ಪಾಲಕ್ಕಾಡ್ : ಸಿಗ್ನಲ್ ಜಂಪ್ ಮಾಡಿ ಕಾರು ಹೋಗುವಷ್ಟರ ಹೊತ್ತಿಗೆ ಮುಂಭಾಗದಿಂದ ಬಂದ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದು ದೂರದ ವರೆಗೂ ಎಳೆದೊಯ್ದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸಾವು ನೋವಿನ ಬಗ್ಗೆ ತಿಳಿದುಬಂದಿಲ್ಲ. ಸದ್ಯ ಮೈ ಜುಮ್ಮೆನಿಸುವ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. @DriveSmart_IN ಎಂಬ ಟ್ವಿಟರ್ ಖಾತೆಯಲ್ಲಿ ಏಪ್ರಿಲ್ 26ರಂದು ವಿಡಿಯೋ ಹಂಚಿಕೊಳ್ಳಲಾಗಿದೆ.
ಕಾರು ಚಾಲಕ ತಿರುವಿನ ಮೇಲೆ ಸಿಗ್ನಲ್ ಜಂಪ್ ಮಾಡಿದ ಕಾರಣ ಅಪಘಾತ ಸಂಭವಿಸಿದೆ ಎಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದ ಬಳಕೆದಾರರು ಹೇಳಿದ್ದಾರೆ. ಇದರಿಂದ ಅನಿರೀಕ್ಷಿತವಾಗಿ ಕಾರು ಅಡ್ಡ ಬಂದಿದ್ದರಿಂದ ಬಸ್ ಚಾಲಕನಿಗೆ ವೇಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ ಎಂದು ನೆಟಿಜನ್‌ಗಳು ಸಹ ಚಾಲಕನನ್ನು ದೂರಿದ್ದಾರೆ. ಈ ಘಟನೆಯನ್ನು ಮನೋರಮಾ ನ್ಯೂಸ್ ವರದಿ ಮಾಡಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ