ನ್ಯೂಯಾರ್ಕಿನ 23 ಅಂತಸ್ತಿನ ಕಟ್ಟಡದ ಮೇಲೆ ಜಿಗಿದಾಡುತ್ತಿರುವ ಈತನ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Oct 08, 2022 | 6:06 PM

New York : ನೀವಾದರೂ ಹೇಳಿ, ಈ ಮನುಷ್ಯ ಯಾಕೆ ಹೀಗೆ ಈ ಕಟ್ಟಡದ ಮೇಲ್ಚಾವಣಿಗಳ ಮೇಲೆ ಜಿಗಿದಾಡುತ್ತಿದ್ದಾನೆಂದು. ಅನೇಕರು ಈ ವಿಡಿಯೋ ನೋಡಿದ್ದಾರಾದರೂ ಅವರಿಗೂ ಉತ್ತರ ಹೊಳೆದಿಲ್ಲ.

ನ್ಯೂಯಾರ್ಕಿನ 23 ಅಂತಸ್ತಿನ ಕಟ್ಟಡದ ಮೇಲೆ ಜಿಗಿದಾಡುತ್ತಿರುವ ಈತನ ವಿಡಿಯೋ ವೈರಲ್
Follow us on

Viral Video : ಹಾಲಿವುಡ್​ ಚಲನಚಿತ್ರ ನಿರ್ದೇಶಕ ಎರಿಕ್ ಲ್ಜಂಗ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಈ ಮನುಷ್ಯ ಏನು ಮಾಡುತ್ತಿದ್ದಾನೆ ಎನ್ನುವುದೇ ತಿಳಿಯುತ್ತಿಲ್ಲ. ನೋಡಿದ ಯಾರಿಗೂ ಇದು ತಮಾಷೆ ಎನ್ನಿಸುವಂತಿದೆ. ಅಮೆರಿಕದ ನ್ಯೂಯಾರ್ಕ್‌ನ ಈ 23 ಅಂತಸ್ತಿನ ಕಟ್ಟಡವನ್ನು ಏರಿದ ಕಪ್ಪು ಸೂಟ್‌ಧಾರಿ ವ್ಯಕ್ತಿ ಮೇಲ್ಚಾವಣಿಯಿಂದ ಮೇಲ್ಚಾವಣಿಗೆ ಜಿಗಿಯುತ್ತಲೇ ಇದ್ದಾನೆ. ಈ ಕಟ್ಟಡ ಸುಮಾರು 117 ವರ್ಷಗಳಷ್ಟು ಹಳೆಯದಾಗಿದೆ. ಹೀಗೆ ಇವ ಜಿಗಿಯುತ್ತಿದ್ದರೂ ಯಾವುದೇ ರೀತಿಯ ರಕ್ಷಣಾ ಕವಚಗಳನ್ನು ಧರಿಸಿಲ್ಲ.

ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇವನು ಅದೆಂಥ ಸ್ಟಂಟ್ ಮಾಡುತ್ತಾನೆಂದು ಕಾಯುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಈ ಕಟ್ಟಡದ ಎಲ್ಲಾ ಬಾಗಿಲುಗಳು ಮುಚ್ಚಿರಬಹುದು. ಇವನು ಒಳಹೋಗಲು ಪ್ರಯತ್ನಿಸುತ್ತಿರಬಹುದು. ಏನು ಮಾಡುವುದು ಒಂದು ಬಾಗಿಲು ತೆರೆದಂತೆಯೇ ಇಲ್ಲ ಎಂದು ಹೇಳಿದ್ದಾರೆ ಮತ್ತೊಬ್ಬರು. ಇವನು ಯಾವ ಶೂಸ್​ ಹಾಕಿಕೊಂಡಿದ್ದಾನೆಂದು ತಿಳಿದುಕೊಳ್ಳಬೇಕಿದೆ ಎಂದು ಮಗದೊಬ್ಬರು ತಮಾಷೆ ಮಾಡಿದ್ದಾರೆ.

ನಿಮಗೇನಾದರೂ ಅರ್ಥವಾಗುತ್ತಿದೆಯೇ? ಇವನು ಹೀಗೇಕೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಜಿಗಿಯುತ್ತಿದ್ದಾನೆಂದು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ