ಸೀರೆ, ಜಡೆ ಹಿಡಿದು ಬಸ್​ನಲ್ಲಿ ಮಹಿಳೆಯರಿಬ್ಬರ ಮಾರಾಮಾರಿ; ಕಂಗಾಲಾದ ಪ್ರಯಾಣಿಕರು

|

Updated on: Jun 13, 2024 | 12:28 PM

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸ್ಸಿನಲ್ಲಿ ವಾಗ್ವಾದದ ನಂತರ ಇಬ್ಬರು ಮಹಿಳೆಯರು ಪರಸ್ಪರ ಕಪಾಳಮೋಕ್ಷ ಮಾಡುವುದನ್ನು ಮತ್ತು ಜಡೆ ಹಿಡಿದು ಎಳೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್​ ವಿಡಿಯೋ ಇಲ್ಲಿದೆ ನೋಡಿ.

ಸೀರೆ, ಜಡೆ ಹಿಡಿದು ಬಸ್​ನಲ್ಲಿ ಮಹಿಳೆಯರಿಬ್ಬರ ಮಾರಾಮಾರಿ; ಕಂಗಾಲಾದ ಪ್ರಯಾಣಿಕರು
Follow us on

ಹೈದರಾಬಾದ್: ಸಾರ್ವಜನಿಕ ಸಾರಿಗೆಯೊಳಗೆ ಜಗಳಗಳು ಸ್ಫೋಟಗೊಳ್ಳುವ ಅನೇಕ ಘಟನೆಗಳು ಸಾಕಷ್ಟು ಸುದ್ದಿಯಾಗುತ್ತಿರುತ್ತವೆ. ಇದೀಗ ತೆಲಂಗಾಣದಲ್ಲಿ ಅಂತಹ ಮತ್ತೊಂದು ಘಟನೆ ನಡೆದಿದೆ. ಚಲಿಸುತ್ತಿದ್ದ ಬಸ್ಸಿನೊಳಗೆ ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸ್ಸಿನಲ್ಲಿ ವಾಗ್ವಾದದ ನಂತರ ಇಬ್ಬರು ಮಹಿಳೆಯರು ಪರಸ್ಪರ ಕಪಾಳಮೋಕ್ಷ ಮಾಡುವುದನ್ನು ಮತ್ತು ಜಡೆ ಹಿಡಿದು ಎಳೆಯುವುದನ್ನು ಕಾಣಬಹುದು.

@TeluguScribe ಎಂಬ ಟ್ವಿಟರ್​​ ಖಾತೆಯಲ್ಲಿ ಜೂನ್​​ 11ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ರೈಲಿನಲ್ಲಿ ಮಲಗಿಕೊಂಡು ಪ್ರೇಮಿಗಳಿಬ್ಬರ ರೊಮಾನ್ಸ್, ಮುಜುಗರಕ್ಕೊಳಗಾದ ಸಹ ಪ್ರಯಾಣಿಕರು

ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಾಕಷ್ಟು ನೆಟ್ಟಿಗರು “ಇದು ಫ್ರೀ ಬಸ್​​ ಪ್ರಭಾವ ” ಎಂದು ಕಾಮೆಂಟ್​ ಮಾಡಿದ್ದಾರೆ. ಬಸ್ ಹೈದರಾಬಾದ್‌ನಿಂದ ನಾಗರ್ ಕರ್ನೂಲ್‌ಗೆ ಪ್ರಯಾಣಿಸುತ್ತಿದ್ದ ಬಸ್​​ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: