Viral Video: ತನ್ನ ಇಷ್ಟದ ಹಾಡು ಕೇಳಿದಾಗ ಈ ಪುಟ್ಟ ಮಗುವಿನ ರಿಯಾಕ್ಷನ್‌ ನೋಡಿ

| Updated By: shruti hegde

Updated on: Sep 19, 2021 | 2:18 PM

ಮುದ್ದಾದ ಮಗುವಿನ ರಿಯಾಕ್ಷನ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಬಹಳಷ್ಟು ಜನರು ವಿಡಿಯೋವನ್ನು ಇಷ್ಟಪಟ್ಟಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಮಗು ಎಷ್ಟು ಮುದ್ದಾಗಿದೆ, ನನಗೆ ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ ಎಂದು ಓರ್ವರು ಹೇಳಿದ್ದಾರೆ.

Viral Video: ತನ್ನ ಇಷ್ಟದ ಹಾಡು ಕೇಳಿದಾಗ ಈ ಪುಟ್ಟ ಮಗುವಿನ ರಿಯಾಕ್ಷನ್‌ ನೋಡಿ
ತನ್ನ ಫೇವರಿಟ್ ಹಾಡು ಕೇಳಿದಾಗ ಈ ಪುಟ್ಟ ಮಗುವಿನ ರಿಯಾಕ್ಷನ್‌ ನೋಡಿ
Follow us on

ಮಕ್ಕಳ ಆಟ, ನಗುವಿನ ಆರಾಧ್ಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅವರ ಕೆಲವು ತುಂಟಾಗಳು ಮನ ಗೆಲ್ಲುತ್ತವೆ. ಮಕ್ಕಳ ಮುಗ್ಧತೆ ಜನರಿಗೆ ಹೆಚ್ಚು ಇಷ್ಟವಾಗವುದು. ಅಂಥಹುದೇ ಒಂದು ಪುಟ್ಟ ಮಗುವಿನ ರಿಯಾಕ್ಷನ್ ಇದೀಗ ಫುಲ್ ವೈರಲ್ ಆಗಿದೆ.

ಸಾಮಾನ್ಯವಾಗಿ ಪುಟ್ಟ ಮಕ್ಕಳಿಗೆ ಹಾಡು ನೃತ್ಯ ಅಂದ್ರೆ ಭಾರೀ ಇಷ್ಟ. ತಮ್ಮ ಫೇವರೇಟ್ ಹಾಡು ಬಂದಾಕ್ಷಣ ಮಕ್ಕಳು ನಗುತ್ತಾರೆ, ಖುಷಿಯಿಂದ ನೃತ್ಯ ಮಾಡುತ್ತಾರೆ. ಕೈಗಳನ್ನು ಕುಣಿಸುತ್ತಾ ಮನರಂಜನೆ ಪಡೆಯುತ್ತಾರೆ. ಅಂತಹುದೇ ಒಂದು ವಿಡಿಯೋ ಇದಾಗಿದ್ದು, ಕಾರಿನಲ್ಲಿ ನಿದ್ದೆಯಲ್ಲಿದ್ದ ಮಗು ತನ್ನ ಫೇವರೇಟ್ ಹಾಡು ಕೇಳಿ ನಿದ್ದೆಯಿಂದ ಎದ್ದು ನೃತ್ಯ ಮಾಡುತ್ತಿದೆ. ಮಗುವಿನ ರಿಯಾಕ್ಷನ್ ನಿಜವಾಗಿಯೂ ಇಷ್ಟವಾಗುವಂತಿದೆ.

ಈ ಮುದ್ದಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಬಹಳಷ್ಟು ಜನರು ವಿಡಿಯೋವನ್ನು ಇಷ್ಟಪಟ್ಟಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಮಗು ಎಷ್ಟು ಮುದ್ದಾಗಿದೆ, ನನಗೆ ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ ಎಂದು ಓರ್ವರು ಹೇಳಿದ್ದರೆ, ಇನ್ನು ಕೆಲವರು, ಆ ಹಅಡಿಗೆ ಮಗುವಿನ ಪ್ರತಿಕ್ರಿಯೆ ತುಂಬಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಈ ಆರಾಧ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಬಳಿಕ ಇನ್ನಿತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿಯೂ ಸಹ ಹರಿದಾಡುತ್ತಿದೆ. ವಿಡಿಯೋ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

Health Tips: ಫ್ರಿಡ್ಜ್​ನಲ್ಲಿ ಹಣ್ಣುಗಳನ್ನಿಟ್ಟು ತಿನ್ನುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

Health Tips: ಥೈರಾಯ್ಡ್​ ಸಮಸ್ಯೆ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

(Video viral sleeping child reaction)

Published On - 2:17 pm, Sun, 19 September 21