗಿನ ಅಪ್ಪುಗೆಯನ್ನು ಹಂಚಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿ ಅನಂತ್ ಅಂಬಾನಿಯ ತಂದೆ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
ಇದನ್ನೂ ಓದಿ: ಮುಖೇಶ್ ಅಂಬಾನಿ, ನೀತಾ ಅಂಬಾನಿ ಡಯೆಟ್ ಹೇಗಿರುತ್ತೆ?
ಗ್ರಹ ಶಾಂತಿಗಾಗಿ ಕೆಂಪು ಕಸೂತಿಯಿದ್ದ ಬ್ಲೌಸ್ ಜೊತೆಗೆ ಬಿಳಿ ಮತ್ತು ಚಿನ್ನದ ಬಣ್ಣದ ಸೀರೆಯಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರೆ, ಅನಂತ್ ಸಾಂಪ್ರದಾಯಿಕ ಮೆರೂನ್ ಕುರ್ತಾ ಮತ್ತು ಚಿನ್ನದ ಬಣ್ಣದ ನೆಹರು ಜಾಕೆಟ್ ಧರಿಸಿದ್ದರು.
ಭಾರತೀಯ ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ವೀರೇನ್ ಮರ್ಚೆಂಟ್ ಅವರ ಮಕ್ಕಳಾದ ಅನಂತ್ ಮತ್ತು ರಾಧಿಕಾ ಇಂದು ತಮ್ಮ ದಾಂಪತ್ಯ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲಿದ್ದಾರೆ. ಅವರ 3 ದಿನಗಳ ವಿವಾಹ ಮಹೋತ್ಸವವು ಸಂಪ್ರದಾಯ ಮತ್ತು ಕೌಟುಂಬಿಕ ಪ್ರೀತಿಯ ವಿಶಿಷ್ಟ ಮಿಶ್ರಣವಾಗಿದೆ. ಇದರಲ್ಲಿ ಸಿನಿಮಾ, ಕ್ರಿಕೆಟ್, ಉದ್ಯಮ, ರಾಜಕೀಯ ಮುಂತಾದ ಎಲ್ಲ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ