Viral Video: ಸೀರೆ ಉಟ್ಟು ಕಬಡ್ಡಿ ಆಡಿದ ಮಹಿಳೆಯರು

ಸೀರೆಯುಟ್ಟು ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಮಹಿಳೆಯರು ಕಬಡ್ಡಿ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯರು ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಆಡುವ ಮೂಲಕ ಭಾರತದ ಸಂಸ್ಕೃತಿಯನ್ನು ಎಲ್ಲೆಡೆ ಪ್ರತಿಬಿಂಬಿಸಿದ್ದಾರೆ.

Viral Video: ಸೀರೆ ಉಟ್ಟು ಕಬಡ್ಡಿ ಆಡಿದ ಮಹಿಳೆಯರು
ಸೀರೆ ಉಟ್ಟು ಕಬಡ್ಡಿ ಆಡಿದ ಮಹಿಳೆಯರು
Follow us
TV9 Web
| Updated By: Rakesh Nayak Manchi

Updated on:Oct 09, 2022 | 6:20 PM

ಶಾರ್ಟ್ಸ್ ಮತ್ತು ಟಿ-ಶರ್ಟ್ ಧರಿಸಿ ಕಬ್ಬಡಿ ಆಡುವವರ ನಡುವೆ ಒಂದಷ್ಟು ಮಹಿಳಾ ಮಣಿಗಳು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಸೀರೆಯನ್ನು ಉಟ್ಟು ಕಬಡ್ಡಿ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಟ್ರೆಂಡಿಂಗ್ ಪಡೆದುಕೊಂಡಿದೆ. ಸೀರೆಯುಟ್ಟು ಸೊಂಟಕ್ಕೆ ಸೆರಗು ಕುತ್ತಿ ಕಬಡ್ಡಿ ಕಬಡ್ಡಿ ಎನ್ನುತ್ತ ಎದುರಾಳಿ ತಂಡವನ್ನು ಮಣಿಸಲು ಬಹಳ ಉತ್ಸಾಹದಿಂದ ಆಡುತ್ತಿರುವ ಮಹಿಳೆಯರ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಬಡ್ಡಿ ಆಟದಲ್ಲಿ ಮಹಿಳೆಯರು ಪರಸ್ಪರ ಮುಖಾಮುಖಿಯಾಗುತ್ತಿರುವ ಈ ವಿಡಿಯೋ ಅಂತರ್ಜಾಲದಲ್ಲಿ ಸಾಕಷ್ಟು ಗಮನ ಸೆಳೆದಿದ್ದು, 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನನ್ನು ಪಡೆದಿದೆ.

ವೀಡಿಯೊದಲ್ಲಿ, ಜನರ ಏರು ಧ್ವನಿಯ ಪ್ರೋತ್ಸಾಹದೊಂದಿಗೆ ಕ್ರೀಡಾ ಅಂಕಣಕ್ಕೆ ಇಳಿದ ನಾರಿ ಮಣಿಯರು ಪರಸ್ಪರ ಜಿದ್ದಾಜಿದ್ದಿ ಆಟಕ್ಕೆ ಇಳಿದಿದ್ದಾರೆ. ಅಕ್ಟೋಬರ್ 6 ರಂದು ಚತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಂದ್ರ ಬಾಘೆಲ್ ಅವರು ಗುರುವಾರ ಉದ್ಘಾಟಿಸಿದ ಚತ್ತೀಸ್‌ಗಢ ಒಲಿಂಪಿಕ್ಸ್‌ನ ಒಂದು ಭಾಗವಾಗಿರುವ ಕಬಡ್ಡಿ ಪಂದ್ಯವು 2023ರ ಜನವರಿ 6 ರವರೆಗೆ ನಡೆಯಲಿದೆ. ಹಲವಾರು ಸಾಂಪ್ರದಾಯಿಕ ಕ್ರೀಡೆಗಳು ಆಧುನೀಕರಣ ಮತ್ತು ಜಾಗತೀಕರಣದ ಕಾರಣದಿಂದಾಗಿ ಹಿಂಬದಿಯ ಸ್ಥಾನವನ್ನು ಪಡೆದುಕೊಂಡಿದೆ. ಈ ಕ್ರೀಡೆಗಳನ್ನು ಮುಖ್ಯವಾಹಿನಿಗೆ ಮರಳಿ ತರುವ ಮತ್ತು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಭಾಗ ಇದಾಗಿದೆ.

ಛತ್ತೀಸ್‌ಗಢ ಒಲಿಂಪಿಕ್ಸ್‌ನಲ್ಲಿ ಗಿಲ್ಲಿ ದಂಡಾ, ಪಿಟ್ಟೂಲ್, ಲಾಂಗ್ಡಿ ರನ್, ಬಂಟಿ (ಕಂಚ), ಬಿಲ್ಲಾಸ್, ಫುಗ್ಡಿ ಮತ್ತು ಗೆಡಿ ರೇಸ್‌ನಂತಹ ಕ್ರೀಡೆಗಳು ನಡೆಯಲಿದ್ದು, ಮರೆತು ಹೋಗಿರುವ ಕ್ರೀಡೆಗಳನ್ನು ಮತ್ತೆ ಜರಿಗೆ ಪರಿಚಯಿಸಿ ಅದನ್ನು ಮುಂದುವರಿಸಸಿಕೊಂಡು ಹೋಗಲು ಪ್ರೋತ್ಸಾಹಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳೊಂದಿಗೆ ಆರು ವಿಭಿನ್ನ ಹಂತಗಳಲ್ಲಿ ಈವೆಂಟ್‌ಗಳನ್ನು ಆಡಲಾಗುತ್ತದೆ. ಮಕ್ಕಳಿಂದ ಹಿರಿಯರವರೆಗೆ ಯಾರಾದರೂ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವಿಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Sun, 9 October 22