ಅಂಬಾನಿ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ‘ಆಮ್ ಮನೋರಥ’ ಹಬ್ಬದ ಬಗ್ಗೆ ಇಲ್ಲಿದೆ ಮಾಹಿತಿ

ಜಾಮ್‌ನಗರದ ರಿಲಯನ್ಸ್ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿ ಧೀರೂಭಾಯಿ ಅಂಬಾನಿಯವರು ಬೃಹತ್​ ಮಾವಿನ ತೋಟ ನಿರ್ಮಿಸಿದ್ದಾರೆ. ಈ ತೋಟ ಸುಮಾರು 600 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಬೆಳೆಯುವ ವರ್ಷದ ಮೊದಲ ಮಾವಿನ ಹಣ್ಣನ್ನು ಶ್ರೀಕೃಷ್ಣನಿಗೆ ಸಮರ್ಪಿಸುತ್ತಾರೆ ಅಂಬಾನಿ ಕುಟುಂಬ.

ಅಂಬಾನಿ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುವ 'ಆಮ್ ಮನೋರಥ' ಹಬ್ಬದ ಬಗ್ಗೆ ಇಲ್ಲಿದೆ ಮಾಹಿತಿ
Aam Manorath
Follow us
ಅಕ್ಷತಾ ವರ್ಕಾಡಿ
|

Updated on: Apr 28, 2024 | 3:34 PM

ಏಷ್ಯಾದ ಶ್ರೀಮಂತ ವ್ಯಕ್ತಿ ಬಿಲಿಯನೇರ್ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ವ್ಯಾಪಾರ ಸಾಮ್ರಾಜ್ಯದ ಬಗ್ಗೆ ನಿಮಗೆ ತಿಳಿದಿರಲೇಬೇಕು. ರಿಲಯನ್ಸ್ ಇಂಡಸ್ಟ್ರೀಸ್ ಉಡುಪು, ಪೆಟ್ರೋಲ್, ಮೊಬೈಲ್, ರಿಟೇಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಿದೆ. ಆದರೆ ಅಂಬಾನಿ ಕುಟುಂಬ ಮಾವು ಬೆಳೆಯಲ್ಲೂ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ?

ಜಾಮ್‌ನಗರದ ರಿಲಯನ್ಸ್ ರಿಫೈನರಿ ಕಾಂಪ್ಲೆಕ್ಸ್‌ನಲ್ಲಿ ಧೀರೂಭಾಯಿ ಅಂಬಾನಿಯವರು ಬೃಹತ್​ ಮಾವಿನ ತೋಟ ನಿರ್ಮಿಸಿದ್ದಾರೆ. ಈ ತೋಟ ಸುಮಾರು 600 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ ಬೆಳೆಯುವ ಬಹುತೇಕ ಮಾವು ರಫ್ತಾಗುತ್ತದೆ. ಮತ್ತೊಂದು ವಿಶೇಷತೆ ಏನೆಂದರೆ ಇಲ್ಲಿ ಬೆಳೆಯುವ ವರ್ಷದ ಮೊದಲ ಮಾವಿನ ಹಣ್ಣಿಗೆ ವಿಶೇಷ ಸಂಪ್ರದಾಯವಿದೆ. ಶ್ರೀಕೃಷ್ಣನ ಪರಮ ಭಕ್ತರಾದ ಅಂಬಾನಿ ಕುಟುಂಬ ಸಂಪೂರ್ಣವಾಗಿ ಮಾವಿನಿಂದ ಅಲಂಕರಿಸುವ ‘ಆಮ್ ಮನೋರತ್’ ಹಬ್ಬವನ್ನು ಆಚರಿಸುತ್ತಾರೆ.

ಇದನ್ನೂ ಓದಿ: ನೀವು ಧರಿಸುವ ಬಟ್ಟೆಯ ಬಣ್ಣ ರಸ್ತೆ ಅಪಘಾತಕ್ಕೆ ಕಾರಣವಾಗಬಹುದು; ವಿಡಿಯೋ ಇಲ್ಲಿದೆ ನೋಡಿ

ಏನಿದು ‘ಆಮ್ ಮನೋರಥ’ ಹಬ್ಬ?

ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾದಲ್ಲಿ ದೊಡ್ಡ ಶ್ರೀಕೃಷ್ಣ ದೇವಾಲಯವಿದೆ. ಪ್ರತಿ ವರ್ಷ ಅಂಬಾನಿ ಕುಟುಂಬವು ಈ ದೇವಾಲಯದಲ್ಲಿ ‘ಆಮ್ ಮನೋರಥ’ ಹಬ್ಬವನ್ನು ಆಚರಿಸುತ್ತದೆ. ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ‘ಆಮ್ ಮನೋರಥ’ ಸಿದ್ಧತೆಯತ್ತ ಗಮನ ಹರಿಸಿದ್ದಾರೆ. ‘ಆಮ್ ಮನೋರಥ’ ಉತ್ಸವದಲ್ಲಿ, ಮಾವಿನಹಣ್ಣಿನ ಮೊದಲ ಬೆಳೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ. ಆಂಟಿಲಿಯಾದಲ್ಲಿನ ದೇವಾಲಯಗಳನ್ನು ಮಾವಿನ ಹಣ್ಣಿನಿಂದ ಅಲಂಕರಿಸಲಾಗಿದೆ. ಮಾವಿನ ಗೊಂಚಲುಗಳನ್ನು ತಯಾರಿಸಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಹಬ್ಬಕ್ಕೆ ಮಾವಿನ ಹಣ್ಣುಗಳನ್ನು ರಿಲಯನ್ಸ್‌ನ ಜಾಮ್‌ನಗರ ತೋಟದಿಂದ ತರಿಸಲಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ