Viral Video: ನಾಯಿ ಮತ್ತು ಅವನು: ಟೈಟಾನಿಕ್ ಸಿನಿಮಾದ ಜನಪ್ರಿಯ ದೃಶ್ಯದ ಮರುನಿರ್ಮಾಣ
ನಾಯಿಯೊಂದಿಗೆ ಯುವಕನೊಬ್ಬ ಟೈಟಾನಿಕ್ ಸಿನಿಮಾದ ದೃಶ್ಯಾವಳಿಯನ್ನು ಮರು ನಿರ್ಮಾಣ ಮಾಡಿ ಇಂಟರ್ನೆಟ್ನಲ್ಲಿ ಗಮನ ಸೆಳೆದಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ.
ಸಮುದ್ರದಲ್ಲಿ ಸಾಗುತ್ತಿದ್ದ ಹಡಗಿನ ಮುಂಭಾಗದ ಅಂಚಿನಲ್ಲಿ ಒಬ್ಬ ಯುವಕ ಮತ್ತು ಒಬ್ಬ ಯುವತಿ ನಿಂತುಕೊಂಡು ಪ್ರಕೃತಿಗೆ ಮೈಯೊಡುತ್ತಿರುತ್ತಾರೆ. ಯುವತಿ ಮುಂಭಾಗದಲ್ಲಿ ನಿಂತಿದ್ದರೆ ಯುವಕ ಆಕೆಯನ್ನು ಹಿಂಬದಿಯಿಂದ ಹಿಡಿದುಕೊಂಡು ಗಾಳಿಯನ್ನು ಆಸ್ವಾದಿಸುತ್ತಾರೆ. ಇದು ಜನಪ್ರಿಯ ಟೈಟಾನಿಕ್ ಸಿನಿಮಾದಲ್ಲಿ ಹೀರೋ ಜ್ಯಾಕ್ ಮತ್ತು ಹೀರೋಯಿನ್ ರೋಸ್ ಅವರ ಅಭಿನಯವಾಗಿದೆ. ಇದೀಗ ಇದೇ ದೃಶ್ಯವನ್ನು ಮುಂದಿಟ್ಟುಕೊಂಡು ಯುವಕನೊಬ್ಬ ರೀಲ್ಸ್ ಮಾಡಿದ್ದಾನೆ. ಇದರಲ್ಲಿ ಯುವಕ ಟೈಟಾನಿಕ್ ಫಿಲ್ಮ್ ನಟಿಯಂತೆ ನಟನೆ ಮಾಡಿದ್ದು, ಯುವಕನಾಗಿ ಮುದ್ದಾದ ನಾಯಿ ಅಭಿನಯಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಗೆ ಸಖತ್ ಮನರಂಜನೆಯನ್ನು ನೀಡುತ್ತಿದೆ.
ಯುವಕ ರೋಸ್ನಂತೆ ಮೇಕಪ್ ಮಾಡುವುದರಿಂದ ವಿಡಿಯೋ ಆರಂಭವಾಗುತ್ತದೆ. ಮ್ಯಾಕ್ಸಿನ್ ಎಂಬ ಹೆಸರಿನ ನಾಯಿಗೆ ಜ್ಯಾಕ್ನಂತೆ ವೇಷ ಧರಿಸಲಾಗುತ್ತದೆ. ನಂತರ ಹಡಗಿನ ಮುಂಭಾಗದಲ್ಲಿರುವ ತಡೆಯನ್ನು ನಿರ್ಮಿಸಿ ಅಲ್ಲಿ ಕುರ್ಚಿಯನ್ನು ಇಡಲಾಗುತ್ತದೆ. ನಂತರ ನಾಯಿಯನ್ನು ಬೆನ್ನಿಗೆ ಕಟ್ಟಿದ ರೋಸ್ ವೇಷದಲ್ಲಿರುವ ಯುವಕ ಆ ಕುರ್ಚಿ ಮೇಲೆ ನಿಂತುಕೊಂಡು ಟೈಟಾನಿಕ್ ಸಿನಿಮಾದ ಆ ಒಂದು ದೃಶ್ಯಾವಳಿಯನ್ನು ಮರುನಿರ್ಮಾಣ ಮಾಡುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಮ್ಯಾಕ್ಸಿನ್ ಇದೇ ಮೊದಲ ಬಾರಿ ನೆಟ್ಟಿಗರಿಗೆ ಕಣ್ಣಿಗೆ ಬಿದ್ದಿಲ್ಲ. ಇದಕ್ಕೂ ಮೀಸಲಾಗಿರುವ ಇನ್ಸ್ಟಾಗ್ರಾಮ್ ಖಾತೆಯೊಂದು ಇದೆ. ಇದರಲ್ಲಿ ಮ್ಯಾಕ್ಸಿನ್ ಮಾಡುವ ರೀಲ್ಸ್ಗಳನ್ನು ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ಮ್ಯಾಕ್ಸಿನ್ ಒಂದಷ್ಟು ನೆಟ್ಟಿಗರಿಗೆ ಚಿರಪರಿಚಿತ. ಸದ್ಯ ಟೈಟಾನಿಕ್ ಸಿನಿಮಾದ ದೃಶ್ಯಾವಳಿಯನ್ನು ನೆನಪಿಸುವಂತೆ ಮಾಡಿದ ಈ ರೀಲ್ಸ್ ಅನ್ನು ಕೂಡ ಅದೇ ಪೇಜ್ನಲ್ಲಿ ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, 60 ಸಾವಿರಕ್ಕು ಹೆಚ್ಚು ಲೈಕ್ಗಳು ಬಂದಿವೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Sun, 9 October 22