Viral Video: ಫೆವಿಕ್ವಿಕ್ ಕೈಗಳಿಗೆ ಅಂಟಿಕೊಂಡರೆ ಚಿಂತಿಸಬೇಡಿ; ಸಿಂಪಲ್​​ ಟಿಪ್ಸ್​ ಇಲ್ಲಿದೆ

ಫೆವಿಕ್ವಿಕ್ ನಿಮ್ಮ ತ್ವಚೆಯ ಮೇಲೆ ಬಿದ್ದರೆ ಅದನ್ನು ಸುಲಭವಾಗಿ ತೆಗೆದುಹಾಕಲು ಶಿಕ್ಷಕಿಯೊಬ್ಬರು ಸಿಂಪಲ್ ಟ್ರಿಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಮಕ್ಕಳ ಕೈಗೆ ಸಿಕ್ಕಿಹಾಕಿಕೊಂಡಿರುವ ಫೆವಿಕ್ವಿಕ್ ಅನ್ನು ತೆಗೆಯಲು ಸುಲಭವಾದ ಮಾರ್ಗವನ್ನು ಹೇಳಿದ್ದಾರೆ.

Viral Video: ಫೆವಿಕ್ವಿಕ್  ಕೈಗಳಿಗೆ ಅಂಟಿಕೊಂಡರೆ ಚಿಂತಿಸಬೇಡಿ; ಸಿಂಪಲ್​​ ಟಿಪ್ಸ್​ ಇಲ್ಲಿದೆ
Video Viral

Updated on: Mar 12, 2024 | 6:18 PM

ಹೆಚ್ಚಾಗಿ ಚಪ್ಪಲಿಯ ತಳಭಾಗವನ್ನು ಅಂಟಿಸಲು ಅಥವಾ ಬೇರೆ ಯಾವುದೇ ಮುರಿದ ವಸ್ತುಗಳನ್ನು ಜೋಡಿಸಲು ಹೆಚ್ಚಾಗಿ ಫೆವಿಕ್ವಿಕ್ ಅನ್ನು ಬಳಸುವುದುಂಟು. ಆಕಸ್ಮಿಕವಾಗಿ ಫೆವಿಕ್ವಿಕ್ ಕೈಗಳಿಗೆ ಅಂಟಿಕೊಂಡರೆ ಅದನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಆದರೆ ಇನ್ನು ಮುಂದೆ ನೀವು ಚಿಂತಿಸಬೇಕಿಲ್ಲ. ಕೇವಲ ಒಂದೇ ಒಂದು ವಸ್ತು ಬಳಸಿ ಕೈಗೆ ಅಂಟಿಕೊಂಡಿರುವ ಫೆವಿಕ್ವಿಕ್ ಅನ್ನು ತೆಗೆದು ಹಾಕಬಹುದು. ಇದರ ಸಹಾಯದಿಂದ ನೀವು ಫೆವಿಕ್ವಿಕ್ ಅನ್ನು ನಿಮ್ಮ ಚರ್ಮದಿಂದ ಸೆಕೆಂಡುಗಳಲ್ಲಿ ಸುಲಭವಾಗಿ ತೆಗೆದುಹಾಕಬಹುದು.

ಫೆವಿಕ್ವಿಕ್ ನಿಮ್ಮ ತ್ವಚೆಯ ಮೇಲೆ ಬಿದ್ದರೆ ಅದನ್ನು ತೊಡೆದುಹಾಕಲು ಶಿಕ್ಷಕಿಯೊಬ್ಬರು ಸಿಂಪಲ್ ಟ್ರಿಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಮಕ್ಕಳ ಕೈಗೆ ಸಿಕ್ಕಿಹಾಕಿಕೊಂಡಿರುವ ಫೆವಿಕ್ವಿಕ್ ಅನ್ನು ತೆಗೆಯಲು ಸುಲಭವಾದ ಮಾರ್ಗವನ್ನು ಹೇಳಿದ್ದಾರೆ. ನಿಮ್ಮ ಕೈಗೆ ಫೆವಿಕ್ವಿಕ್ ಅಂಟಿಕೊಂಡರೆ, ಪ್ರತಿ ಮನೆಯಲ್ಲೂ ಲಭ್ಯವಿರುವ ವಸ್ತುವನ್ನು ತಕ್ಷಣ ಬಳಸಬೇಕು ಎಂದು ಮಹಿಳೆ ವಿಡಿಯೋದಲ್ಲಿ ಹೇಳಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ಫೆವಿಕ್ವಿಕ್ ಚರ್ಮದ ಮೇಲೆ ಎಲ್ಲಿಯಾದರೂ ಅಂಟಿಕೊಂಡರೆ, ಉಪ್ಪು ಬಳಸಿ ಅಂಟು ತೆಗೆದುಹಾಕಬಹುದು. ಅಲ್ಲದೆ, ನೀವು ನೇಲ್ ಪೇಂಟ್ ರಿಮೂವರ್ ಬಳಸಿ ಅದನ್ನು ತೆಗೆದುಹಾಕಬಹುದು. ಇಷ್ಟೇ ಅಲ್ಲ, ವಿನೆಗರ್ ಚರ್ಮದಿಂದ ಫೆವಿಕ್ವಿಕ್ ಅನ್ನು ತೆಗೆದುಹಾಕಲು ಸಹ ಬಳಸಬಹುದು. ನಿಂಬೆ ಮತ್ತು ಮಾರ್ಗರೀನ್ ಚರ್ಮದಿಂದ ಫೆವಿಕ್ವಿಕ್ ಅನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಪ್ಲೀಸ್​​​ ಸರ್​ ಪಾಸ್ ಮಾಡಿ, ಇಲ್ಲಾಂದ್ರೆ ಮನೇಲಿ ನನ್ಗೆ ಮದ್ವೆ ಮಾಡ್ತಾರೆ, ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿಯ ಕೋರಿಕೆ 

ಫೆವಿಕ್ವಿಕ್ ಅನ್ನು ತೆಗೆದುಹಾಕಲು ನೀವು ಬೆಚ್ಚಗಿನ ನೀರು ಮತ್ತು ಸೋಪ್ ಅನ್ನು ಸಹ ಬಳಸಬಹುದು. ಈ ಮಿಶ್ರಣದಲ್ಲಿ ನಿಮ್ಮ ಕೈಗಳನ್ನು ಸ್ವಲ್ಪ ಸಮಯದವರೆಗೆ ನೆನೆಸಿ ಮತ್ತು ಹತ್ತಿಯಿಂದ ನಿಧಾನವಾಗಿ ತೊಳೆಯಿರಿ. ಸ್ವಲ್ಪ ಸಮಯದ ನಂತರ, ಫೆವಿಕ್ವಿಕ್ ಅನ್ನು ನಿಮ್ಮ ಚರ್ಮದಿಂದ ಸುಲಭವಾಗಿ ತೆಗೆಯಲಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Tue, 12 March 24