AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಣ್ಣ ಮುಚ್ಚಾಲೆ ಆಡುತ್ತಿರುವ ಮುದ್ದಾದ ಶ್ವಾನಗಳು; ಸೋ ಸ್ವೀಟ್ ಎನ್ನುತ್ತಿದ್ದಾರೆ ನೆಟ್ಟಿಗರು

ಎರಡು ಮುದ್ದಾದ ನಾಯಿಗಳು ಪರಸ್ಪರ ಕಣ್ಣ ಮುಚ್ಚಾಲೆ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ನೆಟ್ಟಿಗರು ಸೋ ಸ್ವೀಟ್ ಎನ್ನುತ್ತಿದ್ದಾರೆ. ನೀವು ಶ್ವಾನ ಪ್ರಿಯರಾಗಿದ್ದರೆ ಈ ವಿಡಿಯೋ ನಿಮಗೆ ಖುಷಿ ನೀಡಲಿದೆ.

Viral Video: ಕಣ್ಣ ಮುಚ್ಚಾಲೆ ಆಡುತ್ತಿರುವ ಮುದ್ದಾದ ಶ್ವಾನಗಳು; ಸೋ ಸ್ವೀಟ್ ಎನ್ನುತ್ತಿದ್ದಾರೆ ನೆಟ್ಟಿಗರು
ಕಣ್ಣ ಮುಚ್ಚಾಲೆ ಆಡುತ್ತಿರುವ ಮುದ್ದಾದ ಶ್ವಾನಗಳು
TV9 Web
| Updated By: Rakesh Nayak Manchi|

Updated on:Oct 09, 2022 | 11:36 AM

Share

ನೀವು ಮುದ್ದಾದ ಪ್ರಾಣಿಗಳ ವೀಡಿಯೊಗಳ ಅಭಿಮಾನಿಯಾಗಿದ್ದರೆ ಭಾನುವಾರದ ಈ ರಜಾ ದಿನದಂದು ಈ ವಿಡಿಯೋ ನಿಮ್ಮ ಮುಖದಲ್ಲಿ ಖುಷಿ ತರುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ವೈರಲ್ ವಿಡಿಯೋವನ್ನು ನೀವು ತಪ್ಪದೇ ನೋಡಿ ಆನಂದಿಸಿ. ಎರಡು ಸಾಕು ನಾಯಿಗಳು ಪರಸ್ಪರ ಕಣ್ಣಾಮುಚ್ಚಾಲೆ ಆಡುತ್ತಿರುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತಿದೆ. ಈ ವಿಡಿಯೋವನ್ನು ಡ್ಯಾನಿ ಡೆರಾನಿ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, 64 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು, ಮೂರು ಸಾವಿರಕ್ಕೂ ಹೆಚ್ಚು ಲೈಕ್​ಗಳು ಹಾಗೂ ನೂರಾರು ರೀಟ್ವಿಟ್​ಗಳು ಆಗಿವೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಮುದ್ದಾದ ಪುಟ್ಟ ನಾಯಿಮರಿಯು ಗೋಡೆಯ ಹಿಂದೆ ಅಡಗಿಕೊಂಡಿರುತ್ತದೆ. ಇನ್ನೊಂದು ನಾಯಿಮರಿಯು ಅದನ್ನು ಪತ್ತೆಹಚ್ಚುವಲ್ಲಿ ನಿರತವಾಗಿದೆ. ತನ್ನ ಕಣ್ಣಿಗೆ ಕಾಣದೆ ಅವಿತೊಂಡಿರುವ ತನ್ನ ಸೇಹಿತನನ್ನು ಪತ್ತೆ ಹಚ್ಚಲು ಅತ್ತಿತ್ತ ಹುಡುಕಾಡುತ್ತಾ ಇರುತ್ತದೆ. ಅದು ಸ್ವಲ್ಪ ಸಮಯದವರೆಗೆ ತಾಳ್ಮೆಯಿಂದ ಕಾಯುತ್ತದೆ. ಅಡಗಿಕೊಂಡಿರುವ ನಾಯಿ ತನ್ನ ಗೆಳೆಯ ಏನು ಮಾಡುತ್ತಿದ್ದಾನೆ ಎಂದು ಗೋಡೆಯ ಬದಿಯಲ್ಲಿ ನಿಂತು ಇಣುಕಿ ನೋಡುತ್ತದೆ, ಅದು ತನ್ನತ್ತ ತಿರುಗುತ್ತಿದ್ದಂತೆ ಮತ್ತೆ ಮರೆಮಾಚುವುದು ನೆಟ್ಟಿಗರನ್ನು ಫಿದಾ ಮಾಡಿಸಿದೆ. ಬಳಿಕ ಕೆಲವೇ ಕ್ಷಣಗಳಲ್ಲಿ ಹುಡುಕಾಟದ ಸ್ಥಳವನ್ನು ಬದಲಾಯಿಸಿ ಮುಂದಕ್ಕೆ ಸಾಗಿದಾಗ ಅವಿತುಕುಳಿತಿದ್ದ ತನ್ನ ಗೆಳೆಯನನ್ನು ಪತ್ತೆ ಹಚ್ಚಿಯೇ ಬಿಟ್ಟಿತು. ಈ ವೇಳೆ ಎರಡು ನಾಯಿಗಳು ಕೂಡ ಸಂತಸಗೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸದ್ಯ ಕ್ಯೂಟ್ ನಾಯಿಗಳ ಕಣ್ಣಾಮುಚ್ಚಾಲೆಯ ಪುಟ್ಟ ಆಟ ನೆಟ್ಟಿಗರ ಹೃದಯವನ್ನು ಕರಗಿಸುತ್ತಿದೆ. ಕೇವಲ ಎರಡು ನಾಯಿಗಳು ಪರಸ್ಪರ ಕಣ್ಣಾಮುಚ್ಚಾಲೆ ಆಡುತ್ತಿವೆ. ನಾಯಿಗಳು ಅತ್ಯುತ್ತಮ ವ್ಯಕ್ತಿಗಳು ಎಂದು ಡ್ಯಾನಿ ಡೆರಾನಿ ಅವರು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸೋ ಸ್ವೀಟ್ ಎಂಬಿತ್ಯಾದಿ ಪದಗಳನ್ನು ಬರೆದು ಕಳುಹಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Sun, 9 October 22

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್